ಕಡಬ ತಾಲೂಕಿನಲ್ಲಿ ಕಾಡಾನೆ ದಾಳಿ ಬಳಿಕ ಅರಣ್ಯ ಇಲಾಖೆ ಸಿಬಂದಿಗಳು ಕಾಡಾನೆ ಹಿಡಿಯುವ ಕಾರ್ಯಾಚರನೆ ನಡೆಸಿ ತೆರಳುತ್ತಿದ್ದ ವೇಳೆ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಪೊಲೀಸರು ವಾಹನಗಳ ಮೇಲೆ ಅಪರಿಚಿತರು ಕಲ್ಲೆಸೆದ ಘಟನೆ ನಡೆದಿದೆ.
Video Player
Media error: Format(s) not supported or source(s) not found
Download File: https://theruralmirror.com/wp-content/uploads/2023/02/VID-20230223-WA0064.mp4?_=1ಕಳೆದ ಮೂರು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖಾ ಸಿಬಂದಿಗಳು ಯಶಸ್ಸಾಗಿದ್ದರು. ಹಿಡಿದ ಆನೆಯನ್ನು ಸಾ
ಗಿಸುವ ವೇಳೆ ಆಕ್ರೋಶಗೊಂಡ ಸ್ಥಳೀಯರು ಎಂದು ಶಂಕಿಸಲಾದ ಕೆಲವರು ಒಂದು ಆನೆ ಹಿಡಿದಿದ್ದೀರೀ ಎಂದು ಆಕ್ರೋಶಗೊಂಡರು ಎಂದು ತಿಳಿದುಬಂದಿದೆ. ಕಾರ್ಯಾಚರಣೆ ನಿಲ್ಲಿಸಿಲ್ಲ ನಾಳೆ ಬರುತ್ತೇವೆ ಎಂದು ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಕೆಲವರು ವಾಹನಗಳ ಮೇಲೆ ಕಲ್ಲೆಸೆದರು ಎಂದು ತಿಳಿದುಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel