ಒಂದು ಕೆಜಿ ಅಕ್ಕಿಗೆ ಕೇವಲ 29 ರೂಪಾಯಿ | ಮೊಬೈಲ್ ವ್ಯಾನ್‌ಗಳ ಮೂಲಕ ಮಾರಾಟ | ಎಲ್ಲಿ ಸಿಗುತ್ತೆ..?

February 6, 2024
1:20 PM

ಅಕ್ಕಿ(Rice).. ದಕ್ಷಿಣ ಭಾರತದ(South India) ಬಹುತೇಕರ ದಿನನಿತ್ಯದ ಆಹಾರ(Food). ಆದರೆ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ(Rice Rate). ಆದರೆ ಗ್ರಾಹಕರಿಗೆ(Customer) ಅಕ್ಕಿ ಬೆಲೆ ಬಿಸಿಯಾದ್ರೆ, ರೈತನಿಗೆ(Farmer) ಕನಿಷ್ಠ ಬೆಲೆ ಇಲ್ಲದೆ ಪರದಾಟ. ಮಧ್ಯವರ್ತಿಗಳ(mediator) ಹಾವಳಿಯಿಂದ ರೈತ ಬೆಲೆ ಸಿಗದೆ ವ್ಯಥೆ ಪಟ್ಟರೆ, ಗ್ರಾಹಕ ಅಕ್ಕಿ ಬೆಲೆ ಜಾಸ್ತಿಯಾಗಿ ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ. ಈ ಅವ್ಯವಸ್ಥೆಯಿಂದ ಹೊರ ಬರುವ ಸಲುವಾಗಿ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಗೆ ವಿತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ.

Advertisement
Advertisement

ಇಂದಿನಿಂದ (ಫೆಬ್ರವರಿ 6) 29 ರೂಪಾಯಿಗೆ ಸಿಗಲಿದೆ ಒಂದು ಕೆಜಿ ಅಕ್ಕಿ! ಹೌದು, ಇದು ಆಶ್ಚರ್ಯ ಅನಿಸಿದ್ರೂ ಸತ್ಯ. ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಗೆ ವಿತರಣೆ ಮಾಡುವ ವಿಶೇಷ ಯೋಜನೆಯೊಂದಕ್ಕೆ ಇಂದು ಚಾಲನೆ ದೊರೆಯುತ್ತಿದೆ.

ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡುವ ಉದ್ದೇಶದಿಂದ ಸಂಜೆ 4 ಗಂಟೆಗೆ ಮೊಬೈಲ್ ಅಕ್ಕಿ ವ್ಯಾನ್ ಉದ್ಘಾಟನೆಗೊಳ್ಳಲಿದೆ. ಒಟ್ಟು 25 ಮೊಬೈಲ್ ವ್ಯಾನ್ ಗಳ ಮೂಲಕ ಅಕ್ಕಿ ವಿತರಣೆ ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವ್ಯಾನ್ ಸೇವೆ ದೊರೆಯಲಿದೆ. ಇದನ್ನ ಹೊರತುಪಡಿಸಿ ರಾಜ್ಯಾದ್ಯಂತ 20 ಮೊಬೈಲ್ ವ್ಯಾನ್ಗಳು(Mobile Van) ಸಂಚರಿಸಲಿವೆ.

 

ಈಗಾಗಲೇ ಕಡಲೆಬೇಳೆ ಹಾಗೂ ಗೋಧಿ ಹಿಟ್ಟನ್ನ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಈ ಯೋಜನೆಯ ಮುಂದಿನ ಭಾಗವಾಗಿ ಅಕ್ಕಿಯನ್ನು ವ್ಯಾನ್‌ಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಎಲ್ಲಾ ರಿಲಾಯನ್ಸ್ ಮಾರ್ಟ್ ನಲ್ಲೂ ಮುಂದಿನ ನಾಲ್ಕು ದಿನಗಳ ಕಾಲ 29ರೂಪಾಯಿ ದರದ ಅಕ್ಕಿ ಸಿಗಲಿದೆ. ಆನ್ ಲೈನ್ ಹೋಂ ಡೆಲಿವರಿ ಆ್ಯಪ್‌ಗಳಲ್ಲೂ ಅಕ್ಕಿ ದೊರೆಯಲಿದೆ ಎಂದು ನಾಫೆಡ್ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಮಾಹಿತಿ ನೀಡಿದ್ದಾರೆ.

Advertisement

ಈ ಭಾರತ್ ರೈಸ್ ಅನ್ನು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್)(NAFED), ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಸಿಸಿಎಫ್), ಕೇಂದ್ರೀಯ ಭಂಡಾರ್ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ತಿಳಿದಿದೆ.

  • ಅಂತರ್ಜಾಲ ಮಾಹಿತಿ

From today (February 6), one kg of rice will be available for 29 rupees! Yes, this is surprising but true. A special scheme to buy rice directly from farmers and distribute it at a low price is being launched today.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು
May 22, 2025
6:45 AM
by: ದ ರೂರಲ್ ಮಿರರ್.ಕಾಂ
ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group