ದೇಶದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ವೈರಸ್ ಆತಂಕ ಹೆಚ್ಚತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 26 ಜನರಲ್ಲಿ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಈವರೆಗೆ 167 ಜನರಲ್ಲಿ ರೂಪಾಂತರಿ ವೈರಸ್ ಪ್ರಕರ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆಯು 653 ಕ್ಕೆ ಏರಿಕೆಯಾಗಿದೆ. ಇನ್ನು 26 ಜನರು ಸಹ ವಿದೇಶದಿಂದ ಬಂದವರಾಗಿದ್ದು, ಅವರಲ್ಲಿ ಇಬ್ಬರು ಹೈ ರಿಸ್ಕ್ ದೇಶಗಳಿಂದ ಬಂದವರಾಗಿದ್ದಾರೆ. ಅವರಲ್ಲಿ 14 ಪುರುಷರು, 12 ಮಹಿಳೆಯರು ಹಾಗೂ ನಾಲ್ವರು 18 ವರ್ಷದೊಳಗಿನ ಒಳಗಿನವರಾಗಿದ್ದಾರೆ ಹಾಗೂ ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel