ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಕೃಷಿಗೆ ಶೋಭಾ ಕರಂದ್ಲಾಜೆ ಕರೆ

October 31, 2026
7:22 AM
ಮಣ್ಣಿನ ಫಲವತ್ತತೆ ಮತ್ತು ಮಾನವ ಆರೋಗ್ಯ ಕಾಪಾಡಲು ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಹಾಗೂ ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ. ಬೆಂಗಳೂರಿನ ಐಐಎಚ್‌ಆರ್‌ನಲ್ಲಿ ನಡೆದ ‘ಭೂಮಿ ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮಣ್ಣಿನ ಫಲವತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ರೈತರು ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಮತ್ತು ವಿಷಕಾರಿ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರೈತರಿಗೆ ಕರೆ ನೀಡಿದ್ದಾರೆ.

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ನಡೆದ ಪಿಎಂ-ಕಿಸಾನ್ ಮತ್ತು ‘ಭೂಮಿ ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ರೈತರೂ ಭೂಮಿಯ ಸಂರಕ್ಷಣೆಗೆ ಶ್ರಮಿಸಬೇಕು. ಕೃಷಿ ಭೂಮಿಗೆ ರಾಸಾಯನಿಕಯುಕ್ತ ವಿಷವನ್ನು ಉಣಿಸುವುದನ್ನು ನಿಲ್ಲಿಸಬೇಕು. ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜತೆಗೆ ಮನುಷ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರೈತರು ತಮ್ಮ ಜಮೀನಿನಲ್ಲಿ ಸಾಧ್ಯವಾದಷ್ಟು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ಕೃಷಿ ವಿಧಾನಗಳನ್ನು ಅನುಸರಿಸಬೇಕು. ಉತ್ತಮ ಇಳುವರಿ ನೀಡುವ ಗಿಡಗಳನ್ನು ಬೆಳೆಸುವ ಮೂಲಕ ಕೃಷಿಯ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಣ್ಣಿನ ಫಲವತ್ತತೆ, ಕೃಷಿಯ ಸುಸ್ಥಿರತೆ ಮತ್ತು ರೈತರ ಆರೋಗ್ಯವನ್ನು ಕಾಪಾಡುವಲ್ಲಿ ಸಾವಯವ ಕೃಷಿ ಹಾಗೂ ಮಣ್ಣಿನ ಸಂರಕ್ಷಣಾ ಪದ್ಧತಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಸಂದೇಶವನ್ನು ‘ಭೂಮಿ ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ನೀಡಲಾಯಿತು.

Union Minister Shobha Karandlaje has urged farmers to adopt organic farming practices and reduce the use of chemical inputs to protect soil fertility. Speaking at the PM-KISAN and Save Soil Movement programme at ICAR-IIHR in Hessaraghatta, Bengaluru, she highlighted the adverse effects of excessive chemical use on soil and human health. She also encouraged farmers to focus on low-cost cultivation methods, improve productivity and make effective use of PM-KISAN financial assistance.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ತೋಟಗಳಲ್ಲಿ ಡ್ರೋನ್ ಸಿಂಪಡಣೆ – ವೈಜ್ಞಾನಿಕ ಮಾರ್ಗಸೂಚಿ ರೂಪಿಸಿದ ಸಿಪಿಸಿಆರ್‌ಐ
October 31, 2026
7:17 AM
by: ದ ರೂರಲ್ ಮಿರರ್.ಕಾಂ
ರೈತರ ಖಾತೆಗೆ ₹2,000 – ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ
October 30, 2026
3:54 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-10-2026 | ಕರ್ನಾಟಕದಲ್ಲಿ ನವೆಂಬರ್ 1 ರಿಂದ ಮತ್ತೆ ಮಳೆ ಆರಂಭದ ಸಾಧ್ಯತೆ
October 30, 2026
10:30 AM
by: ಸಾಯಿಶೇಖರ್ ಕರಿಕಳ
ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಬಿಗಿ ಕ್ರಮ – 17.78 ಲಕ್ಷ ಕೆಜಿ ಪಡಿತರ ಸಾಮಗ್ರಿ ಜಪ್ತಿ
October 30, 2026
7:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror