ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ(Vaikunta Ekadashi). ಧನುರ್ಮಾಸದಲ್ಲಿ(solar month of Dhanu) ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ(Flower Decoration) ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಸೂರ್ಯನು(Sun) ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.
ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ.
ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ ದರ್ಶನದಿಂದ ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11- ಹನ್ನೊಂದು ಇಂದ್ರಿಯಗಳನ್ನು ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.
ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲು ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.
ಮೂಲ – ಡಿಜಿಟಲ್ ಮೀಡಿಯಾ
Vaikuntha Ekadashi is a Hindu occasion and festival. It is primarily observed by Vaishnavas, who regard it to be a special ekadashi. It coincides with Mokshada Ekadashi or Putrada Ekadashi. It is observed on the 11th lunar day of the waxing lunar fortnight of the solar month of Dhanu.