‘ಅಪಾಯಕಾರಿ ರಾಸಾಯನಿಕಗಳ(Chemical) ಬದಲು ಹಲವು ಸಾವಯವ(Organic) ಪರ್ಯಾಯಗಳಿವೆ’ ಎಂಬ ಮಾತು ಸಾವಯವ ಚಿಂತನಗಳಲ್ಲಿ ಕೇಳುತ್ತೇವೆ. ಕೃತಕ ಅಪಾಯಕಾರಿ(Danger) ರಾಸಾಯನಿಕಗಳ ಬದಲು ಅಷ್ಟೇ ಅಪಾಯಕಾರಿಯಾಗಿರುವ ಸಾವಯವ ಪರ್ಯಾಯಗಳನ್ನು ಹುಡುಕುವುದು ಸಾವಯವದ ಮೂಲ ಆಶಯ ಅಲ್ಲ. ‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ(Natural).
‘ಸಾವಯವ’ ಅನ್ನುವುದು ಪ್ರಾಕೃತಿಕ ಸಂಬಂಧಗಳನ್ನು -ಗುಣಗಳನ್ನು ಅರಿವಿಗೆ ತರುವ-ಅವೆಲ್ಲವುಗಳ ಜೊತೆ ಅವಿನಾಭಾವತೆ ಅರಳಿಸುವ-ಉಳಿಸುವ ವಿಶಿಷ್ಠ ಜೀವಕಲೆ. – ಗೋಮೂತ್ರ-ಗೋಮಯವನ್ನೇ ಹಾಕಿ ಬೆಳೆದು ಕೊನೆಯಲ್ಲಿ ‘ನಾನೇ ಬೆಳೆದದ್ದು’, ‘ನನ್ನ ಕ್ಷೇತ್ರದ ಇಳುವರಿ ಇಷ್ಟು’ ಎಂದು ಬೀಗುವ ಮಾತು ‘ಸಾವಯವ’ ಆದೀತೆ ? – ‘ನಾವು ಬೆಳೆದೆವು-ನಮ್ಮಲ್ಲಿ ಬೆಳೆಯಿತು – ಪ್ರಕೃತಿ ಬೆಳೆಸಿತು’ ಎನ್ನುವ ಮಾತುಗಳು ‘ಸಾವಯವ’. ಉಪಕೃತಭಾವದ ಮಾತು ‘ಸಾವಯವ’. – ವಿನೀತಭಾವದಿಂದ ಬೆಳೆದ ಬೆಳೆಗೆ ಪ್ರಕೃತಿ ಕೊಡುವ ಪ್ರಮಾಣ ‘ಸಾವಯವ’. – ‘ರಾಸಾಯನಿಕ ರಹಿತ’ ಎನ್ನುವುದಷ್ಟಕ್ಕೆ ‘ಸಾವಯವ’ ಸೀಮಿತವಾದ್ದಲ್ಲ. – ‘ಸಾವಯವ’ ಎನ್ನುವುದು ನಮ್ಮನ್ನು ಹಿರಿದು ಮಾಡುವ ಮಾತು. ಎಲ್ಲದರೊಳಗೊಂದು ಮಾಡುವ ಮಾತು. ‘ನಾನು’ ಎಂಬ ಭಾವವನ್ನು ಅಳಿಸುವ ಮಾತು. ‘ನಾವು’ ಎಂಬ ಪ್ರಜ್ಞೆಯನ್ನು ಪೋಷಿಸುವ ಮಾತು. – ‘ನಾನು’ ಎನ್ನುವುದೆ ರಾಸಾಯನಿಕ. ‘ನಾವು’ ಎನ್ನುವುದು ‘ಸಾವಯವ’. ದೃಷ್ಟಿ ಸರಿಯಿರದೆ ನೋಟ ಸರಿಯಾಗುವುದೆ ? ಎಂಬ ಪ್ರಶ್ನೆ ಹಲವು ಸಾವಯವ ಗೋಷ್ಠಿಗಳಲ್ಲಿ ಕಾಡುತ್ತಿರುತ್ತದೆ…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…