ಭಾರತ ದೇಶವೆಂದರೆ ವೈವಿಧ್ಯಮ ಜನರಿಂದ ನೆಲೆಯಾಗಿರವ ದೇಶ, ಸಂಸ್ಕ್ರತಿ, ಸಂಪ್ರದಾಯಗಳ ಬೀಡು. ಬೇರೆ ದೇಶ-ವಿದೇಶದಿಂದಲೂ ಬಾರತದ ಸಂಪ್ರದಾಯವನ್ನು ಸವಿಯಲು ಬರುತ್ತಾರೆ. ಮಾತ್ರವಲ್ಲ ಇಲ್ಲಿನ ಆಹಾರ ಪದ್ಧತಿಯು ಎಲ್ಲರನ್ನೂ ವಿಸ್ಮಯವನ್ನಾಗಿಸುತ್ತದೆ. ಕೆಲವರು ಶುದ್ಧ ಸಸ್ಯಾಹಾರಿಯಾಗಿದ್ದಾರೆ, ಇನ್ನು ಕೆಲವರು ಮಾಂಸಾಹಾರಿಯಾಗಿರುತ್ತಾರೆ, ಮಾಂಸಾಹಾರಿಯು ಸಸ್ಯಾಹಾರಿಯೂ ಎರಡನ್ನು ಇಷ್ಟಪಡುತ್ತಾರೆ. ಆದರೆ ಬಹುತೇಕ ಭಾರತೀಯ ವ್ಯಕ್ತಿಯು ತನ್ನೆಲ್ಲ ಆಡುಗೆಯಲ್ಲೂ ಈರುಳ್ಳಿ, ಬೆಳ್ಳಿಯನ್ನು ಬಳಸುತ್ತದೆ. ಇದು ಎಲ್ಲಾ ಪದಾರ್ಥಗಳಲ್ಲಿ ಪ್ರಮುಖವಾಗಿರತ್ತದೆ ಎಂದರೆ ತಪ್ಪಾಗಲಾರದು. ಆದರೆ ಭಾರತದಲ್ಲಿ ಈ ಒಂದು ನಗರದಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.
ಹೌದು!. ಜಮ್ಮು ಮತ್ತು ಕಾಶ್ಮೀರದ ಕತ್ರಾ ಪಟ್ಟಣದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಬಳಕೆ ಕಡಿಮೆ ಮಾಡಲಾಗಿದೆ. ಏಕೆಂದರೆ ಕತ್ರಾ ಬಹಳ ಮುಖ್ಯವಾದ ಧಾರ್ಮಿಕ ಪಟ್ಟಣವಾಗಿದೆ. ಮಾತಾ ವೈಷ್ಣೋ ದೇವಿ ತೀರ್ಥಯಾತ್ರೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ವಾತಾವರಣ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು, ಇಲ್ಲಿನ ಆಡಳಿತವು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಈ ಸಂಪ್ರದಾಯವನ್ನು ಜೀವಂತವಾಗಿಡುವಲ್ಲಿ ಸ್ಥಳೀಯ ನಿವಾಸಿಗಳು ಸಹ ಪ್ರಮುಖ ಪಾತ್ರ ವಹಿಸುತ್ತಾರೆ. ಆಡಳಿತದ ಜೊತೆಗೆ, ಕತ್ರಾ ನಿವಾಸಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಹ ನಿಷೇಧಿಸುತ್ತಿದ್ದಾರೆ. ಈರುಳ್ಳಿಯಂತಹ ಅಗತ್ಯ ವಸ್ತುಗಳ ಸೇವನೆಯನ್ನು ಸಂಪೂರ್ಣ ನಿಷೇಧಿಸಿದ ಭಾರತದ ಮೊಲ ಪಟ್ಟಣ ಕತ್ರಾ. ಇದು ಕೇವಲ ಧಾರ್ಮಿಕ ನಿರ್ಧರವಲ್ಲ, ಶಿಸ್ತು ಮತ್ತು ಸಾಮೂಹಿಕ ನಂಬಿಕೆಯ ಉದಾಹರಣೆಯಾಗಿದೆ.

