#Coffee | ಕಾಫಿ ಬೆಳಗಾರರಿಗೆ ವ್ಯಾಪಾರ ವೃದ್ಧಿಗೆ ಅವಕಾಶ | ಏಷ್ಯಾದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಫಿ ಸಮ್ಮೇಳನ |

August 1, 2023
10:11 AM
ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಏಷ್ಯಾದಲ್ಲಿ ಮೊದಲಬಾರಿಗೆ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್​ ಅಂಬಾಸಿಡರ್​ ಆಗಿರವ ಟೆನಿಸ್​ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸೃತ ರೋಹನ್​ ಬೋಪಣ್ಣ ಲಾಂಛನ ಅನಾವರಣಗೊಳಿಸಿದರು.

ಕಾಫಿ ಬೆಳೆ ಕರ್ನಾಟಕದಲ್ಲಿ ಬೆಳೆಯುತ್ತಿದೆಯಾದರೂ ಅದಕ್ಕೆ ತಕ್ಕ ಮಾರುಕಟ್ಟೆ, ಉದ್ಯಮ ಬೆಳವಣಿಗೆಗೆ ನಡೆಯುವ ಯೋಜನೆಗಳು ಬೆರಳಿಕೆಯಷ್ಟು ಮಾತ್ರ. ಕರ್ನಾಟಕವನ್ನು ಭಾರತದ ಕಾಫಿ #Coffee ರಾಜಧಾನಿ ಅಂತಾರೆ. ಈ ಬಾರಿ ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶ ಸೃಷ್ಟಿ ಹಾಗೂ ಮಾರುಕಟ್ಟೆಯ ವಿಸ್ತರಣೆಯ ಉದ್ದೇಶದಿಂದ ಏಷ್ಯಾದಲ್ಲಿಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.25 ರಿಂದ 28ರವರೆಗೆ 5ನೇ “ವಿಶ್ವ ಕಾಫಿ ಸಮ್ಮೇಳನ ”#WorldCoffeeConference (WCC 2023)” ಆಯೋಜಿಸಲಾಗಿದೆ.

Advertisement

ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್​ ಅಂಬಾಸಿಡರ್​ ಆಗಿರವ ಟೆನಿಸ್​ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸೃತ ರೋಹನ್​ ಬೋಪಣ್ಣ ಅವರು  ಲಾಂಛನ ಅನಾವರಣಗೊಳಿಸಿದರು. ಭಾರತೀಯ ಕಾಫಿ ಮಂಡಳಿ ಸಿಇಒ ಕೆ.ಜಿ ಜಗದೀಶ್​ ಮಾತನಾಡಿ ಜಾಗತಿಕವಾಗಿ ಕಾಫಿಯ ಆರ್ಥಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ಆಶ್ರಯದಲ್ಲಿ 1963 ರಲ್ಲಿ ಅಂತರಾಷ್ಟ್ರೀಯ ಕಾಫಿ ಸಂಘಟನೆಯನ್ನು (ಐಸಿಒ) ಸ್ಥಾಪಿಸಲಾಯಿತು. 2001ರಲ್ಲಿ ಲಂಡನ್​, ಬೆಜಿಲ್​ನಲ್ಲಿ 2005, ಗ್ವಾಟೆಮಾಲಾದಲ್ಲಿ 2010 ಮತ್ತು ಮತ್ತು ಇಥಿಯೋಪಿಯಾದಲ್ಲಿ ಸಮ್ಮೇಳನ ನಡೆದಿದ್ದವು. ಏಷ್ಯಾದಲ್ಲಿ ಮೊದಲ ಸಮ್ಮೇಳನ ಆಯೋಜಿಸಲಾಗುತ್ತಿದೆ. ಅದರಲ್ಲೂ ಬೆಂಗಳೂರು ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ವಿಶ್ವದಲ್ಲಿ ಭಾರತವು ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ರಪ್ತು ಪ್ರಮಾಣದಲ್ಲಿ ಕರ್ನಾಟಕದ ಕೊಡುಗೆಯು ಶೇ 70ರಷ್ಟಿದೆ. ದೇಶದಲ್ಲಿ ಕರ್ನಾಟಕ ಕಾಫಿ ರಾಜಧಾನಿಯಾಗಿದೆ. ಸಮ್ಮೇಳನದಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ಪ್ರಯೋಜನವಾಗಲಿದೆ. 100 ಮಿಲಿಯನ್ ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯವನ್ನು ಒದಗಿಸುವ 200 ಶತಕೋಟಿ ಮೌಲ್ಯದ ವಿಶ್ವದ ಅತಿದೊಡ್ಡ ವ್ಯಾಪಾರದ ಸರಕು ಕಾಫಿಯಾಗಿದೆ ಎಂದು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಪ್ರಚಾರ ಮಾಡುವ ಮೂಲಕ ಈ ಸಮ್ಮೇಳನವು ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಹಾಗೇ ಮಾರುಕಟ್ಟೆಗಳನ್ನು ಸೃಷ್ಟಿಸಲಿದೆ. ಕಾಫಿ ತೋಟದಿಂದ ಕೆಫೆಗಳವರೆಗೆ ನಮ್ಮ ಪ್ರತಿಭೆಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.

News Source: Online 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಾಲು ಮೊಸರು, ವಿದ್ಯುತ್ ದರ ದುಬಾರಿ | ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ | ರೈತರಿಗೆ ಪ್ರೋತ್ಸಾಹಧನಕ್ಕೆ ನಿರ್ಧಾರ |
April 1, 2025
8:00 AM
by: The Rural Mirror ಸುದ್ದಿಜಾಲ
ವೃಶ್ಚಿಕ ರಾಶಿ ಯುಗಾದಿ ಸಂವತ್ಸರದ ಫಲಗಳು | ಹೇಗಿದೆ ಈ ವರ್ಷ..?
April 1, 2025
7:32 AM
by: ದ ರೂರಲ್ ಮಿರರ್.ಕಾಂ
ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |
April 1, 2025
7:23 AM
by: ಮಹೇಶ್ ಪುಚ್ಚಪ್ಪಾಡಿ
ಏಪ್ರಿಲ್ 3 ಹಾಗೂ 4 ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ | ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
March 31, 2025
11:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group