ಕರಾವಳಿ – ಮಲೆನಾಡುಗಳಲ್ಲೂ ವಿಷರಹಿತ ಕೋಸು ಬೆಳೆ…! | ಕಾಸರಗೋಡು – ದಕ, ಉಡುಪಿಗಳಲ್ಲಿ ಕೋಸ್ ಬೆಳೆದ ರೈತರು

May 30, 2024
10:05 PM

ಕೇರಳದಲ್ಲಾಗಲೀ(Kerala) ಕರಾವಳಿ(Coastal), ಮಲೆನಾಡಿನಲ್ಲಾಗಲೀ(Malenadu) ಹೂಕೋಸು(Cauliflower), ಎಲೆಕೋಸು(Cabbage) ಕೃಷಿ(cultivation) ಸಾಧ್ಯವಾಗುವುದಿಲ್ಲ. ಆದರೆ ಕೇರಳ ಕೃಷಿ ವಿಶ್ವವಿದ್ಯಾಲಯದ ಡಾ. ನಾರಾಯಣನ್ ಕುಟ್ಟಿ ( ಈಗ ವಿಶ್ರಾಂತ) ಅವರ ಸತತ ಪ್ರಯತ್ನದಿಂದ ಈಗ ಚಳಿಗಾಲದಲ್ಲಿ ರಾಸಾಯನಿಕ ಬಳಸದೆ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೊಲಿಗಳನ್ನು(Broccoli) ಕೇರಳದಾದ್ಯಂತ ಬೆಳೆಸಲು ಸಾಧ್ಯವಾಗುತ್ತಿದೆ. ಕೋಸುಗಳನ್ನು ವಾಣಿಜ್ಯ(Commercial crop) ಮಟ್ಟದಲ್ಲೂ ಬೆಳೆಯುವವರಿದ್ದಾರೆ. ಕೆಲವರು ಕಾಸರಗೋಡು(Kasargodu) ಜಿಲ್ಲೆಯಲ್ಲೂ ಬೆಳೆದು ಮಾರುತ್ತಾರೆ. ಹಾಗಾಗಿ ಉಕ, ಸಾಗರ, ಸಕ್ಲೇಶಪುರದಲ್ಲೂ ಸಾಧ್ಯ ಅನಿಸುತ್ತಿದೆ.

Advertisement

ಕೆಲವೊಂದು ನಿರ್ದಿಷ್ಟ ತಳಿಗಳು ಮಾತ್ರ ಈ ಪ್ರದೇಶದಲ್ಲಿ ಬೆಳೆ ಕೊಡುತ್ತದೆ. ಈ ತಳಿಗಳಲ್ಲಿ ಹಲವನ್ನು ಕೇಕೃವಿಯವರು ಗುರುತಿಸಿ ಪ್ರಕಟಿಸಿದ್ದಾರೆ. ಆಯ್ಕೆ ಮಾಡುವ ತಳಿ ಬಹಳ ಮುಖ್ಯ. ನಮ್ಮಲ್ಲಿಗೆ ಹೊಂದದ ತಳಿಯಾದರೆ, ಅದು ಎಲೆ ಬೆಳೆಸೀತು ಆದರೆ ಹೂಕೋಸು, ಎಲೆಕೋಸುಗಳ ಖಾದ್ಯ ಭಾಗ ಬೆಳೆಯದು! ನೆಂಟರು – ಸ್ನೇಹಿತರ ಬಳಿ ಹೇಳಿ ಯಾವುದೋ ತಳಿಯ ಬೀಜ ಬಿತ್ತಿ ಬೆಳೆದು ಸೋತವರಿದ್ದಾರೆ.

“ ಈ ಬೆಳೆಗಳಿಗೆ ರಾತ್ರಿ ಸೂಕ್ತ ಉಷ್ಣತೆ ಇರಬೇಕು. ಹಗಲಿನದು ಲೆಕ್ಕವಿಲ್ಲ. 15ರಿಂದ 20 ಡಿಗ್ರಿ ಸೆಲ್ಶಿಯಸ್ ಅತ್ಯುತ್ತಮ. 18ರಿಂದ 22ರ ವರೆಗೂ ನಡೆಯುತ್ತದೆ. ಈ ಉಷ್ಣತೆಯ ಶ್ರೇಣಿ ಇರುವಲ್ಲಿ ಬೆಳೆಸಬಹುದು” ಎನ್ನುತ್ತಾರೆ ನಾರಾಯಣನ್ ಕುಟ್ಟಿ. ಕೋಸಿನದು ಎರಡೂವರೆ ತಿಂಗಳ ಬೆಳೆ. ನವೆಂಬರ್ ಮೊದಲ ವಾರದಲ್ಲಿ ನೆಡಬೇಕು. ದಶಂಬರ ಮೊದಲ ವಾರಕ್ಕಿಂತ ತಡ ಆಗಬಾರದು. ಕಾಸರಗೋಡು, ದಕ, ಉಡುಪಿ ಜಿಲ್ಲೆಗಳಲ್ಲಿ ಮನೆ ಮಟ್ಟಿಗೆ ಕೋಸು ಬೆಳೆದು ಗೆದ್ದವರಿದ್ದಾರೆ. ಉಕ, ಸಾಗರ, ಚಿಕ್ಕಮಗಳೂರು ಊರುಗಳಲ್ಲಿ ಸಾಧ್ಯವೇ? ಹವಾಮಾನದ ಅಂಕಿ-ಅಂಶ ಗಮನಿಸಿದರೆ ಸಾಧ್ಯ. ಕೃಷಿಯ ಪ್ರಯೋಗ ಮಾಡಬೇಕಾದರೆ ಸೂಕ್ತ ತಳಿಯ ಬೀಜ ಬೇಕು. ಅದನ್ನು ಪ್ರೋ ಟ್ರೇಯಲ್ಲಿ ಗಿಡ ಮಾಡಲು ಕಲಿಯಬೇಕು. “ಫೆಬ್ರವರಿ 15ರೊಳಗೆ ಕೊಯ್ಲು ಮುಗಿಯಬೇಕು. ಅನಂತರ ರಾತ್ರಿಯ ಉಷ್ಣತೆ ಏರುತ್ತದೆ” ಎನ್ನುತ್ತಾರೆ ಡಾ. ನಾರಾಯಣನ್ ಕುಟ್ಟಿ. ಪ್ರಯೋಗಕ್ಕೆ ಮುಂದಾಗುವ ಆಸಕ್ತರಿದ್ದಾರೆಯೇ?

ಬರಹ :
ಶ್ರೀ ಪಡ್ರೆ
, ಸಂಪಾದಕರು, ಅಡಿಕೆ ಪತ್ರಿಕೆ ( ತಮ್ಮ ಪೇಸ್‌ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು )

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಪರೇಷನ್ ಸಿಂದೂರ್ – ಪಾಕಿಸ್ತಾನದ ದಾಳಿಗೆ ಭಾರತದ ಪ್ರತ್ಯುತ್ತರ
May 9, 2025
8:00 PM
by: The Rural Mirror ಸುದ್ದಿಜಾಲ
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಳ | ವಾಯುಪಡೆಯ ನೆಲೆಯಿಂದ ಎಚ್ಚರಿಕೆ
May 9, 2025
7:49 PM
by: The Rural Mirror ಸುದ್ದಿಜಾಲ
ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group