4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ

April 12, 2025
7:32 AM
ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ ಆದಾಯದ ನಿಟ್ಟಿನಲ್ಲಿ ಅಥವಾ ಪರ್ಯಾಯ ಬೆಳೆಯಾಗಿಯೂ ಕಾಫಿಯನ್ನು ಬೆಳೆಯಬಹುದಾಗಿದೆ.

ಅಂತರರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಕಾಫಿಗೆ  ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕಾಫಿ ಬೆಳೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಕಾಫಿ ತೋಟದ ಪ್ರದೇಶವನ್ನು ಹೆಚ್ಚಿಸಲು ಭಾರತೀಯ ಕಾಫಿ ಮಂಡಳಿ ಯೋಜನೆ ಹಾಕಿಕೊಂಡಿದೆ. ಸದ್ಯ ಭಾರತದಲ್ಲಿ, 4.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟವಿದ್ದು, ಕರ್ನಾಟಕದಲ್ಲಿ 2.2 ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ತೋಟ ಬೆಳೆಯಲಾಗುತ್ತಿದೆ.…..ಮುಂದೆ ಓದಿ….

Advertisement

ದೇಶದಲ್ಲಿ ಕಾಫಿ ಬೇಡಿಕೆ ಹೆಚ್ಚುತ್ತಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಾಫಿಯ ಬೇಡಿಕೆ ಇದೆ. ಹವಾಮಾನ ಹಾಗೂ ಇತರ ಕಾರಣಗಳಿಂದ ನಿರೀಕ್ಷೆಯಂತೆ ಇಳುವರಿಯೂ ಕಡಿಮೆಯಾಗಿದೆ. ಸದ್ಯ ಬೆಳೆ ವಿಸ್ತರಣೆಯೇ ಕಾಫಿ ಹೆಚ್ಚುವರಿಗೆ ಇರುವ ಪ್ರಮುಖವಾದ ಪರಿಹಾರವಾಗಿದೆ. ಹೀಗಾಗಿ ಈಗಾಗಲೇ ಈ ಬಗ್ಗೆ ಅಧ್ಯಯನಗಳು ನಡೆದಿದೆ. ಪಾರಂಪರಿಕವಾಗಿ ಕಾಫಿ ಬೆಳೆಯುವ ಪ್ರದೇಶಗಳು ಮಾತ್ರವಲ್ಲ ಇತರ ಕಡೆಯೂ ಕಾಫಿ ಬೆಳೆಯುವ ಬಗ್ಗೆ , ಸೂಕ್ತ ವಾತಾವರಣದ ಬಗ್ಗೆ ಗಮನಿಸಲಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಫಿ ಬೆಳೆಯುವ ಪ್ರದೇಶವು ಕೊಡಗು, ಚಿಕ್ಕಮಗಳೂರು ಎಂದು ಗುರಿತಿಸಲಾಗಿದೆ. ಅಲ್ಲೆಲ್ಲಾ ಗರಿಷ್ಟ ಮಟ್ಟವನ್ನು ತಲಪಿದೆ, ಗುಣಮಟ್ಟದ ಕಾಫಿ ಬೆಳೆಯನ್ನೂ ಪಡೆಯಲಾಗುತ್ತಿದೆ. ಹವಾಮಾನವನ್ನು ಗಮನಿಸಿ ದಕ್ಷಿಣ ಕನ್ನಡದ  ಪುತ್ತೂರು, ಸುಳ್ಯ, ಬೆಳ್ತಂಗಡಿ ಪ್ರದೇಶದಲ್ಲಿಯೂ ಕಾಫಿ ಬೆಳೆಯಬಹುದಾಗಿದೆ ಎಂದು ವರದಿ ಇದೆ. ಸಾಮಾನ್ಯವಾಗಿ ಕರಾವಳಿ ಪ್ರದೇಶಗಳು ಕಾಫಿ ಕೃಷಿಗೆ ಸೂಕ್ತವಲ್ಲದಿದ್ದರೂ, ಗಾಳಿಯಲ್ಲಿನ ಲವಣಾಂಶ ಮತ್ತು ತೇವಾಂಶದಿಂದಾಗಿ, ಕಾಫಿ ಬೆಳೆಯು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಈಗ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗವು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ್ದರಿಂದ ಕಾಫಿ ಬೆಳೆಗೆ ಶಿಫಾರಸು ಮಾಡಬಹುದಾಗಿದೆ. ಹೀಗಾಗಿ ಅಡಿಕೆಯ ಜೊತೆಗೆ ಇದೊಂದು ಉಪ ಬೆಳೆಯಾಗಬಹುದು.…..ಮುಂದೆ ಓದಿ….

ನಮ್ಮ WhatsApp Channel ಸೇರಲು ಇಲ್ಲಿ ಕ್ಲಿಕ್‌ ಮಾಡಿರಿ..

ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ ಎಂಬ ಅಂಶವನ್ನು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಈಶಾನ್ಯ ಭಾರತದಲ್ಲಿಯೂ ಸಹ ಅಡಿಕೆ ತೋಟಗಳು ಹೆಚ್ಚುತ್ತಿವೆ, ಹೀಗಾಗಿ ಅಡಿಕೆ ಬೆಳೆಗಾರರು ಉಪ ಆದಾಯದ ನಿಟ್ಟಿನಲ್ಲಿ ಅಥವಾ ಪರ್ಯಾಯ ಬೆಳೆಯಾಗಿಯೂ ಕಾಫಿಯನ್ನು ಬೆಳೆಯಲು ಶಿಫಾರಸು ಮಾಡಲಾಗಿದೆ.  ಹೀಗಾಗಿ ವಿವರವಾದ ಯೋಜನಾ ಪ್ರಸ್ತಾವನೆಯನ್ನು ಸಿದ್ಧಪಡಿಸಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮುಂದೆ ಅನುಮೋದನೆಗಾಗಿ ಇಡಲಾಗಿದೆ.

ಸಿದ್ಧಪಡಿಸಲಾಗುತ್ತಿರುವ ಕಾರ್ಯ ಯೋಜನೆಯಲ್ಲಿ, ಕಾಫಿ ತೋಟದ ಪ್ರದೇಶವನ್ನು ಹೆಚ್ಚಿಸುವುದು ಒಂದು ಅಂಶವಾಗಿದೆ. ಮಂಡಳಿಯು ಈಶಾನ್ಯ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ವಿಸ್ತರಣೆಯ ಬಗ್ಗೆ ಆದ್ಯತೆ ನೀಡುತ್ತಿದೆ ಎಂದು ಮಾಹಿತಿ ಇದೆ. ಈ ಬಗ್ಗೆ TOI ವರದಿ ಮಾಡಿದೆ. ದೇಶದಲ್ಲಿ ಕಾಫಿ ಕೃಷಿಯನ್ನು ಇನ್ನೂ 4 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಿಸಲು ಅವಕಾಶವಿದೆ. ಕಾಫಿ ಮಂಡಳಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಅರೇಬಿಕಾ ಕಾಫಿಯ ಕೃಷಿಯನ್ನು ಉತ್ತೇಜಿಸುತ್ತಿದೆ, ಜಾಗತಿಕವಾಗಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ ಎಂದೂ ವರದಿಯಾಗಿದೆ. ಸಾಮಾನ್ಯವಾಗಿ ಸಮುದ್ರಮಟ್ಟದಿಂದ 500-800 ಮೀಟರ್ ಎತ್ತರದ ಪ್ರದೇಶಗಳು ರೋಬಸ್ಟಾ ಕಾಫಿಗೆ ಸೂಕ್ತವಾಗಿವೆ ಮತ್ತು 800 ಮೀಟರ್‌ಗಿಂತ ಹೆಚ್ಚಿನ ಎತ್ತರದ ಪ್ರದೇಶಗಳು ಅರೇಬಿಕಾ ಕಾಫಿಗೆ ಸೂಕ್ತವಾಗಿವೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್
ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |
April 16, 2025
7:52 AM
by: The Rural Mirror ಸುದ್ದಿಜಾಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |
April 16, 2025
7:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group