ಇತ್ತಿಚಿನ ದಿನಗಳಲ್ಲಿ ಅರವತ್ತು ವರ್ಷ ಗಳ ಒಳಗಿನ ಅದರಲ್ಲೂ ಐವತ್ತು ವರ್ಷಗಳ ಕೆಳಗಿನ ಯುವ ಮದ್ಯ ವಯಸ್ಸಿನವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗುತ್ತಿದ್ದಾರೆ.
ಹಗಲೆಲ್ಲಾ ಚೆನ್ನಾಗಿ ಓಡಾಡಿ ಕೆಲಸ ಮಾಡಿ ದವರು ರಾತ್ರಿ ಮಲಗಿ ಬೆಳಗಾಗುವಷ್ಟರಲ್ಲಿ ಇಹ ಲೋಕ ತ್ಯೆಜಿಸಿರುತ್ತಾರೆ…!!
ದಿವಂಗತ ಪುನೀತ್ ರಾಜ್‍ಕುಮಾರ್ ರವರು ವ್ಯಾಯಾಮ ಮಾಡುತ್ತಾ ಹೃದಯ ಸ್ತಂಭನ ಕ್ಕೀಡಾದಂತೆ ಇತ್ತೀಚಿಗೆ ಖ್ಯಾತ ನೇತ್ರ ತಜ್ಞರಾಗಿದ್ದಂತಹ ಡಾ ಭುಜಂಗ ಶೆಟ್ಟಿಯವರು ವ್ಯಾಯಾಮ ಮಾಡುತ್ತಲೇ ಹೃದಯ ಸ್ತಂಭನಕ್ಕೊಳಗಾಗಿ ನಿಧನರಾದರು. ಈ ಡಾಕ್ಟರು ಮಧುಮೇಹ ರೋಗವನ್ನು ಸ್ವತಃ ಅನುಭವಿಸಿ ಈ ಬಗ್ಗೆ ಅಧ್ಯಯನ ಮಾಡಿ ಮಧುಮೇಹ ಕ್ಕೆ ಆಹಾರ ಕ್ರಮದ ಮೂಲಕ ನಿಯಂತ್ರಣದ ಬಗ್ಗೆ ಪುಸ್ತಕ ಮತ್ತು ವೀಡಿಯೋ ಅವತರಣಿಕೆಯನ್ನ ಮಾಡಿದ್ದರು. ವಿಪರ್ಯಾಸವೆಂದರೆ ಡಾಕ್ಟರು ಎಷ್ಟೇ ಜಾಗೃತರಾದರೂ ವಿಧಿ ಅವರನ್ನು ಅನಿರೀಕ್ಷಿತವಾಗಿ ತನ್ನತ್ತ ಸೆಳೆಯಿತು.ವಿಶೇಷ ವೇನೆಂದರೆ ಡಾಕ್ಟರ ತಂದೆ ತಾಯಿ ಯಾರಿಗೂ ಇಲ್ಲದ ಮಧುಮೇಹ ಡಾಕ್ಟರ್ ಭುಜಂಗ ಶೆಟ್ಟಿಯವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಬಂದಿತ್ತು.ಕಾರಣ “ಮಾನಸಿಕ ಒತ್ತಡ”…
ಇದೇ ಬಗೆಯಲ್ಲಿ ” ಮಾನಸಿಕ ಒತ್ತಡ ” ದಿಂದ hereditary ಸಂಬಂಧ ಇಲ್ಲದೆಯೇ “ಮಧುಮೇಹ ” ಕ್ಕೆ ಒಳಗಾದವರಲ್ಲಿ ಪರಿಮಳ ಜಗ್ಗೇಶ್ ರವರೂ ಒಬ್ಬರು. ಅವರೂ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಾವು ಮಧುಮೇಹ ಕ್ಕೆ ತುತ್ತಾಗಿದ್ದು ಈ ಒತ್ತಡ ದ ಕಾರಣದಿಂದಲೇ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಸಕಲ ಖಾಯಿಲೆಗೂ ಮೂಲ ಕಾರಣ ಈ “ಮಾನಸಿಕ ಒತ್ತಡ”… ವಿಪರ್ಯಾಸವೆಂದರೆ ಡಾಕ್ಟರ್ ಭುಜಂಗ ಶೆಟ್ಟಿಯವರಂತಹ ಮಹಾನ್ ಸಾಧಕರಿಗೆ ” ನಾರಾಯಣ ನೇತ್ರಾಲಯ” ದಂತಹ ಅದ್ಭುತವಾದ ಸಂಸ್ಥೆ ಕಟ್ಟುವ ಸಾಹಸದಲ್ಲಿ ಆದ ಒತ್ತಡ . ಇದು ಸಾಧನೆ ಮಾಡುವ ಸಂಧರ್ಭದಲ್ಲಿ ಸಾಮಾನ್ಯವಾಗಿ ಎಲ್ಲಾ ಸಾಧಕರಿಗೂ ಆಗುವ “ಸಕಾರಾತ್ಮಕ ಒತ್ತಡ”.. positive pressure…
ಆದರೆ ನಮ್ಮ ಯುವ ಸಮಾಜ ಇವತ್ತಿನ ಹೇಗಾದರೂ ಗೆಲ್ಲಲೇಬೇಕೆಂಬ ” ಕೆಟ್ಟ ಸ್ಪರ್ಧೆ ” ಗಾಗಿ ನಕಾರಾತ್ಮಕ ಒತ್ತಡ ಕ್ಕೆ ಒಳಗಾಗುತ್ತಿದೆ… negative pressure…. ಈ ನಕಾರಾತ್ಮಕ ಒತ್ತಡ ದ ಮೊದಲ ದುಷ್ಪರಿಣಾಮದಿಂದ ಮಧುಮೇಹ ಮತ್ತು ಹೃದಯದೊತ್ತಡ ಬಿಪಿ ಶುರುವಾಗುತ್ತದೆ. ಇಲ್ಲಿಂದ ನಮ್ಮ ಯುವ ಪೀಳಿಗೆ ದೇಹದ ಒಳಗೆ ಆರೋಗ್ಯ ಕುಸಿಯುತ್ತಾ ಸಾಗುತ್ತಾ ಹೋಗುತ್ತದೆ.ಹಾಗೆಯೇ ಈ ಒಳಗಿನ ಅನಾರೋಗ್ಯದ ಕಾರಣಕ್ಕೆ ಹೊರಗೂ ಆತ್ಮ ವಿಶ್ವಾಸ ಕುಸಿಯುತ್ತದೆ.
ಇದಕ್ಕೆ “ಗೊಬ್ಬರ” ವಾಗುತ್ತಿರುವ ಸಂಗತಿ ಏನೆಂದರೆ.ಇವತ್ತಿನ ಪೆಟ್ರೋಲಿಯಂ ಉಪ ಉತ್ಪನ್ನ ದಿಂದ ತಯಾರಿಸುವ ಅಡಿಗ ಎಣ್ಣೆ, ರಾಸಾಯನಿಕ ಬೆರೆತ ವಿಷಯುಕ್ತ ಹಣ್ಣು ತರಕಾರಿ, ಇವತ್ತು ಮುಟ್ಟಿ ತಿಂದದ್ದೆಲ್ಲಾ ಕಲಬೆರಕೆ ಮತ್ತು ವಿಷ…ಇದರ ಜೊತೆಯಲ್ಲಿ “ಮಾನಸಿಕ ಒತ್ತಡ” ಹೀಗಿದ್ದಾಗ ಮನುಷ್ಯ ಆರೋಗ್ಯ ವಾಗಿರೋದು ಹೇಗೆ…?
ನನ್ನ ತಂದೆಯ ತಾಯಿಯವರು ತೊಂಬತ್ತಾರು ವರ್ಷ ಗಳ ಸುದೀರ್ಘ ವಾಗಿ ಬದುಕಿ ಬಾಳಿದ್ದರು. ಅವರಿಗೆ ಈ ಕಾಲದ ಯಾವುದೇ ಸಾಮಾನ್ಯ ಖಾಯಿಲೆ ಗಳೂ ಇರಲಿಲ್ಲ. ಹಾಗೇಯೇ ನನ್ನ ತಂದೆಯ ಅಣ್ಣ ನನ್ನ ದೊಡ್ಡಪ್ಪ ಕೂಡ ತೊಂಬತ್ತನಾಲ್ಕು ವರ್ಷ ಚೆನ್ನಾಗಿ ಆರೋಗ್ಯ ವಾಗಿ ಬದುಕಿ ಬಾಳಿದ್ದರು. ಇವರ ಆರೋಗ್ಯದ ಗುಟ್ಟೇನೆಂದರೆ .ಅತ್ಯಂತ ಮಿತವಾದ ಕರಾರುವಾಕ್ಕಾದ ಸಮಯಕ್ಕೆ ಸರಿಯಾದ ಊಟ ಮತ್ತು ಅವರ ಜೀವನದಲ್ಲಿ ಸಾಮಾನ್ಯವಾಗಿ ನೆಡೆಯುವ ಆಘಾತ ಮತ್ತು ಸಮಸ್ಯೆ ಯನ್ನು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ.ಇವರ ಸುದೀರ್ಘವಾದ ಹತ್ತು ದಶಕದ ಜೀವನದಲ್ಲಿ ಇವರ ಮಕ್ಕಳು ಮೊಮ್ಮಕ್ಕಳು ಕೂಡ ತೀರಿಕೊಂಡ ಸಂಧರ್ಭಗಳಿತ್ತು. ಇವರಿಗೂ ಕೂಡ ಆರ್ಥಿಕ ಸಂಸಾರಿಕ ಬಿಕ್ಕಟ್ಟು ಇತ್ತು.ಆದರೆ ಯಾವುದನ್ನೂ ಮನಸಿಗೆ ಹಚ್ಚಿ ಕೊಳ್ಳುತ್ತಿರಲಿಲ್ಲ. ಹಾಗಂತ ಇವರು ನಿರ್ಭಾವುಕರೋ ಅಥವಾ ಬೇಜವಾಬ್ದಾರಿ ಗಳೋ ಆಗಿರಲಿಲ್ಲ. ಆದರೆ ಆ ನೋವು ಆಘಾತ ಸಮಸ್ಯೆ ಗಳನ್ನು ಮನಸ್ಸನ್ನು ಕೊರೆದು ಹೃದಯಕ್ಕೆ ಘಾಸಿ ಮಾಡಿಕೊಳ್ಳದೇ ಜೀವನ ಸಾಗಿಸುವ ಕಲೆ ಅವರಿಗೆ ಗೊತ್ತಿತ್ತು.
ಇವತ್ತು ಸರ್ವರೂ ಈ ಕಲೆಯನ್ನು ಕಲಿತು ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತ ಮುತ್ತಲಿನ ಸಮಾಜದಲ್ಲಿ ಇಂತಹ ಅನೇಕ
“ಕುಟುಂಬ ಯೋಗಿಗಳು ” ಕಾಣಸಿಗುತ್ತಾರೆ. ಅವರಿಂದ ಸಾಮಾನ್ಯ ಜನರು ಬಹಳಷ್ಟು ಕಲಿಯುವುದಿದೆ.
ಚಿಕ್ಕ ಪುಟ್ಟ ಸಮಸ್ಯೆಗೂ ಧೃತಿಗೆಟ್ಟು ಮನಸಿಗೆ ಹಚ್ಚಿಕೊಂಡು ಮನಸು ದೇಹದ ಆರೋಗ್ಯ ಕೆಡಿಸಿಕೊಂಡು ಬಿಪಿ ಷುಗರ್ ಕೊನೆಯಲ್ಲಿ ಹೃದಯಾಘಾತ ವಾಗುತ್ತದೆ.
ಈಗ ಪಟ್ಟಣದಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಚಿಕಿತ್ಸಾ ಕೇಂದ್ರ ಗಳು, ಒತ್ತಡ ನಿರ್ವಹಣಾ ಕೇಂದ್ರ ಗಳೂ , ಹೀಲಿಂಗೂ ಪಾಲಿಂಗೂಗಳಿವೆ. ಆದರೆ ಇದನ್ನು ಎಲ್ಲೋ ಹೋಗಿ ಕಲಿಯುವುದಕ್ಕಿಂತ ತನ್ನೊಳಗೇ ತಾನೇ ಧ್ಯಾನ ಮಾಡುವುದು. ಕೋಪ ಮಾಡಿಕೊಳ್ಳದಿರುವುದು, ಒತ್ತಡ ದಿಂದ ಬೇರೆಡೆಗೆ ಮನಸು ಹರಿಸಿ ಮನಸನ್ನ ಶಾಂತತೆಯತ್ತ ಕೊಂಡೊಯ್ಯುವುದು,
ಮುಖ್ಯವಾಗಿ ಮನಸು ಕಹಿ ಘಟನೆ ಯನ್ನು ಜ್ಞಾಪಕ ಮಾಡಿಕೊಳ್ಳುತ್ತಾ ನಕಾರಾತ್ಮಕತೆಯನ್ನ enjoy ಮಾಡುವು ದರಿಂದ ಹೊರಬರುವ ಬುದ್ದಿವಂತಿಕೆ ಯನ್ನು ಕಲಿಯಬೇಕು. ಇದಕ್ಕೆಲ್ಲ ಮಾತ್ರೆ ಔಷಧ ಏನೆಂದರೆ ನಮ್ಮ ನ್ನ ನಮ್ಮ ಮನಸನ್ನ ನಾವೇ ಪ್ರೀತಿಸಿ , ಸಂತೋಷವಾಗಿಡೋದು. ಬನ್ನಿ ವಿನಾ ಕಾರಣ ಸಂತೋಷವಾಗಿರೋಣ. ಒತ್ತಡ ಕ್ಕೊಳಾಗಾಗದಿರೋಣ. ಕೋಪ ಮಾಡಿಕೊಳ್ಳದಿರೋಣ. ಮನಃಪೂರ್ವಕವಾಗಿ ಮೊಗವರಳಿಸಿ ನಗೋಣ.. ನಗುವೇ ನಗ…. ಮತ್ತು ಆರೋಗ್ಯ…