ಕೊರೋನಾ ಸೋಂಕಿನ ಒಮಿಕ್ರೋನ್ ರೂಪಾಂತರಿ | ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಸರ್ಕಾರ ಸೂಚನೆ |

November 27, 2021
9:27 PM

ದಕ್ಷಿಣ ಆಫ್ರಿಕಾದಲ್ಲಿ ಗೋಚರಿಸಿರುವ ಕೊರೋನಾ  ರೂಪಾಂತರಿ ಓಮ್ರಿಕಾನ್ ಸೋಂಕು ಬೆಂಗಳೂರಿಗೆ ಆಗಮಿಸಿದ ಇಬ್ಬರಲ್ಲಿ  ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಕ್ರಮ ಕೈಗೊಳ್ಳಲಾಗಿದೆ.

Advertisement

ಕೊರೋನಾ  ರೂಪಾಂತರಿ ಓಮ್ರಿಕಾನ್ ಸೋಂಕು ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ಕೊರೊನಾ ರೂಪಾಂತರಿ ಆತಂಕ ಈಗ ದೇಶಕ್ಕೂ ಎದುರಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 6 ಪ್ರಕರಣಗಳು, ಹಾಂಗ್‌ಕಾಂಗ್‌ನಲ್ಲಿ 1 ಪ್ರಕರಣ ಈಗಾಗಲೇ ಪತ್ತೆಯಾಗಿವೆ.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.  ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಈ ತಿಂಗಳು ಆಗಮಿಸಿದ ಸುಮಾರು 94 ಪ್ರಯಾಣಿಕರ  ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು, ಅದರಲ್ಲಿ  ಎರಡು ಪ್ರಕರಣದಲ್ಲಿ ಓಮಿಕ್ರಾನ್‌ ಸೋಂಕು ಇದೆ ಎಂದು ಶಂಕಿಸಲಾಗಿದೆ. ಹೀಗಾಗಿ ಸದ್ಯ ವಿದೇಶ ಪ್ರಯಾಣದ ಮೇಲೆ ತೀರಾ ನಿಗಾ ಇಡಲಾಗಿದೆ.  ಪ್ರಯಾಣಿಕರು ಮತ್ತು ಅವರ ಸಂಪರ್ಕಗಳ ಸ್ಕ್ರೀನಿಂಗ್ ಮತ್ತು ಪರೀಕ್ಷೆ ಕಟ್ಟುನಿಟ್ಟಾಗಿ ಮಾಡಲಾಗುತ್ತಿದ್ದು , ಕರ್ನಾಟಕ – ಕೇರಳ-ತಮಿಳುನಾಡಿ ಸೇರಿದಂತೆ ಗಡಿಭಾಗದ ಓಡಾಟದ ಕಡೆಗೂ ಕಟ್ಟೆಚ್ಚರ ಇರಿಸಲಾಗಿದೆ.

ಇದರ ಜೊತೆಗೆ ಸರ್ಕಾರಿ ಕಚೇರಿಗಳು, ಮಾಲ್‌ಗಳು, ಹೋಟೆಲ್‌ಗಳು, ಸಿನಿಮಾ ಹಾಲ್‌ಗಳು, ಮೃಗಾಲಯಗಳು, ಈಜುಕೊಳಗಳು ಮತ್ತು ಗ್ರಂಥಾಲಯಗಳಲ್ಲಿ ಕೆಲಸ ಮಾಡುವವರಿಗೆ ಎರಡನೇ ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

ಕೊರೋನಾ ಸೋಂಕಿನ ಒಮಿಕ್ರೋನ್ ರೂಪಾಂತರಿ ಕುರಿತು ಎಚ್ಚರಿಕೆಯಿಂದಿರಲು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.

Advertisement

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಬ್ಬಿಗೆ ದರ ನಿಗದಿ ಮಾಡುವಂತೆ ಭಾಕಿಸಂ ಒತ್ತಾಯ
July 21, 2025
7:11 AM
by: The Rural Mirror ಸುದ್ದಿಜಾಲ
ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ರೈತರಿಗೆ ಸಲಹೆ
July 21, 2025
6:58 AM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ಆರೋಗ್ಯದಲ್ಲಿ ಈ ರಾಶಿಯವರಿಗೆ ಆಹಾರದ ಕ್ರಮದಿಂದ ಲಾಭ
July 21, 2025
6:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group