ಮುಕ್ತ ಮುಕ್ತ…. ಭಾಗ-1 | ಸಾಧಕ-ಬಾಧಕ | ಅಡಿಕೆಯಲ್ಲಿ ಮುಕ್ತ ವ್ಯಾಪಾರ ಎಂಬ ಮಾರುಕಟ್ಟೆ…! |

August 13, 2023
8:02 PM
ಗೂಗಲ್ ಪೇ ... ಫೋನ್ ಪೇ... "ಮೂಟೆ ಪೇ "ಎಂಬ ಮುಕ್ತ ವ್ಯಾಪಾರ ವಲಯ ಎಂಬ ಅಡಿಕೆ ಮಾರುಕಟ್ಟೆಯ ಬಗ್ಗೆ ಪ್ರಬಂಧ ಅಂಬುತೀರ್ಥ ಬರೆದಿದ್ದಾರೆ. ಅವರ ಅಭಿಪ್ರಾಯ ಇಲ್ಲಿದೆ...

ಅದೊಂದು ತಾಲ್ಲೂಕು ಕೇಂದ್ರ. ಆ ತಾಲೂಕಿನ ಶಾಸಕರು ಸೇರಿದಂತೆ ಪಕ್ಷ ವೊಂದರ ಪ್ರಮುಖ ದೊಡ್ಡ ಕುಳಗಳೆಲ್ಲಾ ಸೇರಿ ಕೆಲವು ವರ್ಷಗಳ ಹಿಂದೆ ಅಡಿಕೆ ಮಾರಾಟಕ್ಕೊಂದು ಸಹಕಾರಿ ಸಂಘ ಮಾಡಿದರು.

Advertisement
Advertisement

ದುರಂತವೇನೆಂದರೆ ಈ ಬೋರ್ಡ್ ಕಮಿಟಿಯ ಸದಸ್ಯರು ತಮ್ಮ ಆಡಳಿತದ ಮಾರಾಟ ಸಂಸ್ಥೆಗೆ ತಾವೇ ನೂರಾರು ಮೂಟೆ ಅಡಿಕೆ ಬೆಳೆಯುವ ದೊಡ್ಡ ರೈತರಾಗಿ ಕೇವಲ ಐದು ಹತ್ತು ಮೂಟೆ ಹಾಕುತ್ತಾರೆ. ಆದರೆ ಷೇರುದಾರ ಸಾಮಾನ್ಯ ರೈತರಿಗೆ ಅವರು ಬೆಳೆದ ಸಂಪೂರ್ಣ ಅಡಿಕೆ ಬೆಳೆಯನ್ನು ತಮ್ಮ ಅಡಿಕೆ ಮಾರಾಟ ಸಹಕಾರಿ ಸಂಸ್ಥೆಗೆ ಮಾರಲು ಒತ್ತಾಯ ಮಾಡುತ್ತಾರೆ.

ಇವತ್ತಿಗೂ ಮ್ಯಾಮ್ಕೋಸು, ಕ್ಯಾಂಪ್ಕೋ  ಸೇರಿದಂತೆ ರೈತರ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಗಳಿಗೆ ಹೆಚ್ಚು ಅಡಿಕೆ ಹಾಕುವವರು ಸಣ್ಣ ಪುಟ್ಟ ಅಡಿಕೆ ಹಿಡುವಳಿದಾರರು. ನಮ್ಮ ಮಲೆನಾಡಿನಲ್ಲಿ ಲಾಗಾಯ್ತಿನಿಂದ ಸಿಪ್ಪೆ ಗೋಟು ಅಡಿಕೆ ಮಾತ್ರ “ಮುಕ್ತ ” ಮಾರುಕಟ್ಟೆ ಯಲ್ಲಿ ಹೆಚ್ಚಿನ ದೊಡ್ಡ ಮತ್ತು ಸಾಮಾನ್ಯ ರೈತರು ಮಾರಾಟ ಮಾಡುತ್ತಾರೆ. ಆದರೆ ನಮ್ಮ ಮಲೆನಾಡಿನ ” ದೊಡ್ಡ ಅಡಿಕೆ ಬೆಳೆಗಾರರು” ಹಿಂದಿನ ಕಾಲದ ಅಡಿಕೆ ತೋಟ ಜಮೀನ್ದಾರು ಪ್ರತಿ ವರ್ಷವೂ ಅಡಿಕೆ ಉತ್ಪತ್ತಿ ಬಂದು ಸಂಸ್ಕರಣೆಯಾದ ನಂತರ ಮಾರಾಟದ ಮೂಟೆ ಮಾಡುವಾಗ “ದೇವಸ್ಥಾನಗಳಿಗೆ ಇಷ್ಟು” ಮನೆಗೆ ಇಷ್ಟು ” ಕೆಲಸದವರಿಗೆ ಕೊಡಲು ಇಷ್ಟು ” ಸಂಭಾವನೆ ಭಟ್ಟರಿಗೆ ಇಷ್ಟು “… ಅಂತ ಡಬ್ಬದಲ್ಲಿ ತೆಗದಿಡುವ ಹಾಗೆ ಈಗ ಅದೇ ಬಗೆಯಲ್ಲಿ ನಮ್ಮ ಕಡೆಯ ಬಹುತೇಕ ದೊಡ್ಡ ಅಡಿಕೆ ಬೆಳೆಗಾರರು ಒಂದು ಹತ್ತು ಹದಿನೈದು ಅಡಿಕೆ ಮೂಟೆ ಉತ್ಪನ್ನವನ್ನು ತಾವು ಷೇರುದಾರರಾಗಿರುವ ವಿವಿಧ ಸಹಕಾರಿ ಅಡಿಕೆ ಮಾರಾಟ ಸಂಘಗಳಿಗೆ ಮೂರು ಐದು ಹತ್ತು ಅಡಿಕೆ ಮೂಟೆಗಳನ್ನ ಕಳಿಸಿ ಉಳಿದ ದೊಡ್ಡ ಸಂಖ್ಯೆಯ ಅಡಿಕೆ ಮೂಟೆಗಳನ್ನ ” ಮುಕ್ತ ” ಮಾರುಕಟ್ಟೆ ಯಲ್ಲಿ ಮಾರಾಟ ಮಾಡುತ್ತಾರೆ.

ಈ ಮುಕ್ತ ಮಾರಾಟ ವ್ಯವಸ್ಥೆಯೇ ಒಂದು ವಿಚಿತ್ರ ವಿಶೇಷ. ಇಲ್ಲಿ ದೊಡ್ಡ ಬೆಳೆಗಾರರ ಮನೆಯಿಂದ ನೇರವಾಗಿ ಅಥವಾ ವ್ಯಾಪಾರಿಯ ಗೋದಾಮಿಗೆ ತಂದು ಅಲ್ಲಿಂದ ನೇರವಾಗಿ ಉತ್ತರ ಭಾರತದ ಗುಟ್ಕಾ ವ್ಯಾಪಾರಿಗೆ ಲಾರಿ ಲೋಡು ಮಾಡಿ ಕಳಿಸಲಾಗುತ್ತದೆ. ಗೂಗಲ್ ಪೇ … ಫೋನ್ ಪೇ… “ಮೂಟೆ ಪೇ “….

ಹೌದು, ನೀವು ಡಿಜಿಟಲ್ ವ್ಯವಹಾರ ದ ಜನಪ್ರಿಯ ಮಾಧ್ಯಮ ಗೂಗಲ್ ಪೇ ಮತ್ತು ಫೋನ್ ಪೇ ಬಗ್ಗೆ ತಿಳಿದಿರುತ್ತೀರಿ. ಆದರೆ ಈ ಅಡಿಕೆ ವ್ಯಾಪಾರ ವ್ಯವಸ್ಥೆ ಯಲ್ಲಿ ” ಮೂಟೆ ಪೇ ” ಎಂಬ ಹಣಕಾಸಿನ ವ್ಯವಸ್ಥೆ ಇದೆ ಎಂದು ನಿಮಗೆ ತಿಳಿದಿದೆಯ…?!

Advertisement

ಹೌದು…, ಅಡಿಕೆ ಮೂಟೆ ಈ ಕಡೆಯಿಂದ ಹೋದ ಲಾರಿ ನಂತರ ಮತ್ತೆ ಹೀಗೆ ಅಡಿಕೆ ಮೂಟೆ ಕೊಂಡೊಯ್ದು ಗಮ್ಯ ತಲುಪಿದ ಮೇಲೆ ಆ ಲಾರಿಗಳು ಮರಳುವಾಗ “ನಿರ್ದಿಷ್ಟ ಲಾರಿಯಲ್ಲಿ” ಮೂಟೆಯ ಲೆಕ್ಕದಲ್ಲಿ “ನೋಟಿನ ಮೂಟೆ” ಬರುತ್ತದೆ. ಇಂತಹ ಮೂಟೆಯಲ್ಲಿ “ಇಷ್ಟು ಹಣ ಇರುತ್ತದೆ’ ಎಂಬುದು ನಿಖರ ಲೆಕ್ಕ.

ಆದರೆ ಇಲ್ಲಿ ಬೆಳೆಗಾರನಿಂದ ಗುಟ್ಕಾ ತಯಾರಕನ ತನಕವೂ ಬರೀ ನಂಬಿಕೆಯ ಮೇಲಿನ ವ್ಯವಹಾರವಷ್ಟೇ. ಇಲ್ಲಿ ರೈತ > ಮದ್ಯವರ್ತಿ > ತಯಾರಿಕಾ ಖರೀದಿದಾರರ ಮದ್ಯೆ ಕೊಂಡಿ ಇರುತ್ತದೆ. ‌ಇದು ಸಂಪೂರ್ಣ ದಾಖಲೆರಹಿತ ವ್ಯವಹಾರ.
ಇಲ್ಲಿನ ಯಾವುದೇ ಒಂದು ಕೊಂಡಿ ತಪ್ಪಿದರೂ ಮಾರಾಟ ಮಾಡಿದ ರೈತ “ಮಧ್ಯವರ್ತಿ” ಸೇರಿದಂತೆ ಯಾರ ಮೇಲೂ ದೂರಲು ಬರೋಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಕೋಟ್ಯಂತರ ಹಣ ಗೋಲ್ ಮಾಲ್ ಆಗುತ್ತದೆ.

ಕೆಲವು ವರ್ಷಗಳ ಹಿಂದೆ ಮಲೆನಾಡಿನ ದೊಡ್ಡ “ಮುಕ್ತ ವ್ಯಾಪಾರಿ ” ಯೊಬ್ಬನ ಸಂಬಂಧಿ ಈ “ಮೂಟೇ ಪೇ ” ಮಾದ್ಯಮ ದ ದೊಡ್ಡ ಪ್ರಮಾಣದ ಮೂಟೆಗಟ್ಟಲೇ (ಕೋಟಿಗಟ್ಟಲೇ) ಹಣ ಲಪಟಾಯಿಸಿದ. ಆದರೆ ಹಣ ಕಳೆದು ಕೊಂಡ ವ್ಯಾಪಾರಿ ಕಾಟಾಚಾರಕ್ಕೆ ತೀರಾ ಚಿಕ್ಕ ಮಟ್ಟದ ಹಣ ಕದ್ದೊಯ್ದಿದ್ದಾರೆ ಅಂತ ಪೋಲಿಸ್ ಠಾಣೆಗೆ ಕಂಪ್ಲೈಂಟ್ ಕೊಟ್ಟಿದ್ದರು.
ಕೇಸು ಮಗುಚಿ ಬಿತ್ತೂ ದುಡ್ಡೂ ಹೋತು… ಪರಿಸ್ಥಿತಿ ಹೀಗಿರುತ್ತದೆ..

ಈಗಲೂ ನಮ್ಮ ಮಲೆನಾಡಿನ ಬಹುತೇಕ ದೊಡ್ಡ ಅಡಿಕೆ ಬೆಳೆಗಾರರು ಈ “ಮುಕ್ತ ವ್ಯಾಪಾರಿ” ಗಳ ಬಳಿಯೇ ವ್ಯಾಪಾರ ಮಾಡುತ್ತಿರುವುದು. ಎಲ್ಲಾದರೂ ಈ ವ್ಯಾವಹಾರಿಕ ಕೊಂಡಿ ತುಂಡಾದರೆ ಆಗ ನಮ್ಮ ಕಡೆಯ ದೊಡ್ಡ ಅಡಿಕೆ ಬೆಳೆಗಾರರು ದೊಡ್ಡ ಪ್ರಮಾಣದ ಹಣ ಕಳೆದುಕೊಳ್ಳುತ್ತಾರೆ. ಮತ್ತು ನಾನು ಇಷ್ಟು ಹಣ “ಹೀಗೆ ಅಡಿಕೆ ವ್ಯಾಪಾರ ಮಾಡಿ ” ಕಳೆದುಕೊಂಡೆ ಎಂದು ಕಾನೂನಾತ್ಮಕ ದೂರು ನೀಡಲು ಅಸಹಾಯಕರಾಗಿರುತ್ತಾರೆ.

ಈ “ಮುಕ್ತ ವ್ಯಾಪಾರ” ದೊಡ್ಡ ಬೆಳೆಗಾರರಿಗೆ ಸಾಕಷ್ಟು ಅನುಕೂಲ ಮಾಡಿ ಕೊಡುತ್ತದೆ. ಬ್ಯಾಂಕ್ ತೆರಿಗೆಯ ಸೋಂಕು ಇಲ್ಲದ ವ್ಯವಹಾರ ಇದಾಗಿರುತ್ತದೆ. ಇಂದಿನ ಅನೇಕ ಅಕ್ರಮ ಹಣಕಾಸು ವಹಿವಾಟಿಗೆ ಇಂತಹ ಲೆಕ್ಕ ಪತ್ರವಿಲ್ಲದ ಹಣ ಬಹಳಷ್ಟು ಅನುಕೂಲ ಮಾಡಿ ಕೊಡುತ್ತದೆ…. ಆದರೆ ಸರ್ಕಾರಕ್ಕೆ ಕೋಟ್ಯಂತರ ಮೊತ್ತದ “ತೆರಿಗೆ ವಂಚನೆ ಯಾಗುತ್ತದೆ” ಇದು ಅತ್ಯಂತ ಅಪಾಯಕಾರಿ ವ್ಯವಹಾರ ಚಟುವಟಿಕೆಯಾಗಿರುತ್ತದೆ. ಏನೇ ನಷ್ಟ ವಾದರೂ ಅದು ನೇರವಾಗಿ “ರೈತನಿಗೇ ” ದುಷ್ಪರಿಣಾಮವಾಗುತ್ತದೆ.  ಏಕೆಂದರೆ ಈ ಮಾದ್ಯಮದಲ್ಲಿ ವ್ಯವಹಾರ ಮಾಡುವ ಬಹುತೇಕ ಅಡಿಕೆ ಬೆಳೆಗಾರರು ಮಧ್ಯವರ್ತಿ ಗಳಿಂದ “ತಕ್ಷಣ ” ಕ್ಕೆ ತಾವು ಮಾರಾಟ ಮಾಡಿದ ಅಡಿಕೆ ಯ ಹಣ ಪಡೆದುಕೊಂಡಿರುವುದಿಲ್ಲ.ಮಧ್ಯವರ್ತಿ ತಾನು ಉತ್ತರ ಭಾರತದ ಅಡಿಕೆ ಖರೀದಿ ದಾರನಿಗೆ ಕಳಿಸಿದ ಅಡಿಕೆ ಗೆ ಆತ ಮರಳಿ ಹಣ (ಮೂಟೇ ಪೇ ) ಕಳಿಸಿದರೆ ಇಲ್ಲಿ ಅಡಿಕೆ ಮಾರಿದ ರೈತನಿಗೆ ಹಣ ಕೊಡುತ್ತಾನೆ.

Advertisement

ಇಲ್ಲ ಅಂದರೆ ಇಲ್ಲ… ನೂರಕ್ಕೆ ನೂರರಷ್ಟು ಒಂದಲ್ಲ ಒಂದು ದಿನ ಇಂದು ಇಲ್ಲಿ ಅಕ್ರಮ ಅಡಿಕೆ ಮಾರಾಟ ಮಾರಾಟಗಾರರಿಗೆ ಮಾರುತ್ತಿರುವವರಿಗೆ ನಮ್ಮ ಕಡೆಯ ದೊಡ್ಡ ಅಡಿಕೆ ಬೆಳೆಗಾರರಿಗೆ “ಟೋಪಿ ಗ್ಯಾರಂಟಿ”…

ಚರ್ಚೆ ಮುಂದುವರಿಸೋಣ……

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು
May 24, 2025
9:56 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror

Join Our Group