ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ | ದ್ವಿತೀಯ ದರ್ಜೆ ಈರುಳ್ಳಿ ಬೆಲೆ 2 ರೂಪಾಯಿಗೆ ಇಳಿಕೆ..! | ಕೃಷಿಕರಿಗೆ ಸಂಕಷ್ಟ… |

June 5, 2023
2:10 PM

 ರೈತರ ಬದುಕೇ ಹಾಗೆ…. ಲಾಭವೋ ನಷ್ಟವೋ  ತಾವು ಬೆಳೆ ಬೆಳೆಯೋದನ್ನು ಮಾತ್ರ ನಿಲ್ಲಿಸೋದಿಲ್ಲ.ತಾನು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವ ಭರವಸೆಯೇ ಕೃಷಿ. ಈಗ ಈರುಳ್ಳಿ ಬೆಳೆಗಾರರಿಗೆ ಈ ಭರವಸೆ ಸ್ವಲ್ಪ ಕಷ್ಟವಾಯಿತು. 30 ರೂಪಾಯಿ ಇದ್ದ ಕೆಜಿ ಈರುಳ್ಳಿ ಬೆಲೆ ಇಳಿಕೆಯಾಗಿದೆ. ದ್ವಿತೀಯ ದರ್ಜೆಯ ಈರುಳ್ಳಿ 2-5 ರೂಪಾಯಿಗೆ ಇಳಿಕೆಯಾದರೆ, ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 5-10 ರೂ. ಗೆ ಮಾರಾಟವಾಗುತ್ತಿದೆ. ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

Advertisement

ಕಳೆದ ಒಂದು ತಿಂಗಳಿಂದ ಈರುಳ್ಳಿ ಬೆಲೆ ಏಕಾಏಕಿ ಕುಸಿತವಾಗುತ್ತಿದೆ.  ಈರುಳ್ಳಿ ಬೆಳಗಾರರಿಗೆ  ಸಂಕಷ್ಟ ಎದುರಾಗಿದೆ. ಏಕಾಏಕಿ ಸೋಮವಾರ , ದುಪ್ಪಟ್ಟು ಪ್ರಮಾಣ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಹೆಚ್ಚು ಈರುಳ್ಳಿ ಮಾರುಕಟ್ಟೆಗೆ  ಬಂದಿರುವ  ಕಾರಣ  ಬೆಲೆ ಕುಸಿತವಾಗಿದೆ. ಇದರಿಂದ  ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ತೆಲುಗು ರಾಜ್ಯಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಸದ್ಯ ಕೆಜಿಗೆ 30 ರೂ.ವರೆಗೆ ಇದೆ, ಆದರೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ಕೆಜಿಗೆ 2 ರೂಪಾಯಿಗೆ ಇಳಿದಿದ್ದು, ಇದರಿಂದ ಈರುಳ್ಳಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಲೀಸಗಾಂವ್ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಕೇವಲ 2 ರಿಂದ 4 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಕ್ವಿಂಟಲ್ ಈರುಳ್ಳಿ ಬೆಲೆ 2,500 ರಿಂದ 3,000ಗೆ ಹಾಕಲಾಗುತ್ತಿದೆ. ವರ್ತಕರು 200 ರಿಂದ 850 ರೂ. ಪಡೆದುಕೊಳ್ತಿದ್ದಾರೆ. ಹೀಗಾಗಿ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿರುವುದರಿಂದ ಮಹಾರಾಷ್ಟ್ರದ ರೈತರು ದಿಕ್ಕೇ ತೋಚದಂತಾಗಿದ್ದಾರೆ.

ಕಳೆದ ವಾರ ಮಳೆಯಾಗಿದ್ದು, ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ಬರುತ್ತಿದೆ. ಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 5-10 ರೂ. ಗೆ ಮಾರಾಟವಾಗುತ್ತಿದ್ದು, ಕಳಪೆ ಈರುಳ್ಳಿ ಬೆಲೆ 2-5 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 10- 12 ರೂ. ಗೆ ಮಾರಾಟವಾಗುತ್ತಿದ್ದು, ದ್ವಿತೀಯ ದರ್ಜೆ ಈರುಳ್ಳಿಗೆ  02-05 ರೂ. ಮಾತ್ರವೇ ಬೆಲೆಯಿದೆ. ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ  ಹೆಚ್ಚು ಈರುಳ್ಳಿ ಬರುತ್ತಿದೆ.ಆದ ಕಾರಣ   ಈರುಳ್ಳಿ ಬೆಲೆ ಇಳಿಕೆಯಾಗಿದೆ.  ರಾಜ್ಯದಲ್ಲಿ ಹೆಚ್ಚು ಮಳೆ ಬರುತ್ತಿರುವ ಕಾರಣ , ರೈತರು ಬೆಳೆ ನಾಶದ ಭಯದಿಂದ ಈರುಳ್ಳಿಯನ್ನು ಹೊರತೆಗೆದು ಮಾರುಕಟ್ಟೆಗೆ ತರುತ್ತಿದ್ದಾರೆ.
ರೈತರು ಈರುಳ್ಳಿ ಬೆಳೆಯಲು ಎಕರೆಗೆ 13ರಿಂದ 15 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಿಂದೆ 250ರಿಂದ 300 ರೂ.ಗೆ ಇದ್ದ ಕೂಲಿ, ಈಗ 500 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರೈತರು ಹೇಳುತ್ತಾರೆ. ವಾತಾವರಣದಲ್ಲಿ ತಾಪಮಾನದ ಹೆಚ್ಚಳ ಕೂಡ ಈರುಳ್ಳಿ ಬೆಳೆ ಇಳುವರಿ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಸರಕಾರ ಕೂಡಲೇ ಸ್ಪಂದಿಸಿ ಬೆಂಬಲ ನೀಡಬೇಕು ಎಂಬುದು ಈರುಳ್ಳಿ ಬೆಳೆಗಾರರ ಆಗ್ರಹವಾಗಿದೆ.
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ
ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ
May 8, 2025
8:46 PM
by: The Rural Mirror ಸುದ್ದಿಜಾಲ
ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ
May 8, 2025
8:32 PM
by: The Rural Mirror ಸುದ್ದಿಜಾಲ
ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |
May 8, 2025
8:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group