ರೂರಲ್ ಮಿರರ್ ಡಿಜಿಟಲ್ ಪತ್ರಿಕೆಯನ್ನು ಓದುತ್ತಿದ್ದೆ. ಗುತ್ತಿಗಾರಿನಲ್ಲಿ ನಡೆದ ಅಡಿಕೆ ಎಲೆ ಚುಕ್ಕಿ ರೋಗ ಕಾರಣ ಮತ್ತು ಪರಿಹಾರ ಈ ಬಗ್ಗೆ ವಿಜ್ಞಾನಿ ಡಾ.ಭವಿಷ್ಯ ಅವರ ಭಾಷಣದ ಧ್ವನಿಮುದ್ರಿಕೆಯನ್ನು ಪ್ರಕಟಿಸಿದ್ದರು. ಒಂದು ಗಂಟೆಯಿಂದ ಜಾಸ್ತಿ ಹೊತ್ತು ಬಹಳ ಸುಂದರ ವಿವರಣೆಯ ಮೂಲಕ ವಿಷಯವನ್ನು ಪ್ರಸ್ತುತಪಡಿಸಿದ್ದರು. ವಿಜ್ಞಾನಿಯೊಬ್ಬರು ಈ ರೀತಿ ಮಾತನಾಡಬಲ್ಲರೇ? ಎಂದು ಆಶ್ಚರ್ಯ ಚಕಿತನಾಗಿದ್ದೆ. ಕೆಲ ದಿನದ ಹಿಂದೆ ನಾನು ಬರೆದ ಲೇಖನ ಅಡಿಕೆ ಕೃಷಿಕರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಡವೇ? ಎಂಬುದಕ್ಕೆ ಪೂರಕವಾಗಿತ್ತು ಅವರ ಮಾತುಗಳು.
20 ವರ್ಷಗಳಿಗಿಂತ ಮೊದಲು ಅನೇಕ ಬಾರಿ ವಿಜ್ಞಾನಿಗಳೊಡನೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಅಲ್ಲೆಲ್ಲ ಕೇಳಿದ ಮಾತುಗಳಿಗೂ ಇವರ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಂಡೆ. ಸಾವಯವ ಶಬ್ದವನ್ನು ಬಳಸದೆ ಸಾವಯವಕ್ಕೆ ಪೂರ್ತಿ ಒತ್ತು ಕೊಟ್ಟಂತೆ ಕಂಡಿತು. 16 ಬಗೆಯ ಲವಣಾಂಶದ ಕೊರತೆಯೇ ಅಧಿಕ ಇಳುವರಿಗೆ ಮಾರಕ ಎಂಬ ಪುಂಕಾನುಪುಂಕ ಮಾಹಿತಿಗಳಿಗೆ ಸಂಪೂರ್ಣ ಭಿನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸಿದ್ದರು. ಲವಣಾಂಶಗಳ ವಿವೇಚನಾ ರಹಿತ ಬಳಕೆಯೇ ಎಲ್ಲಾ ರೋಗಗಳ ಮೂಲ ಎಂಬುದನ್ನು ಒತ್ತಿ ಹೇಳಿದ್ದರು. ಸುಲಭವೆಂದು ಬಳಸುವ ಸಂಕೀರ್ಣ ಗೊಬ್ಬರಗಳು ಜೀವನವನ್ನೇ ಸಂಕೀರ್ಣಗೊಳಿಸಬಹುದು ಎಂಬುದನ್ನು ಸುಂದರ ವಿಶ್ಲೇಷಣೆಯೊಂದಿಗೆ ತಿಳಿಸಿದ್ದರು. ಆದರೂ ನನ್ನ ಮನಸ್ಸಿನಲ್ಲಿ ಎದ್ದ ಕೆಲ ಪ್ರಶ್ನೆಗಳನ್ನು ಮುಂದಿರಿಸುವೆ.
1) ನಮ್ಮ ಅಡಿಕೆ ಕೃಷಿಗೆ ಶತಮಾನಗಳ ಇತಿಹಾಸ. ಬಳಸುತ್ತಿದ್ದುದು ಹೆಚ್ಚೆಂದರೆ ಹಟ್ಟಿಗೊಬ್ಬರ ಮಾತ್ರ.ಅದನ್ನು ಬಳಸುತ್ತಿರಬೇಕಾದರೆ ಮಹಾಳಿಯ ಹೊರತಾಗಿ ಹೆಚ್ಚಿನ ರೋಗಲಕ್ಷಣಗಳನ್ನು ಕಾಣುತ್ತಿರಲಿಲ್ಲ. ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಮಾತನಾಡುವಾಗ ಹಟ್ಟಿ ಗೊಬ್ಬರದ ಬಗ್ಗೆ ಚಕಾರ ಎತ್ತಲಿಲ್ಲ ಕಾರಣವೇನು?.
2) ಪೋಷಕಾಂಶಗಳ ವಿವೇಚನಾ ರಹಿತ ಬಳಕೆಯೇ ಖಾಯಿಲೆಗಳ ಮೂಲ ಎಂದು ಹೇಳುವಾಗ, ಒಂದು ಎಕರೆಯಲ್ಲಿ ಒಂದು ಮರಕ್ಕೋ ಎರಡು ಮರಕ್ಕೋ ಮುಂಡುಸಿರಿ ಬಂದರೆ, ಓರೆಗಂಟು ಬಂದರೆ ಆ ಮರಕ್ಕೆ ಮಾತ್ರ ಪೋಷಕಾಂಶಗಳನ್ನು ಬಳಸಬೇಕೆ ವಿನಃ ಇನ್ನುಳಿದ 500ಕ್ಕೂ ಬಳಸುವ ಅಗತ್ಯವಿದೆಯೇ?.ಯಾವುದಕ್ಕೆಲ್ಲ ಔಷಧಿ ಬಿಡುತ್ತೀರಿ! ಕಾಯಿಲೆಗಳು ಹೊಸ ಹೊಸತ್ತು ಬಂದಷ್ಟು ಔಷಧಿಗಳೇ ಉದ್ಯೋಗವಾಗಬಹುದು. ಮಣ್ಣಿನ ಸಂರಕ್ಷಣೆ, ಪರಿಸರದ ಸಂರಕ್ಷಣೆ, ರೋಗನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುವುದು ಮುಂತಾದ ದಾರಿಗಳೇ ಅಂತಿಮ ಪರಿಹಾರ ಎಂಬ ನಿಮ್ಮ ಮಾತು ಸಾರ್ವಕಾಲಿಕ ಸತ್ಯಗಳು. ಆ ದಿಕ್ಕಿನಲ್ಲಿ ಪ್ರಚಾರ ಜಾಸ್ತಿ ಆಗಲಿ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…