ದಿಲ್ಲಿಯಲ್ಲಿ ದಿನನಿತ್ಯವೂ 300 ಕ್ಕೂ ಅಧಿಕ ಒಮಿಕ್ರಾನ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆ ‘ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಕೋವಿಡ್-19 ಸೋಂಕಿತರು ಇರುವುದರಿಂದ ದೆಹಲಿಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಲಾಗಿದೆ. ಶಾಲೆ-ಕಾಲೇಜು, ಸಿನಿಮಾ ಮಂದಿರಗಳು, ಈಜುಕೊಳ, ಮನರಂಜನಾ ಪಾರ್ಕ್ ಮತ್ತು ಕೀಡಾಂಗಣ ಹಾಗೂ ಜಿಮ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಮದುವೆಗಳು ಹಾಗೂ ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಲಾಗಿದ್ದು, ಇತರ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಬ್ಬದ ಸಮಾರಂಭಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಬಸ್ಸು ಹಾಗೂ ದಿಲ್ಲಿ ಮೆಟ್ರೋಗೆ ಶೇ. 50 ರಷ್ಟು ಪ್ರಯಾಣಿಕರ ಮಿತಿ ಹೇರಿದ್ದು, ಅಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು ಎಂದು ವರದಿಯಾಗಿದೆ.
ಮಂಗಳವಾರ ರಾಜಧಾನಿಯಲ್ಲಿ 469 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿರುವರು. ಪಾಸಿಟಿವಿ ದರ ಶೇ. ೦.89 ರಷ್ಟು ದಾಖಲಾಗಿದ್ದ ಕಾರಣ ದೆಹಲಿಯಲ್ಲಿ ಅನೇಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.