ದೇಶದಲ್ಲಿ ಈರುಳ್ಳಿ ದರ ಭಾರಿ ಕುಸಿತ | ಬೆಲೆ ಸಿಗದೆ ಅನ್ನದಾತ ಕಣ್ಣೀರು | ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತ |

February 28, 2023
12:55 PM

ಮಹಾರಾಷ್ಟ್ರದ ರೈತನೊಬ್ಬ 512 ಕೆಜಿ ಈರುಳ್ಳಿ ಮಾರಿ ಕೇವಲ 2 ರೂಪಾಯಿ ಗಳಿಸಿದ್ದ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಷ್ಟೇನಾ ಅನ್ನದಾತನ ಬದುಕು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಸದ್ಯ ದೇಶದಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ.

ಅನೇಕ ದೇಶಗಳಲ್ಲಿ ಹಠಾತ್ ಈರುಳ್ಳಿ ಬಿಕ್ಕಟ್ಟು ಕಂಡುಬಂದಿದೆ. ತಜ್ಞರ ಪ್ರಕಾರ ಈ ವರ್ಷ ಹಲವು ದೇಶಗಳಲ್ಲಿ ಈರುಳ್ಳಿ ಇಳುವರಿ ಉತ್ತಮವಾಗಿಲ್ಲ. ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್‌ನ ವರದಿಗಳು ಕೂಡ ವಿಶ್ವದಾದ್ಯಂತ ಈರುಳ್ಳಿ ಬೆಲೆ ಏರಿಕೆಯನ್ನು ಉಲ್ಲೇಖಿಸಿವೆ. ಅಮೆರಿಕದ ಪರಿಸ್ಥಿತಿಯೂ ತುಂಬಾ ಕೆಟ್ಟದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಮೂಲತಃ, ದಕ್ಷಿಣ ಸ್ಪೇನ್ ಮತ್ತು ಉತ್ತರ ಆಫ್ರಿಕಾದಲ್ಲಿ ಈ ಬಾರಿ ಈರುಳ್ಳಿ ಉತ್ತಮ ಇಳುವರಿಯನ್ನು ಹೊಂದಿಲ್ಲ. ಭಾರತದಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ.

Advertisement
Advertisement

ಕಳೆದ ವರ್ಷ ಪಾಕಿಸ್ತಾನದಲ್ಲಿ ಜಲಪ್ರಳಯ, ಉಕ್ರೇನ್ ಯುದ್ಧ, ಮಧ್ಯ ಏಷ್ಯಾದಲ್ಲಿ ಸಂಭವಿಸಿದ ಭಾರಿ ಹಿಮಪಾತ ಎಲ್ಲವೂ ಬೆಳೆಗಳನ್ನು ನಾಶ ಮಾಡಿತ್ತು. ಉತ್ತರ ಆಫ್ರಿಕಾದಲ್ಲಿ ಬರ ಮತ್ತು ಹೆಚ್ಚುತ್ತಿರುವ ರಸಗೊಬ್ಬರ ಬೆಲೆಗಳಿಂದ ಇಳುವರಿ ಸುಧಾರಿಸಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಮೊರಾಕೊದಲ್ಲಿ ಈರುಳ್ಳಿ ಬೆಳೆಗಳು ಹಾನಿಗೊಳಗಾಗಿದ್ದವು. ಇದು ವಿಶ್ವ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಮಧ್ಯ ಏಷ್ಯಾದ ಹಲವು ದೇಶಗಳಲ್ಲಿ ಈರುಳ್ಳಿ ದಾಸ್ತಾನುಗಳ ಮೇಲೆ ನಿಗಾ ಇರಿಸಲಾಗಿದೆ. ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್‌ಗೆ ಈರುಳ್ಳಿ ರಫ್ತುಗಳನ್ನು ಸಹ ನಿರ್ಬಂಧಿಸಲಾಗಿದೆ.

ವಿಶ್ವದಾದ್ಯಂತ ಈರುಳ್ಳಿ ಕೊರತೆಯಿದೆ, ಆದರೆ ಭಾರತದಲ್ಲಿನ ಚಿತ್ರಣ ವಿರುದ್ಧ ದಿಕ್ಕಿನಲ್ಲಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಈರುಳ್ಳಿ ಇಳುವರಿ ಉತ್ತಮವಾಗಿದೆ. ಇಳುವರಿ ಹೆಚ್ಚಾಗಿದ್ದು ಸೂಕ್ತ ಮಾರುಕಟ್ಟೆ ಸಿಗದೆ ಗೋದಾಮಿನಲ್ಲಿ ಸಾವಿರಾರು ಟನ್ ಈರುಳ್ಳಿ ಕೊಳೆಯುತ್ತಿದೆ. ರೈತರು ಈರುಳ್ಳಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ನಾಸಿಕ್‌ನಿಂದ ಹೆಚ್ಚುವರಿ ಈರುಳ್ಳಿ ತೆಗೆದುಕೊಂಡು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುವಂತೆ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟಕ್ಕೆ ಕೇಂದ್ರ ನಿರ್ದೇಶನ ನೀಡಿದೆ.

ವರದಿ ಪ್ರಕಾರ, ಡಿಸೆಂಬರ್ 26 ರಂದು ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 1,850 ಟಿಕೆ ಇತ್ತು. ಫೆಬ್ರವರಿ ಅಂತ್ಯಕ್ಕೆ 550 ರೂ.ಗೆ ಇಳಿಕೆಯಾಗಿದೆ. ರೈತರ ಆತಂಕ ನಿವಾರಿಸಲು ವಿದೇಶಕ್ಕೆ ಈರುಳ್ಳಿ ರಫ್ತಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ತಿಳಿಸಿದೆ. ಈ ವಾತಾವರಣದಲ್ಲಿ ಈರುಳ್ಳಿ ರಫ್ತು ಆರಂಭವಾದರೆ ರೈತರು ಸ್ವಲ್ಪ ಲಾಭ ಪಡೆಯುವ ನಿರೀಕ್ಷೆ ಇದೆ.

ರೈತರು ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 1 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಅಷ್ಟು ಕಡಿಮೆ ಬೆಲೆಗೆ ಈರುಳ್ಳಿ ಸಿಗುತ್ತಿಲ್ಲ. ದೇಶದ ವಿವಿಧ ನಗರಗಳಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಸರಾಸರಿ ಬೆಲೆ ಕೆಜಿಗೆ 30 ರ ಅಸುಪಾಸಿನಲ್ಲಿದೆ. ಆದ್ದರಿಂದ ಸಾಮಾನ್ಯ ಖರೀದಿದಾರರಿಗೂ ಬೇಸರವಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?
May 20, 2025
9:44 PM
by: The Rural Mirror ಸುದ್ದಿಜಾಲ
ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ
ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |
May 20, 2025
4:17 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ
May 20, 2025
3:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group