ಜಾನುವಾರುಗಳನ್ನು ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಇನ್ನು ಮುಂದೆ ಆನ್ಲೈನ್ ಪಾಸ್ ಪರ್ಮಿಟ್ ಇದ್ದರೆ ಮಾತ್ರ ಸಾಧ್ಯ. ಕರ್ನಾಟಕ ಜಾನುವಾರುಗಳ ವಧೆ ತಡೆ ಮತ್ತು ಸಂರಕ್ಷಣೆ (ಜಾನುವಾರುಗಳ ಸಾಗಾಣಿಕೆ) (ತಿದ್ದುಪಡಿ) ನಿಯಮಗಳು, 2020ರ ಕರಡನ್ನು ಸಾರ್ವಜನಿಕ ಪರಿಶೀಲನೆಗಾಗಿ ಸರ್ಕಾರ ಆದೇಶ ಹೊರಡಿಸಿದೆ.
ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಯಾವುದೇ ರೀತಿಯ ಸಾರಿಗೆ ಸಾಧನಗಳಲ್ಲಿ ಸಾಗಿಸಲು ಬಳಸುವ ಪ್ರತಿಯೊಬ್ಬ ವ್ಯಕ್ತಿಯು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಡೆದ ಆನ್ಲೈನ್ ಜಾನುವಾರು ಪಾಸ್ ಪರವಾನಗಿ ಇದ್ದರೆ ಮಾತ್ರ ಸಾಗಿಸಲು ಅನುಮತಿ ಎಂದು ಹೊಸ ಕರಡು ನಿಯಮಗಳಲ್ಲಿ ಸರ್ಕಾರ ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel