Advertisement
ರಾಜ್ಯ

ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ | ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಲಾವಿದರು |

Share

ಒಮಿಕ್ರಾನ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯಾದ್ಯಂತ ನೈಟ್‌ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಈ ಬಗ್ಗೆ  ಸಾರ್ವಜನಿಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಾವಿದರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಕಲೆಗೆ, ಕಲಾವಿದರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement
Advertisement
Advertisement

ಸರಕಾರ ನೈಟ್ ಕರ್ಫ್ಯೂ ಹೇರಿದೊಡನೆ ಆತಂಕಗೊಂಡ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ಬುಕ್ಕಿಂಗ್ ಮಾಡಲಾದ ರೂಮ್‌ಗಳನ್ನು ರದ್ದುಪಡಿಸಿದ್ದು, ಮಾತ್ರವಲ್ಲದೆ ಇದರಿಂದ ಹೋಟೆಲ್ ಮತ್ತು ಲಾಡ್ಜ್ ಮಾಲಕರಿಗೆ ಹೊಡೆತ ಬಿದ್ದಿದೆ.  ಟ್ಯಾಕ್ಸ್ , ಕ್ಯಾಬ್, ಅಟೋ ರಿಕ್ಷಾದ ಚಾಲಕರಿಗೂ ಈ ನೈಟ್ ಕರ್ಫ್ಯೂನಿಂದ ಸಮಸ್ಯೆಯಾಗಿದೆ ಎಂದು ಅಟೋ ಚಾಲಕರು ಹೇಳಿದ್ದಾರೆ.

Advertisement

ದ.ಕ ಜಿಲ್ಲೆಯ ಅದರಲ್ಲೂ ನಗರದ ವ್ಯಾಪಾರ- ವಹಿವಾಟುಗಳು ಚುರುಕುಗೊಳ್ಳತೊಡಗಿದ್ದು ಎರಡು ವರ್ಷದಲ್ಲಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳು ಹೆಣಗಾಡುತ್ತಿರುವಾಗಲೇ ಸರಕಾರದ ಹೊಸ ಆದೇಶವು ವ್ಯಾಪಕ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳಿಗೆ ಮನವಿ
Advertisement

ಈ ನಡುವೆ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಟ ಮೂಲಕ ಕಲಾವಿದರೆಲ್ಲರ ಪರವಾಗಿ ಹಿರಿಯ ಕಲಾವಿದ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಇವರ ಮೂಲಕ ದ.ಕ. ಜಿಲ್ಲಾಧಿಕಾರಿ ಇವರಿಗೆ ಮನವಿ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೆ  ಮನವಿ ನೀಡುವ ವೇಳೆ ಕಲೆಯ ,ಕಲಾವಿದರ  ಬಗ್ಗೆ  ಮಾಹಿತಿ ನೀಡಿ ಮನವಿ ನೀಡಲಾಯಿತು.  ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು  ಮುಂದಿನ ನಿರ್ಧಾರ ಪಡೆಯಲಾಗುವುದು  ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Advertisement

ಆದೇಶದ ಹೊರತಾಗಿ 1 ಗಂಟೆ ಅಥವಾ 2 ಗಂಟೆ ಮಾಡಿ 10-30 ರಿಂದ 11 ರ ಒಳಗೆ ಪ್ರದರ್ಶನ ಮಾಡಿ ಮುಗಿಸಿ ಸರಕಾರಿ ಆದೇಶಕ್ಕೆ ಗೌರವ ನೀಡುವ ಬಗ್ಗೆ ಮಾಹಿತಿ ನೀಡಿದರು.  ಕಾರ್ಯಕ್ರಮ ಮುಗಿದ ಬಳಿಕ ಕಲಾವಿದರು ಮನೆ ಸೇರಲು ಅಡ್ಡಿಯಾಗದಂತೆ ಮೇಳದ ಗುರುತು ಪತ್ರ ಜೊತೆಯಲ್ಲಿರಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು  ಎಂದು ಅಶೋಕ್‌ ಶೆಟ್ಟಿ ಹೇಳಿದರು.

ಈ ಸಂದರ್ಭ ರಂಗಭೂಮಿ, ತುಳು ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸಸಿಹಿತ್ಲು ಮೇಳದ ವ್ಯವಸ್ಥಾಪಕರು ರಾಜೇಶ್ ಗುಜರನ್, ಮಂಗಳಾದೇವಿ ಮೇಳದ ವ್ಯವಸ್ಥಾಪಕರು ಎಸ್. ಎ ವರ್ಕಾಡಿ, ಸಂಚಾಲಕರು ಕಡಬ ದಿನೇಶ್ ರೈ, ಬಪ್ಪನಾಡು ಮೇಳದ ವ್ಯವಸ್ಥಾಪಕರು ವಿನೋದ್ ಕುಮಾರ್ ಬಜ್ಪೆ, ಸುಂಕದಕಟ್ಟೆ ಮೇಳದ ವ್ಯವಸ್ಥಾಪಕರು ಶ್ರೀನಿವಾಸ ಸಾಲ್ಯಾನ್ ಬೊಂದೇಲ್, ಪ್ರಬಂದಕರು ರಮೇಶ್ ಕುಲಶೇಖರ, ನಾಗಶಕ್ತಿ ಮೇಳದ ವ್ಯವಸ್ಥಾಪಕರು ಸಂತೋಷ್ ಶೆಟ್ಟಿ ಕಡ್ತಲ, ಕಲಾವಿದರಾದ ಎಂ ಕೆ ರಮೇಶ್ ಆಚಾರ್ಯ, ಮಿಜಾರು ತಿಮ್ಮಪ್ಪ, ಪ್ರದೀಪ್ ಕೊಡ್ಯಡ್ಕ,. ಕೊಡಪದವು ದಿನೇಶ್ ಶೆಟ್ಟಿಗಾರ್, ಸಂತೋಷ್ ಕರಂಬಾರ್, ಸುದರ್ಶನ್ ಸೂರಿಂಜೆ, ಕಲವಾರು ಬೆಂಕಿನಾತೇಶ್ವರ ಮೇಳದ ಸಂದೇಶ್ ಬಡಗ ಬೆಳ್ಳೂರು, ಹಿರಿಯಡ್ಕ ಮೇಳದ ಭಾಗವತರು ದಯಾನಂದ ಕೋಡಿಕಲ್, ನೃತ್ಯ ಕಲಾವಿದರ ಪರವಾಗಿ ಡಾನ್ಸ್ ಪೇಡರಶನ್  ಪುತ್ತೂರು ಯೂನಿಯನ್ ರಾಜೇಶ್ ವಿಟ್ಲ, ಶಿವಪ್ಪ ಕಳ್ಮಂಜ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

1 day ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

1 day ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

2 days ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

2 days ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

2 days ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago