ಸಾಮಾನ್ಯ ಜನರೇ ಒಂದು ವಿಷ್ಯ ನೆನಪಿಟ್ಕೊಳ್ಳಿ…! | ಯುವ ಸಮುದಾಯದ ಒಂದು ಯೋಚನೆ… |

March 15, 2023
9:29 AM
ಚುನಾವಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಯೋಚನೆ ಮಾಡಬೇಕಾದ್ದು ಯುವಜನತೆ. ಸರಿಯಾದ ಆಯ್ಕೆ ಆಗಬೇಕು. ಅದು ಅಭಿವೃದ್ಧಿ ಪರವಾದ ಯೋಚನೆ ಇರಬೇಕು. ಈ ಬಗ್ಗೆ ಪೇಸ್‌ ಬುಕ್‌ ನಲ್ಲಿ Environmental Engineering  ಪದವೀಧರೆ ಅಂಜಲಿ ವಾಗ್ಲೆ ತಮ್ಮ ಯೋಚನೆಯನ್ನು ಬರೆದಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ..

ನೋಡಿ ಮಾರ್ರೆ ಎಷ್ಟು ಚಂದ ಉಂಟಲ್ಲ ಈ  ಎರಡು ಫೋಟೋ?. ಯಾರೋ ಆರ್ಟಿಸ್ಟ್ ಮಾಡಿದ ಆರ್ಟ್ ಥರ ಕಾಣ್ತದೆ. ಮುಹೂರ್ತ ಕೂಡಿ ಬರ್ತಿದ್ರೆ ಈ ಪೋಸ್ಟ್ ಎರಡು ವರ್ಷ ಹಿಂದೇನೆ ಹಾಕ್ತಿದ್ದೆ, ಆದ್ರೆ ಕಾಲ ಈಗ ಕೂಡಿ ಬಂದಿದೆ. ಸ್ವಲ್ಪ ಉರಿವ ಬೆಂಕಿಗೆ ತುಪ್ಪ ಹಾಕುವ ಅಂತ ಅನಿಸ್ತಾ ಉಂಟು. 

Advertisement
Advertisement
Advertisement

Advertisement

28 ಜುಲೈ 2021 ರಂದು ಕೊಡಿಯಾಲಬೈಲ್ ಪಿಯು ಕಾಲೇಜು ಎದುರಿಂದ ಹೋಗ್ತಿರುವಾಗ ಈ ಫೋಟೋ ತೆಗ್ದಿದ್ದೆ. ಜೊತೆಗೆ ಇದ್ದ ಅಕ್ಕನ ಹತ್ರ ರೋಡ್ ಅವ್ಯವಸ್ಥೆ ಹೇಳ್ಕೊಂಡು ಬಾಯಿಗೆ ಬಂದಾಗೇ ಬೈದಿದ್ದೆ.After all ಒಂದು ಸಾಮಾನ್ಯ ಹುಡುಗಿ ಮತ್ತೆಂತ  ಮಾಡ್ಲಿಕ್ಕಾಗ್ತದೆ ಅಲ್ವಾ? ನನ್ನ ಹಾಗೆ ಆ ಊರಿನ ಜನ ಎಲ್ಲ ಇದೆ ಥರ ಬೈಕೊಂಡು ಸುಮ್ನೆ ಕೋಪ ತಡ್ಕೊಂಡು ಕೂತಿರ್ತಾರೆ. ಈಗ ಒಂದು ರಾಜಕಾರಣಿಯ ಹೇಳಿಕೆಯಿಂದ ಆ ಸಿಟ್ಟಿನ ಕಟ್ಟೆ ಒಡೆದಿದೆ.  Actually ಇದೊಂದು ಒಳ್ಳೆಯ ಬೆಳವಣಿಗೆ. ಎಲೆಕ್ಷನ್  ಟೈಂಗೆ ಎಂತ ಬೇಕಾದ್ರೂ ಹೇಳಿ ಯಾಮಾರಿಸಲಿಕೆ ಮನೆಮನೆಗೆ ಬರ್ತಾರೆ , ಅದೇ ಎಲೆಕ್ಷನ್ ಮುಗ್ದ್ಮೇಲೆ ಅವ್ರ ಆಶ್ವಾಸನೆಗಳನ್ನು ಅನುಷ್ಠಾನಕ್ಕೆ ತರಿಸಲಿಕೆ ಜನ ತಾಲೂಕ್, ಡಿಸ್ಟ್ರಿಕ್ಟ್ ಆಫೀಸ್ ಅಂತ ಸುತ್ತಬೇಕು, ಇಲ್ಲಾಂದ್ರೆ ಅವ್ರಿಗೆ ಹೋಗಿ ಶಾಲು ಹೊದಿಸಿ ಸನ್ಮಾನ ಮಾಡಿಸಿ ರಿಕ್ವೆಸ್ಟ್ ಮಾಡ್ಸಬೇಕು. ನಮ್ಮ ಊರಿಗೆ ಒಂದು ಕಾಂಕ್ರೀಟ್ ರೋಡ್ ಮಾಡಿಸಿ, ಒಂದು ಟವರ್ ಗೆ ಅಪ್ರೂವಲ್ ಕೊಡಿ, ಒಂದು ಬ್ರಿಜ್ ಕಟ್ಟಿಸಿ ಕೊಡಿ ಅಂತ. ಅದೆಲ್ಲ ಆದ್ಮೇಲೆ 5 ವರ್ಷದ ಟರ್ಮ್ ಅಲ್ಲಿ 3 ವರ್ಷ ಆದ್ಮೇಲೆ ಕಾಂಟ್ರಾಕ್ಟ್ ಕೊಟ್ಟು ಬ್ಯಾಂಡೇಜ್ ಹಾಕಿದ ಹಾಗೆ 200 mtr  ಉದ್ದ ಕಾಂಕ್ರೀಟ್ ಹಾಕಿ ಹೋಗ್ತಾರೆ. ಬೋರ್ಡ್ ಮಾತ್ರ ದೊಡ್ಡದಾಗಿ ಅವ್ರೆ ಕಾಂಕ್ರೀಟ್ ಹಾಕಿಸಿದ ಹಾಗೆ ಹಾಕ್ತಾರೆ, ಮತ್ತೆ ಬೇಕಲ್ಲ 5 ವರ್ಷದ ಎಂಡ್ ಗೆ ಸಾಧನೆ ಲಿಸ್ಟ್ ಅಲ್ಲಿ ಹಾಕ್ಲಿಕೆ, ನಾನು ಅದು ಮಾಡಿದ್ದೇನೆ, ಇದು ಮಾಡಿದ್ದೇನೆ, ಆ ಪಕ್ಷದವರು ಎಂತ ಅಂಬಟೆ ಸ ಕೊಡ್ಲಿಲ್ಲ, ನೀವು ನಮ್ಮ ಪಕ್ಷಕ್ಕೆ ಓಟು ಹಾಕಿ, MLA ಇಲ್ಲದಿದ್ರೂ CM ಮುಖ ನೋಡಿ ವೋಟ್ ಹಾಕಿ ಅಂತ ಬೆಣ್ಣೆ ಹಚ್ತಾರೆ.

ಸಾಮಾನ್ಯ ಜನರೇ ಒಂದು ವಿಷ್ಯ ನೆನಪಿಟ್ಕೊಳ್ಳಿ..! ನಮ್ಮಿಂದ ಎಂತ ಮಾಡ್ಲಿಕೆ ಆಗುದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಅನ್ನುದು ಮೊದ್ಲು ಬಿಡಿ. ನಿಮ್ಮಿಂದ್ಲೇ ಆ ರಾಜಕಾರಣಿಗಳಿಗೆ ದುಡ್ಡಾಗ್ತಿರುದು. ಸಣ್ಣ ಮೊಸರು ಪ್ಯಾಕೆಟ್ ಇಂದ ಹಿಡಿದು ಎಲ್ಲದಕ್ಕೆ ಸಹ ಟ್ಯಾಕ್ಸ್ ಕಟ್ಟುದಿಲ್ವ ನೀವು? ಸ್ವಲ್ಪ ಯೋಚನೆ ಮಾಡಿ.  ಎಲೆಕ್ಷನ್ ಟೈಮ್ ಗೆ ಅವ್ರು ಕೊಡುವ ಪುಕ್ಸಟೆ ಹಣ, ಹೆಂಡ, ಪಾರ್ಟಿ ಗೆ ಎಲ್ಲ ಬೀಳ್ಬೇಡಿ, ದುಡ್ಡಿನ ಅಟ್ಟಿಯನ್ನೇ ಹಾಸಿಗೆ ಮಾಡಿ ಮಲಗ್ತಾರೆ ಅವ್ರು, ನಿಮಿಗೆ ಕೊಡುವ ಜುಜುಬಿ ಸಾವಿರ ರೂಪಾಯಿ ಯಾವ ಲೆಕ್ಕ ಮಾರ್ರೆ? 

Advertisement
ಈ ಪೋಸ್ಟ್ ನೋಡಿದ್ದೀರಾ ಅಂದ್ರೆ ಓದ್ಲಿಕೆ ಬರಿಲಿಕ್ ಬರ್ತದೆ ಅನ್ಕೊಂಡಿದ್ದೇನೆ. ಆದ್ದರಿಂದ ಒಂದು ಸಣ್ಣ ಸಹಾಯ ನಿಮಿಗೆ ನೀವೇ ಮಾಡಿ. ನಿಮ್ಮ ಮಕ್ಲಿಗೆ ಯಾವದೇ ಜಾಬ್ ಬೇಕಿದ್ರೂ ಇಂಟರ್ವ್ಯೂ ಕೊಡ್ಬೇಕು, ಎಕ್ಸಾಮ್ ಬರೀಬೇಕು, ಎಲ್ಲ ಪಾಸ್ ಆದ್ರೆ ಅಷ್ಟೇ ಜಾಬ್, ಪ್ರೈವೇಟ್ ಇಲ್ಲ ಗವರ್ನಮೆಂಟ್ ( ಒಬಿಸಿ, ಜನರಲ್ ಅವ್ರು ಗವರ್ನಮೆಂಟ್ ಜಾಬ್ ಹೆಸರು ಮರ್ತುಬಿಡಿ, ನಮ್ಮ ನಿಮ್ಮ ಹಣೆಬರಹದಲ್ಲಿಲ್ಲ ಅದು ಆಯ್ತಾ) ಮನೆಗೆ ವೋಟ್ ಕೇಳ್ಳಿಕೆ ಬರ್ತಾರಲ್ಲ, ಅವ್ರಿಗೆ ಸಹ ಒಂದ್ ಇಂಟರ್ವ್ಯೂ ತಗೊಳ್ಳಿ. ಭಾರಿ ದೊಡ್ಡ ಕೆಲಸ ಏನಿಲ್ಲ ಅದ್ರಲ್ಲಿ.

1. ನಿಮ್ಮ ಪಕ್ಷದ ಅಭ್ಯರ್ಥಿಯ ಕ್ವಾಲಿಫಿಕೇಷನ್ ಎಂತ?
2. ನಿಮ್ಮ ಪಕ್ಷದ ಅಭ್ಯರ್ತಿದು  ಕ್ರಿಮಿನಲ್ ಕೇಸ್ ಇತ್ತಾ ಯಾವ್ದಾದ್ರು ?
3. ರಾಜಕಾರಣದಲ್ಲಿ ಎಷ್ಟು experience  ಉಂಟು? ( freshers ಗೆ ಸಹ experience ಕೇಳ್ತಾರೆ ನೆನಪಿಟ್ಕೊಳ್ಳಿ ಇದು ಇಂಪಾರ್ಟೆಂಟ್)
4. ನೀವು ನಿಮ್ಮ ಅಭ್ಯರ್ಥಿಯ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಹೆಸರಿಸಿ
5. ನಿಮ್ಮ ಅಭ್ಯರ್ಥಿಗೆ ವೋಟ್ ಹಾಕಿ ಅವ್ರ್ ಸೆಲೆಕ್ಟ್ ಆದ್ರೆ ಈ ಊರಿಗೆ ಎಂತ ಉಪಕಾರ ಆಗ್ತದೆ? ಇಲ್ಲ ಅವ್ರ ಮನೆವ್ರಿಗೆ, ಮಕ್ಕ್ಳಿಗೆ ಲಾಭವ?
6. ನಿಮ್ಮ ಸಿಎಂ, ಪಿಎಂ ಒಳ್ಳೆವ್ರಿರ್ಬೋದು, ಒಳ್ಳೆ ಕೆಲಸ ಮಾಡ್ತಿರ್ಬೋದು, ನೀವೆಂತಾ ಮಾಡ್ತೀರಾ ಅಂತ ಹೇಳಿ, ಸುಳ್ಳು ಆಶ್ವಾಸನೆ ಕೊಡ್ಬೇಡಿ.

Advertisement
ಇದಿಷ್ಟು questions   ಸ್ಯಾಂಪಲ್ ನಾನು ನನ್ನ ಅಮ್ಮನಿಗೆ ಕೇಳ್ಳಿಕೆ ಹೇಳಿದ್ದು, ನೀವು personalise  ಮಾಡ್ಕೊಳ್ಬೋದು.ಇದೆಲ್ಲ ಕೇಳಿದ್ರೆ ಅವ್ರೇನು ಚೇಂಜ್ ಆಗ್ತಾರಾ ಅಂತ ಕೇಳ್ಬೋದು ನೀವು? ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ, ಬುಡಕ್ಕೆ ಬೆಂಕಿ ಮಾತ್ರ ಬೀಳ್ತದೆ ಗ್ಯಾರಂಟಿ. ಸ್ವಾತಂತ್ರ್ಯ ಅಹಿಂಸೆ ಇಂದ ಅಷ್ಟೇ ಬರ್ಲಿಲ್ಲ, ತ್ಯಾಗ ಬಲಿದಾನ, ಕ್ರಾಂತಿಕಾರದಿಂದ ಸಿಕ್ಕಿದೆ ಅದು ಮೊಬೈಲ್ ಇಲ್ಲದ ಕಾಲದಲ್ಲಿ, ಈಗ ಇನ್ನೆಷ್ಟು ಚೇಂಜ್ಸ್ ನಾವು ಮಾಡಬೋದು? ರಾಜಕಾರಣ ಕೆಟ್ಟದ್ದು ಅದ್ಕೆ ಹೋಗ್ಬೇಡ ಅಂತ ನಿಮ್ಮ ಮಕ್ಲಿಗೆ ಹೇಳ್ವ ಬದಲು, ನೀನು ಒಳ್ಳೇವ್ನು/ ಒಳ್ಳೆಯವಳು ಕೆಟ್ಟದ್ದನ್ನ ಒಳ್ಳೇದು ಮಾಡು ಅಂತ ಹೇಳಿ, ಒಳ್ಳೆಯ ಲೀಡರ್ಶಿಪ್ ಕ್ವಾಲಿಟಿ ಇರುವ ಯುವಜನರನ್ನು ನಿರುತ್ಸಾಹಿಸುವ ಬದಲು ಪ್ರೋತ್ಸಾಹಿಸಿ.

ಬರಹ :
ಅಂಜಲಿ ವಾಗ್ಲೆ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಜಗಿಯುವುದರಿಂದ ಆಯಾಸ ದೂರ | ಅಧ್ಯಯನ ವರದಿಗೆ ಪೂರಕ ಮಾಹಿತಿ | ಊಟದ ನಂತರ ಅಡಿಕೆ ಪುಡಿ ಸೇವನೆ ಉತ್ತಮ ಪರಿಣಾಮ |
July 5, 2024
12:43 PM
by: ದ ರೂರಲ್ ಮಿರರ್.ಕಾಂ
ಎಲ್ಲಾದರೂ ಇರು… ಎಂತಾದರು ಇರು…. ಎಂದೆಂದಿಗೂ ನೀ ಮಲೆನಾಡು ಗಿಡ್ಡವಾಗಿರು….
July 5, 2024
11:55 AM
by: ಎ ಪಿ ಸದಾಶಿವ ಮರಿಕೆ
ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಲೀಕೃಷ್ಣ ಕೆ ಜಿ
ಇವರು ಎಲ್ಲಾ ಕುಂದುಕೊರತೆಗಳ ನಡುವೆಯೂ ಮತದಾನ ಮಾಡ್ತಾರೆ…! | ಅವರು ಎಲ್ಲಾ ಸೌಕರ್ಯ ಇದ್ದರೂ ಮತದಾನ ಮಾಡಲಾರರು..!
April 29, 2024
1:59 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror