Advertisement
Opinion

ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ…… ಇದಕ್ಕೆ ನಾವೇನು ಮಾಡಬಹುದು? | ನಮ್ಮ ಜವಾಬ್ದಾರಿ ಏನು..? |

Share

ಕಸ,ಕಸ, ಕಸ… ಕಂಡಲ್ಲೆಲ್ಲ ಕಸ. ಕಾಲಿಟ್ಟಲ್ಲೆಲ್ಲ ಕಸ, ಕಸ, ಕಸ, ನಾವು ಮಾಡುವ ಕಸ, ಪರಿಸರದಲ್ಲಿ ಹಾಕುವ ಕಸ ನಿರ್ವಹಣೆ ಆಡಳಿತದಲ್ಲಿ ಇರುವವರಿಗೆ ದೊಡ್ಡ ಸಮಸ್ಯೆ, ಸವಾಲು ಕೂಡ. ಈ ನಿಟ್ಟಿನಲ್ಲಿ ನಾವೇನು ಮಾಡಬಹುದು? ಬಹಳಷ್ಟು ಜವಾಬ್ದಾರಿ ನಮ್ಮ ಮೇಲಿದೆ. ಕರ್ತವ್ಯವೂ ನಮ್ಮದಿದೆ. ಯಾಕೆಂದರೆ ಕಸದ ಸಮಸ್ಯೆಗೆ ಮೂಲ ಕಾರಣಿಗರು ನಾವೇ ಅಲ್ಲವೇ? ಪ್ರಸ್ತುತ ನಾವು ನಮ್ಮ ದಿನಚರಿಯಲ್ಲಿ ದಿನ ನಿತ್ಯದ ಬದುಕಿನಲ್ಲಿ ನಮ್ಮ ಮನೆಗಳಲ್ಲಿ ಕಸ ಕಡಿಮೆ ಮಾಡುವುದು, ಆ ಕಸವನ್ನು ವಿಲೇವಾರಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ವಿಚಾರ ಒಪ್ಪಿತವಾದರೆ ಆಚರಣೆಗೆ ತರೋಣ:

Advertisement
Advertisement
Advertisement

 1.ಹಸಿಕಸ : ಹಸಿಕಸ ಇದ್ದುದರಲ್ಲಿ ನಿರ್ವಹಣೆ ಸುಲಭ. ಅಂಗಳ ಅಥವಾ ಹಿತ್ತಲು ಇದ್ದಲ್ಲಿ, ಒಂದು ಗುಂಡಿ ತೋಡಿ ಅದರಲ್ಲಿ ಹಾಕುತ್ತಾ ಬಂದರೆ ನಿಧಾನವಾಗಿ ಗೊಬ್ಬರವಾಗಿ ಪರಿವರ್ತನೆ ಆಗುತ್ತದೆ ಮನೆಯಂಗಳ/ ಹಿತ್ತಲಲ್ಲಿ ಬೆಳೆದ ತರಕಾರಿ/ಹೂವಿನ ಗಿಡಗಳಿಗೆ ಹಾಕಬಹುದು. ಪೇಟೆಯ ಬದಿಯಲ್ಲಿ ಸ್ಥಳ ಇಲ್ಲದವರು ಎರಡು ಬಕೆಟ್‌ನಲ್ಲಿ (ಒಂದು ತುಂಬಿದ ನಂತರ ಇನ್ನೊಂದಕ್ಕೆ) ಹಾಕಿ ಗೊಬ್ಬರ/ಎರೆ ಗೊಬ್ಬರ ಮಾಡಬಹುದು, ಇಲ್ಲವೇ ದನಗಳಿಗೆ ನೀಡಬಹುದು. ಸಾಧ್ಯವಾದಷ್ಟೂ ಹಸಿಕಸವನ್ನು ಪುರಸಭೆ/ ಪಂಚಾಯತಿಯ ಕಸದ ಗಾಡಿಗೆ ನೀಡದಿರುವುದು ಒಳಿತು. ಕೊಡುವುದಾದರೂ ಪ್ರತ್ಯೇಕವಾಗಿ ಕೊಡಿ.

Advertisement

2. ಕಾಗದದ ಒಣಕಸ : ಬಳಕೆ ಕಡಿಮೆ ಮಾಡಲು ಸಾದ್ಯವೇ ಎಂದು ಪ್ರಯತ್ನಿಸಿ. ಸೌದೆ ಒಲೆ/ಬಚ್ಚಲೊಲೆ ಇದ್ದಲ್ಲಿ ಇದನ್ನು ಬಳಸೋಣ. ಅಕಸ್ಮಾತ್ ಕಸದ ಗಾಡಿಗೆ ಕೊಡಬೇಕಾದಲ್ಲಿ ಪ್ರತ್ಯೇಕವಾಗಿಯೇ ನೀಡೋಣ. ಕಾಗದ ತಯಾರಿಕೆಯಲ್ಲಿ ಮರಹನನ ಆಗುತ್ತದೆಂಬುದು ನಮ್ಮ ಗಮನದಲ್ಲಿರಲಿ.

3. ಗಾಜಿನ ಕಸ : ಈ ಕಸವನ್ನು ಮನೆಯಲ್ಲಿ ಪ್ರತ್ಯೇಕವಾಗಿ ತೆಗೆದಿರಿಸೋಣ. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದ ನಂತರದಲ್ಲಷ್ಟೆ ಕಸದ ಗಾಡಿಗೆ ನೀಡೋಣ. ಮನೆಯಲ್ಲಿ ಇದರ ವಿಲೇವಾರಿ ಕಷ್ಟವಾದ್ದರಿಂದ ಗಾಡಿಗೆ ನೀಡುವುದು ಒಳಿತು. ಗಾಡಿಗೆ ಕೊಡುವಾಗ ಗಾಜಿನ ಕಸದ ಚೀಲವಿದೆಂದು ಹೇಳಿ ಕೊಡಿ.

Advertisement

4. ಪ್ಲಾಸ್ಟಿಕ್ ಕಸ : ಕಸಗಳಲ್ಲಿ ಪ್ರಮುಖವಾದದ್ದು, ನಿಭಾಯಿಸಲು ಕಷ್ಟಕರವಾದದ್ದು, ಪ್ರಪಂಚದಾದ್ಯಂತ ತಲೆನೋವು ಉಂಟು ಮಾಡಿರುವ ಕಸ ಅಂದರೆ ಪ್ಲಾಸ್ಟಿಕ್ ಕಸ. ಪ್ಲಾಸ್ಟಿಕ್ ವಿಷಯದಲ್ಲಿ ಒಂದು ಸೂತ್ರ/ವಿಚಾರ ನಮಗೆ ತಿಳಿದಿರಲಿ. ಅದೇ ಇಂಗ್ಲಿಷಿನ R ಅಕ್ಷರದ ಸೂತ್ರ (ಕನ್ನಡದಲ್ಲಿ ತಿ ಮಿ ಹಿ ಮ ) ಅರ್ಥೈಸಿಕೊಳ್ಳೋಣ, ಪಾಲಿಸೋಣ. REJECT ತಿರಸ್ಕರಿಸು REDUCE ಮಿತಗೊಳಿಸು RETURN ಹಿಂತಿರುಗಿಸಿ RE-USE ಮರು ಬಳಸು ಇದರಲ್ಲಿ ಮೊದಲಿನದು REJECT. ಸದಾ ನಾವು ಪ್ಲಾಸ್ಟಿಕ್ ಅನ್ನು ತಿರಸ್ಕರಿಸೋಣ, ತಿರಸ್ಕರಿಸೋಣ, ತಿರಸ್ಕರಿಸೋಣ. ಸರಿ, ಆದಾಗ್ಯೂ ಮನೆಗೆ ಈ ದಿನಗಳಲ್ಲಿ ಬಂದೇ ಬರುವ ಪ್ಲಾಸ್ಟಿಕ್ ಅನ್ನು ಏನು ಮಾಡುವುದು?

  • ಅಡುಗೆ ಮನೆಯಲ್ಲೊಂದು ಕತ್ತರಿ ಇರಲಿ, ಕವರನ್ನು ನೀಟಾಗಿ ಕತ್ತರಿಸಿ ಧವಸ ಧಾನ್ಯ/ಆಹಾರ ಪದಾರ್ಥಗಳನ್ನು ಸ್ಟ್ಟೀಲ್ ಡಬ್ಬ/ಪಾತ್ರೆಗೆ ಹಾಕಿ ಕವರನ್ನು ತೊಳೆದು ಬಟ್ಟೆ ಒಣಗಿಸುವಂತೆ ಒಣಗಿಸಿ ತಂದಲ್ಲಿಗೆ ಮರುಬಳಕೆಯ ಶರ್ತ ದೊಂದಿಗೆ ಹಿಂತಿರುಗಿಸಿ. ಅದರ ಚೂರುಗಳನ್ನು ಮರು ಬಳಸಲಾಗದ್ದನ್ನು ಒಂದು ಡಬ್ಬ/ಚೀಲದಲ್ಲಿ ತುಂಬಿಸಿಡಿ. ಆ ಡಬ್ಬ/ಚೀಲ ತುಂಬಿದ ನಂತರ ಕಸದ ಗಾಡಿಗೆ ಕೊಡಿ.
  • ಮರುಬಳಸಬಹುದಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಡಬ್ಬ, ಬಾಟಲಿ, ಆಟಿಕೆಗಳನ್ನು ಮತ್ತೊಂದು ಚೀಲದಲ್ಲಿ ತುಂಬಿಸಿಡಿ. ಗುಜರಿಯವರಿಗೆ ಕೊಡಿ.
  • ಹಾಲಿನ ಕವರನ್ನು ನೀಟಾಗಿ ಕತ್ತರಿಸಿ, (ಕತ್ತರಿಸಿದ ಭಾಗವು ಕವರಿನಲ್ಲೇ ಉಳಿಯುವಂತೆ) ಹಾಲನ್ನು ಬಗ್ಗಿಸಿದ ನಂತರ ತೊಳೆದು ಒಣಗಿಸಿ. ಗುಜರಿಯವರು ತೂಕದ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಾರೆ. ಸದಾ ಎಲ್ಲರ ಮನೆಯಲ್ಲಿ 5 ಬಕೆಟ್/ಡಬ್ಬ/ಚೀಲಗಳಿರಲಿ.

ಹಸಿ ಕಸ , ಪೇಪರ್ ಕಸ , ಗಾಜಿನ ತ್ಯಾಜ್ಯ  ಹಾಗೂ ಕಸದ ಗಾಡಿಗೆ ಕೊಡಬಹುದಾದ ಪ್ಲಾಸ್ಟಿಕ್ ಕಸ,  ಮರುಬಳಕೆಯ/ ಗುಜರಿಗೆ ನೀಡಬಹುದಾದ ತ್ಯಾಜ್ಯ ಮೇಲಿನ ಬರವಣಿಗೆ ನಮ್ಮ ಮನೆಯಲ್ಲಿರುವ ಆಚರಣೆ, ಮತ್ತು ನಮ್ಮ ದಿನ ನಿತ್ಯದ ಭಾಗ. ಅದನ್ನು ದಾಖಲಿಸಿದ್ದೇನಷ್ಟೆ. ಕಸ ನಿಯಂತ್ರಣಕ್ಕೆ/ ವಿಲೇವಾರಿಗೆ ದಾರಿಗಳು ನೂರಾರು ಇರಬಹುದು. ಬಲ್ಲವರು  ಹಂಚಿಕೊಂಡರೆ ಪರಿಸರ ಜಾಗೃತಿಗೆ ಕಾರಣವಾಗುತ್ತದೆ. ಒಟ್ಟಾರೆ ಇಲ್ಲಿ ನಮ್ಮ ಮನಸ್ಥಿತಿ , ಪರಿಸರ ಪೂರಕ ವಿಚಾರ, ವಿಚಾರದಂತೆ ಜೀವನ ಶೈಲಿ ಮುಖ್ಯ, ಆಚರಿಸಲು ಬಿಗಿ ನಿಲುವು ಅವಶ್ಯ. ಸಮಾಜದ ಮದ್ಯೆ, ಸಮಾಜದೊಂದಿಗೆ, ಸಮಾಜಕ್ಕಾಗಿ, ಪರಿಶುದ್ಧ ಪರಿಸರಕ್ಕಾಗಿ ನಮ್ಮ ನಡವಳಿಕೆಯನ್ನು, ದಿನಚರಿಯನ್ನು ರೂಪಿಸಿಕೊಳ್ಳೋಣ. ತನ್ಮೂಲಕ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಸುಂದರ, ಸ್ವಚ್ಛ, ಶುಭ್ರ ಪರಿಸರವನ್ನು ಉಳಿಸಿಕೊಳ್ಳೋಣ.

Advertisement
ಬರಹ :
ಬಿ ಸಂ, ಕೃಷ್ಣ
, ಬಾಲಗಡಿ ಕೊಪ್ಪ

The Rural Mirror concern :

Advertisement

As responsible members of society, it is imperative that we take our role in waste management seriously. Proper waste disposal and recycling practices are essential in preserving the environment and ensuring a sustainable future for generations to come. By implementing effective waste management strategies, we can reduce the negative impact of waste on our surroundings and promote a cleaner, healthier environment. It is our duty to educate ourselves and others on the importance of proper waste management techniques and to actively participate in initiatives that promote recycling and waste reduction. Together, we can make a significant difference in protecting our planet for future inhabitants.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ

25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

11 hours ago

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |

ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…

15 hours ago

ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?

ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..

16 hours ago

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

1 day ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

2 days ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

2 days ago