“ವಿಷಮುಕ್ತ ಆಹಾರ ಆಂದೋಲನ”ದ ಅಂಗವಾಗಿ ಸಾವಯವ ಕೈತೋಟ ತರಬೇತಿ | ಸರ್ಟಿಫಿಕೇಟ್ ಕೋರ್ಸ್

November 10, 2023
12:03 PM
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರು "ವಿಷಮುಕ್ತ ಆಹಾರ ಆಂದೋಲನದ ಅಂಗವಾಗಿ ಸಾವಯವ ಕೈತೋಟ ತರಬೇತಿ" ಮತ್ತು ಸರ್ಟಿಫಿಕೇಟ್ ಕೋರ್ಸ್ ನಡೆಯಲಿದೆ.

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರು “ವಿಷಮುಕ್ತ ಆಹಾರ ಆಂದೋಲನದ(Toxic Free Food Movement) ಅಂಗವಾಗಿ ಸಾವಯವ ಕೈತೋಟ ತರಬೇತಿ”(Organic Horticulture Training) ಮತ್ತು ಸರ್ಟಿಫಿಕೇಟ್ ಕೋರ್ಸ್(Certificate course) ನ್ನು  ನವಂಬರ್ 26, ಡಿಸೆಂಬರ್ 3, 10, 17 ರ  ನಾಲ್ಕು ಭಾನುವಾರಗಳಲ್ಲಿ ತರಗತಿ ಪಾಠ ಮತ್ತು ಕ್ಷೇತ್ರಪ್ರಾಯೋಗಿಕ ತರಬೇತಿ ತರಗತಿಯನ್ನು ನಡೆಸಲಿದ್ದಾರೆ.

Advertisement
Advertisement

ಸಾವಯವ ಕೃಷಿಕ ಗ್ರಾಹಕ ಬಳಗ( ರಿ) ಮಂಗಳೂರು ಮತ್ತು ಶ್ರೀಭಾರತೀ ಸಮೂಹ ಸಂಸ್ಥೆಗಳು ನಂತೂರು ಇವರುಗಳ ಆಶ್ರಯದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ)ಮಂಗಳೂರು(Mangaluru) (ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ) ಸಹಕಾರ ಹಾಗೂ ಸಹಯೋಗದಿಂದ ನಡೆಯಲಿದೆ.

ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಮಹಾನಗರ ವ್ಯಾಪ್ತಿ ಪ್ರದೇಶದಲ್ಲಿ ಕಳೆದ ಹತ್ತುವರ್ಷಗಳಿಂದ ವಿಷಮುಕ್ತ ಅನ್ನದ ಬಟ್ಟಲು ಮಾಡಬೇಕೆಂಬ ಉದ್ದೇಶದಿಂದ ವಿವಿಧ ಆಯಾಮಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ. ನಾವು ನಿತ್ಯ ಬಳಸುವ ವಿವಿಧ ಆಹಾರ ವಸ್ತುಗಳಲ್ಲಿ ಕಲಬೆರೆಕೆಯ ಸಮಸ್ಯೆ ಒಂದಾದರೆ ಬೇಸಾಯ ಇಳುವರಿ ಹೆಚ್ಚಿಸುವ ಸ್ವಾರ್ಥ ಲಾಭದ ಅಪೇಕ್ಷೆಯಿಂದ ಬಳಸಬಾರದ ವಿವಿಧ ರೀತಿಯ ರಾಸಾಯನಿಕ ಬಳಸಿ ಬೆಳೆಸಿದ ವಿವಿಧ ತರಕಾರಿಗಳು , ಹಣ್ಣು ಹಂಪಲುಗಳು ನಮ್ಮ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತಿರುವ ಪರಿ ಇನ್ನೊಂದು ಕಡೆ. ಈ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿ ನಮ್ಮ ನಮ್ಮ ಮನೆಯ ಸಣ್ಣ ಸಣ್ಣ ಜಾಗಗಳಲ್ಲಿ ಕೈತೋಟ ಕೃಷಿಯನ್ನು ಮಾಡುವ ಅತೀ ಸುಲಭ ಮತ್ತು ಸರಳ ವಿಧಾನಗಳನ್ನು ತಿಳಿಹೇಳುವ, ಕಲಿಸುವ 4 ಭಾನುವಾರಗಳ ಸರಣಿ ತರಬೇತಿ ಕಾರ್ಯಕ್ರಮ ಈ ಕೆಳಕಂಡಂತೆ ನಡೆಯಲಿದೆ.

ತರಬೇತಿಯ ಉದ್ಧೇಶಗಳು:

  • ಆಹಾರದ ಮೂಲಕ ನಮ್ಮ ದೇಹಕ್ಕೆ ಸೇರುತ್ತಿರುವ ವಿಷಗಳ ಬಗ್ಗೆ ಅರಿವು ಮೂಡಿಸುವುದು
  • ಸಾವಯವ ಕೈತೋಟ ಕೃಷಿಯ ಬಗ್ಗೆ ಜನರಲ್ಲಿ(ವಿಶೇಷವಾಗಿ ಯುವ ಜನಾಂಗಕ್ಕೆ) ಆಸಕ್ತಿ ಮೂಡಿಸುವುದು
  • ಸಾವಯವ ಕೃಷಿ ಪ್ರಚುರ ಪಡಿಸುವ ದೃಷ್ಟಿಯಿಂದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವುದು
  • ಜನರಿಗೆ ಸಾವಯವ ಕೃಷಿಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅವಕಾಶವನ್ನು ಒದಗಿಸುವುದು
  • ಜನರನ್ನು ಇನ್ನೂ ಹೆಚ್ಚು ಹೆಚ್ಚು ಪರಿಸರ ಸ್ನೇಹಿಯಾಗಲು , ಆರೋಗ್ಯವಂತರಾಗಲು ಉತ್ತೇಜಿಸುವುದು,
  • ಅತಿಯಾದ ರಾಸಾಯನಿಕ ಬಳಕೆಯಿಂದ ಬರಡಾಗುತ್ತಿರುವ ನಮ್ಮ ಭೂಮಿಯನ್ನು ಪುನಃಶ್ಚೇತನಗೊಳಿಸುವುದು

ಈ ಶಿಬಿರದ ಫಲಿತಾಂಶ

Advertisement
  •  ಈ ತರಬೇತಿಯ ಕೊನೆಯಲ್ಲಿ ಅಭ್ಯರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ವಿಷಮುಕ್ತ ಅಡಿಗೆ ಮಾಡಲು ಧೃಡ ಸಂಕಲ್ಪ ಮಾಡಬಲ್ಲರು
  •  ತಮ್ಮ ತಮ್ಮ ಮನೆಯಲ್ಲಿ ಇದ್ದಷ್ಟು ಜಾಗದಲ್ಲಿ ಸ್ವಲ್ಪವಾದರೂ ಸಾವಯವ ರೀತಿಯಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯಬಲ್ಲರು
  •  ತಮ್ಮ ಸುತ್ತ ಮುತ್ತ ಜನರಲ್ಲಿ ಸಾವಯವದ ಅನುಕೂಲ ಮತ್ತು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಬಲ್ಲರು ಮತ್ತು ಸಾವಯವ ಕೃಷಿಯೆಡೆಗೆ ಪ್ರಚೋದಿಸಬಲ್ಲರು

ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಸೂಚನೆಗಳು

  • ಒಮ್ಮೆ ಸೇರಿದ ನಂತರ ಕಡ್ಡಾಯವಾಗಿ ನಾಲ್ಕು ತರಗತಿಯಲ್ಲಿ ಮತ್ತು ಹೊರಾಂಗಣ ಕೆಲಸದಲ್ಲಿ ಪಾಲ್ಗೊಂಡರೆ ಮಾತ್ರ ಸರ್ಟಿಫಿಕೇಟ್ ಕೊಡಲಾಗುವುದು.
  • ತರಗತಿಗೆ ತಡವಾಗಿ ಬರುವುದು ಅಥವಾ ಬೇಗ ಹೋಗುವುದಕ್ಕೆ ಅವಕಾಶ ಇಲ್ಲ
  •  ನಿಯಮಿತ ಅಭ್ಯರ್ಥಿಗಳು ಮಾತ್ರ ಇದರಲ್ಲಿ ಪಾಲ್ಗೊಳಲು ಅವಕಾಶ,ಮೊದಲು ಬಂದವವರಿಗೆ ಮೊದಲು ಆದ್ಯತೆ
  •  18 ವರ್ಷ ಮೇಲ್ಪಟ್ಟು ಯಾವುದೇ ವಯಸ್ಸಿನವರು ಇದರಲ್ಲಿ ಪಾಲ್ಗೊಳ್ಳ ಬಹುದು
  •  ಪ್ರತೀ ಭಾನುವಾರ ಬೆಳಿಗ್ಗೆ 9/30 ರಿಂದ ಸಂಜೆ ಗಂಟೆ 4/30 ರ ತನಕ ತರಗತಿ ನಡೆಯಲಿದೆ(ನಾಲ್ಕು ಭಾನುವಾರಗಳು)
  •  ಹೊರಾಂಗಣ ಕೆಲಸಗಳು ನಮ್ಮ ನಮ್ಮ ಅನುಭವ ಹೆಚ್ಚಿಸಲು ಇರುವಂತಹದ್ಧು ಆದುದರಿಂದ ಕಡ್ಡಾಯವಾಗಿ ಪಾಲ್ಗೊಳಲೇ ಬೇಕು
  •  ಹೊರಾಂಗಣ ಕೆಲಸಗಳಿಗೆ ಬೇಕಾದ ಬಟ್ಟೆ ಜೊತೆಗಿರಲಿ
  •  ಊಟದ ವ್ಯವಸ್ಥೆ ಹಣ ಪಾವತಿಸಿ ಪಡೆಯುವಂತೆ ಇರಬಹುದು
ಸ್ಥಳ : # ಶ್ರೀಭಾರತೀ ಸಮೂಹ ಸಂಸ್ಥೆಗಳು ನಂತೂರು ವಿವೇಕಾನಂದ ರಸ್ತೆ 6ನೇ ಕ್ರಾಸ್ ನಂತೂರು ಪದವು ಮಂಗಳೂರು. ಮಾಹಿತಿ ಮತ್ತು ಸಂಪರ್ಕಕ್ಕಾಗಿ 9448835606 ಹಾಗೂ 9343569694

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23.05.2025 | ಮುಂದಿನ 10 ದಿನಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆ
May 23, 2025
4:03 PM
by: ಸಾಯಿಶೇಖರ್ ಕರಿಕಳ
ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ
May 23, 2025
3:50 PM
by: ದ ರೂರಲ್ ಮಿರರ್.ಕಾಂ
ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group