ಏರಿದ ಈರುಳ್ಳಿ ಬೆಲೆ | ಗ್ರಾಹಕ ಹಾಗೂ ರೈತ ಇಬ್ಬರಿಗೂ ಕಣ್ಣೀರು | ಬಂಪರ್ ಬೆಲೆ ಇದ್ದಾಗಲೇ ಇಳುವರಿ ಕುಸಿತ |

October 31, 2023
10:51 PM
ಹವಾಮಾನ ವೈಪರೀತ್ಯ ಕಾರಣ ಈರುಳ್ಳಿ ಮೇಲೆ ಪರಿಣಾಮ ಬೀರಿದೆ. ಬೇಡಿಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ, ಧಾರಣೆ ಏರಿಕೆ ಆಗಿದೆ. ಈಗ ರೈತರಿಗೂ ಗ್ರಾಹಕರಿಗೂ ಕಣ್ಣೀರು. ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ..!

ಕಳೆದ 3-4 ತಿಂಗಳ ಹಿಂದೆ ಟೊಮೇಟೊ ಬೆಲೆ ಗಗನಕ್ಕೇರಿ ಗ್ರಾಹಕರ ನಿದ್ದೆ ಕೆಡಿಸಿತ್ತು. ಆದರೆ ರೈತನ ಪಾಲಿಗೆ ವರವಾಗಿ ಪರಿಣಮಿಸಿತ್ತು. ಇದೀಗ ಈರುಳ್ಳಿಯ ಸರದಿ. ಬೆಲೆ ಏರಿದ್ರು ರೈತನಿಗೆ ಯಾವ ಲಾಭನೂ ಸಿಕ್ತಿಲ್ಲ. ಈರುಳ್ಳಿಗೆ ಈಗ ಬಂಪರ್ ಬೆಲೆ(Onion Prices) ಸಿಕ್ತಾ ಇದೆ. ಆದರೆ ಅನ್ನದಾತನ ನೋವು, ಸಂಕಷ್ಟ ಮಾತ್ರ ಇನ್ನೂ ನಿಂತಿಲ್ಲ. ಬಂಪರ್ ಬೆಲೆ ಸಿಕ್ಕ ಖುಷಿ ಇದ್ರೂ ನಗುವ ಹಾಗಿಲ್ಲ. ಹೀಗಾಗಿ ಈರುಳ್ಳಿಗೆ(Onion) ಬಂಪರ್ ರೇಟ್ ಇದ್ರೂ ರೈತರು(Farmers) ಕಣ್ಣೀರು ಹಾಕುವಂತಾಗಿದೆ. ಹೌದು, ಒಂದು ಎಕರೆಗೆ 40-50 ಪಾಕೇಟ್ ಈರುಳ್ಳಿ ಸಿಗುತ್ತಿದ್ದಲ್ಲಿ ಈ ಬಾರಿ ರೈತರಿಗೆ ಸಿಕ್ಕಿದ್ದು ಕೇವಲ 10-15 ಪಾಕೇಟ್ ಮಾತ್ರ. ಹೀಗಾಗಿ ಈರುಳ್ಳಿಗೆ ಖರ್ಚು ಮಾಡಿದಷ್ಟು ಹಣ ಕೂಡ ರೈತನಿಗೆ ದಕ್ಕಿಲ್ಲ.

Advertisement
Advertisement
Advertisement

ಗ್ರಾಹಕರ ಕಣ್ಣಲ್ಲಿ ಮಾತ್ರವಲ್ಲ, ಈಗ ರೈತರ ಕಣ್ಣಲ್ಲೂ ಈರುಳ್ಳಿ ನೀರು ತರಿಸುತ್ತಿದೆ. ಹೌದು, ಬೆಲೆ ಹೆಚ್ಚಳದ ಹೊರತಾಗಿಯೂ ರೈತರು ಬೇಸರದಿಂದ ಇರುವುದು ಗದಗ ಎಪಿಎಂಸಿ ಆವರಣದಲ್ಲಿ ಕಂಡುಬಂತು. ಮಾರ್ಕೆಟ್ ನಲ್ಲಿ 60 ರಿಂದ 70 ರೂಪಾಯಿ ಕೆಜಿ ಈರುಳ್ಳಿ ಮಾರಾಟ ಆಗ್ತಾಯಿದೆ. ಇದು ಗ್ರಾಹಕರ ಕಣ್ಣಲ್ಲೂ ನೀರು ತರಿಸುತ್ತಿದೆ. ಆದ್ರೆ, ಬಂಪರ್ ಬೆಲೆ ಇದ್ರೂ ಕೂಡ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತನ ಕಣ್ಣಲ್ಲೂ ನೀರು ತರಿಸುತ್ತಿದೆ. ಗದಗ ಎಪಿಎಎಂಸಿಯಲ್ಲಿ ಇವತ್ತು ರೈತರ ಈರುಳ್ಳಿಗೆ ಬಂಪರ್ ರೇಟ್ ಸಿಕ್ಕಿದೆ. ಕ್ವಿಂಟಾಲ್ ಈರುಳ್ಳಿಗೆ 4 ರಿಂದ 5 ಸಾವಿರ ರೂಪಾಯಿಗೆ ಹರಾಜಾಗಿದೆ. ಆದ್ರೂ ರೈತರ ಮುಖದಲ್ಲಿ ಸಂತಸ ಇಲ್ಲ. ಕಾರಣ ಒಂದು ಎಕರೆಗೆ ಕನಿಷ್ಠ 40 ರಿಂದ 50 ಪಾಕೇಟ್ ಬರಬೇಕಿದ್ದ ಈರುಳ್ಳಿ ಭೀಕರ ಬರಕ್ಕೆ ಕೇವಲ 10 ರಿಂದ 15 ಪಾಕೇಟ್ ಮಾತ್ರ ಬಂದಿದೆ. ಈ ಕುರಿತು ಅಂತ ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ 5 ಸಾವಿರ ರೇಟ್ ಇದ್ರೂ ನಮಗೆ ಲಾಭವಿಲ್ಲ ಅಂತ ಗೋಳಾಡುತ್ತಿದ್ದಾರೆ. ನಾವು ಬಿತ್ತನೆ ಮಾಡಿದ್ದ, ಕೂಲಿ ಹಾಗೂ ಮಾರ್ಕೆಟ್ ಗೆ ತರುವ ಖರ್ಚು ವೆಚ್ಚವೂ ಬರಲ್ಲ ಅಂತ ರೈತರಾದ ಮಾಧವರೆಡ್ಡಿ, ಉಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ ಎರಡು ವರ್ಷ ಅತಿಯಾದ ಮಳೆಯಿಂದ ಭೂಮಿಯಲ್ಲೇ ಈರುಳ್ಳಿ ಕೊಳೆತು ಹಾಳಾಗಿ ಹೋಗಿದೆ. ಹೀಗಾಗಿ ಈ ವರ್ಷವಾದ್ರೂ ಉತ್ತಮ ಇಳುವರಿ ಬರುತ್ತೆ ಅಂದ್ಕೊಂಡ ರೈತರಿಗೆ ಮಳೆರಾಯ ಕೈಕೊಟ್ಟಿದ್ದಾನೆ. ಭೀಕರ ಬರದಿಂದ ಇಳುವರಿ ಸಂಪೂರ್ಣ ಕುಸಿದು ಹೋಗಿದೆ. ಎಕರೆಗೆ 40-50 ಚೀಲ್ ಬೆಳೆಯುತ್ತಿದ್ದ ರೈತರು ಈಗ 10-15 ಚೀಲ್ ಬೆಳೆದು ಕಂಗಾಲಾಗಿದ್ದಾರೆ. ಈ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸಿಲ್ಲ. ಅನ್ನದಾತರ ಕಣ್ಣಲ್ಲೂ ನೀರು ತರಿಸಿದೆ. ಬೆಲೆ ಹೆಚ್ಚಾಗಿದೆ ಅಂತ ಎಲ್ಲರೂ ಬೊಬ್ಬೆ ಹೊಡೀತಾರೆ. ಆದ್ರೆ, ರೈತನ ಕಷ್ಟ ಕೇಳೋ ಯಾರೂ ಅಂತ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗ್ಲೂ ರೈತರ ಬಗ್ಗೆ ಕಾಳಜಿ ಇದ್ರೆ, ಸರ್ಕಾರಕ್ಕೆ ಜನ ಬೇಕಿದ್ರೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡ್ಲಿ. ಗ್ರಾಹಕರಿಗೆ ಎಷ್ಟು ಬೇಕಾದಷ್ಟು ರೇಟ್ ನಲ್ಲಿ ಮಾರಾಟ ಮಾಡ್ಲಿ ಅಂತ ಕಿಡಿಕಾರಿದ್ದಾರೆ.

Onion prices are now at bumper prices. But the breadwinner's pain and suffering has not stopped yet. Even if you are happy to get a bumper price, you should not laugh. Thus, even though there is a bumper rate for Onion, farmers are in tears. Yes, if they used to get 40-50 pockets of onions per acre, this time the farmers got only 10-15 pockets. Therefore, the farmer does not get the money he spent on onions.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror