ನಮ್ಮ ಸೈನಿಕರು(Soldier) ನಮ್ಮನ್ನು, ನಮ್ಮ ದೇಶವನ್ನು ಚಳಿ, ಗಾಳಿ, ಮಳೆ ಅನ್ನದೆ ಕಾಯುತ್ತಿರುತ್ತಾರೆ. ಅದರಲ್ಲೂ ಹಿಮ ಪ್ರದೇಶಗಳಲ್ಲಿ ಅವರು ಪಡುವ ಕಷ್ಟ ಎಂತ ವೈರಿಗೂ ಬೇಡ. ತಮ್ಮ ಆಹಾರವನ್ನು(food) ಪಡೆಯುವುದಕ್ಕೂ ಅವರು ಬಹಳ ಕಷ್ಟ ಪಡುತ್ತಾರೆ. ದುರ್ಗಮ ಸ್ಥಳಗಳಲ್ಲಿ ಇರುವ ಸೈನಿಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸುವುದೇ ದೊಡ್ಡ ಸವಾಲು. ಇಂತಹ ಸವಾಲುಗಳನ್ನು ಎದುರಿಸಲು ನಮ್ಮ ಸೈನಿಕರು ಗಡಿ(Boarder) ಭಾಗದಲ್ಲೇ ಕೃಷಿ(Agriculture) ಮಾಡಲು ಮುಂದಾಗಿ, ಯಶಸ್ವಿನೂ ಆಗಿದ್ದಾರೆ. ಭಾರತ(India) ಮತ್ತು ಚೀನಾ(Chaina) ನಡುವಿನ ವೈಮನಸ್ಸು ನಮಗೆ ತಿಳಿದಿದೆ. ಈ ದೇಶಗಳ ಗಡಿಯಲ್ಲಿ ಯಾವಾಗಲೂ ಉದ್ವಿಗ್ನತೆ ಇರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲಿರುವುದು ಭಾರತ-ಚೀನಾ ನಡುವಿನ ವಿಶಿಷ್ಟವಾದ ಗಡಿಯ ಬಗ್ಗೆ, ಅಲ್ಲಿ ಸೇನಾ ಸೈನಿಕರು ಬಾಂಬ್ ದಾಳಿ ಮಾಡುವ ಬದಲು ಕೃಷಿ ಮಾಡುತ್ತಿದ್ದಾರೆ. DRDO ನೆರವಿನಿಂದ ಭಾರತ – ಚೀನಾ ಗಡಿಯಲ್ಲಿ ಹಸಿರುಮನೆ ನಿರ್ಮಾಣವಾಗಿದೆ. ಅದಾದ ಬಳಿಕ ಸೈನಿಕರು ಅಲ್ಲಿ ಕೃಷಿ ಮಾಡಿ ತರಕಾರಿ(Vegetable), ಹಣ್ಣು(Fruits) ಬೆಳೆಯಲು ಶುರು ಮಾಡಿದ್ದಾರೆ.
ಚೀನಾದ ಗಡಿಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು ತುಂಬಾ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ಪ್ಯಾಕ್ ಮಾಡಿದ ಆಹಾರವನ್ನು ಮಾತ್ರ ಅವರಿಗೆ ವಿತರಿಸಲಾಗುತ್ತಿತ್ತು. ಅವುಗಳನ್ನು ತಿನ್ನುತ್ತಿದ್ದ ಸೈನಿಕರ ಆರೋಗ್ಯ ತುಂಬಾ ಕೆಡುತ್ತಿತ್ತು. DRDO ನೆರವಿನಿಂದ ಭಾರತ – ಚೀನಾ ಗಡಿಯಲ್ಲಿ ಹಸಿರುಮನೆ ನಿರ್ಮಾಣವಾಗಿದೆ. ಅದಾದ ಬಳಿಕ ಸೈನಿಕರು ಅಲ್ಲಿ ಕೃಷಿ ಮಾಡಿ ತರಕಾರಿ, ಹಣ್ಣು ಬೆಳೆಯಲು ಶುರು ಮಾಡಿದ್ದಾರೆ. ನಮ್ಮ ದೇಶದ ಅಭಿವೃದ್ಧಿಯನ್ನು ಡ್ರ್ಯಾಗನ್ ರಾಷ್ಟ್ರ ಸಹಿಸುವುದಿಲ್ಲ. ಅದಕ್ಕಾಗಿಯೇ ಅವರು ಗಡಿಯನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಭಾರತವನ್ನು ಪ್ರಚೋಧಿಸಲು ಎಂತಹ ಕೀಟಲೆಗಳನ್ನಾದರೂ ಮಾಡುತ್ತಿರುತ್ತಾರೆ. ಆದ್ದರಿಂದ, ಚೀನಾ ಏನು ಮಾಡಿದರೂ ಅದನ್ನು ಬಲವಾಗಿ ಖಂಡಿಸಲು ನಮ್ಮ ಭಾರತೀಯ ಸೇನೆಯು ಗಡಿಗಳಲ್ಲಿ ನಿರಂತರವಾಗಿ ಎಚ್ಚರವಾಗಿರುತ್ತದೆ.
ಹಿಮಾಲಯದ ಶಿಖರಗಳ ಮೇಲೆ ನಿರ್ಮಿಸಲಾಗಿರುವ ಚೀನಾದ ಗಡಿಗೆ ಹೋಗುವ ರಸ್ತೆಗಳು ತೀರಾ ಹದಗೆಟ್ಟಿವೆ. ಅದರಲ್ಲೂ ಅರುಣಾಚಲ ಪ್ರದೇಶದ ಪಕ್ಕದಲ್ಲಿರುವ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಪ್ರಮುಖ ವಿಷಯವೆಂದರೆ ಆಹಾರದ ಕೊರತೆ. ಚೀನಾದ ಗಡಿಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು ತುಂಬಾ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ಪ್ಯಾಕ್ ಮಾಡಿದ ಆಹಾರವನ್ನು ಮಾತ್ರ ಅವರಿಗೆ ವಿತರಿಸಲಾಗುತ್ತಿತ್ತು. ಅವುಗಳನ್ನು ತಿನ್ನುತ್ತಿದ್ದ ಸೈನಿಕರ ಆರೋಗ್ಯ ತುಂಬಾ ಕೆಡುತ್ತಿತ್ತು. ಬಳಿಕ ಯೋಧರ ಆರೋಗ್ಯ ತಪಾಸಣೆ ನಡೆಸಿದಾಗ ಪ್ಯಾಕ್ ಮಾಡಿದ ಆಹಾರವೇ ಕಾರಣ ಎಂದು ತಿಳಿದುಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು, 2014 ರಲ್ಲಿ, ಅಸ್ಸಾಂನ ತೇಜ್‌ಪುರದ DRDO ಒಂದು ವಿಶಿಷ್ಟ ಪರಿಹಾರವನ್ನು ಕಂಡುಹಿಡಿದಿತ್ತು. ಅರುಣಾಚಲ ಪ್ರದೇಶದ ತವಾಂಗ್ ಮತ್ತು ಸಲಾರಿಯಲ್ಲಿ ಹಸಿರುಮನೆಗಳನ್ನು ಸ್ಥಾಪಿಸಲಾಗಿದೆ.
ಈ ಹಸಿರುಮನೆ ನಿರ್ಮಿಸಿದ ನಂತರ, ಸೈನಿಕರಿಗೆ ತರಕಾರಿಗಳನ್ನು ಬೆಳೆಯಲು ತರಬೇತಿ ನೀಡಲಾಯಿತು. ಈಗ ಈ ಸೈನಿಕರು ತಮಗೆ ಅಗತ್ಯವಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ತಾವೇ ಬೆಳೆಯುತ್ತಾರೆ. ಅವರುಗಳನ್ನು ಇಡೀ ಸೇನೆಗೆ ತಲುಪಿಸಲಾಗುತ್ತಿದೆ. ಈ ಜವಾನರು ಈ ತರಕಾರಿಗಳು ಮತ್ತು ಹಣ್ಣುಗಳನ್ನು ಸ್ವತಃ ತಿನ್ನುವುದು ಮಾತ್ರವಲ್ಲದೆ ಸ್ಥಳೀಯ ಜನರಿಗೆ ಉಚಿತವಾಗಿ ವಿತರಿಸುತ್ತಾರೆ. ಗಡಿನಾಡಿನ ಈ ವಿಶಿಷ್ಟ ಕೃಷಿ ಜನರನ್ನು ಆಕರ್ಷಿಸಿದೆ. ಈಗ ಇಲ್ಲಿ ಅದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಗಡಿಯಲ್ಲಿ ಸೈನಿಕರು ಮೂಲಂಗಿ, ಎಲೆಕೋಸು, ಟೊಮೆಟೊ ಮತ್ತು ಸೌತೆಕಾಯಿಗಳನ್ನು ಬೆಳೆಯುತ್ತಿದ್ದಾರೆ. ಇವು ಸ್ವಯಂ ಕೃಷಿ ಮಾಡಿದ್ದು ಉತ್ತಮ ಆಹಾರವಾಗಿದ್ದು, ಸೈನಿಕರ ಆರೋಗ್ಯ ಸುಧಾರಿಸಿದೆ. ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಅತಿಯಾಗಿ ಬಳಸದೆ ಈ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಬಗ್ಗೆ ನ್ಯೂಸ್18, ಪಂಜಾಬಿ ಎಬಿವಿ ಲೈವ್ ವಿಶಿಷ್ಟವಾಗಿ ವರದಿ ಮಾಡಿದೆ.
We know the tension between India and China. There is always tension on the borders of these countries. A greenhouse has been constructed on the India-China border with the assistance of DRDO. After that, the soldiers started farming and growing vegetables and fruits there.