ಬರ್ಮಾ ಅಡಿಕೆಯು ಕಳ್ಳದಾರಿಯ ಮೂಲಕ ಭಾರತದೊಳಕ್ಕೆ ಪ್ರವೇಶವಾಗುತ್ತಲೇ ಇದೆ. ಕಳೆದ ಕೆಲವು ಸಮಯಗಳಿಂದ ಈ ಮಾದರಿ ಅಕ್ರಮ ಅಡಿಕೆ ತಡೆಗೆ ಇಲಾಖೆಗಳು ಪ್ರಯತ್ನ ಮಾಡುತ್ತಿವೆ. ಅಸ್ಸಾಂ ಗಡಿಭದ್ರತಾ ಪಡೆ ಅಕ್ರಮವಾಗಿ ಅಡಿಕೆ ಸಾಗಾಟವನ್ನು ತಡೆಯುತ್ತಿದೆ. ಇದೀಗ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 60,000 ಕೆಜಿಗೂ ಹೆಚ್ಚು ಅಡಿಕೆಯು ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯ ವಶಪಡಿಸಿಕೊಂಡ ಅಡಿಕೆಯ ಸೂಕ್ತ ದಾಖಲೆಗಳನ್ನು ನೀಡಿ ಸರಕುಗಳನ್ನು ಬಿಡಿಸಿಕೊಳ್ಳಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ…!. ಹಾಗಿದ್ದರೆ ಈ ಅಡಿಕೆಯ ಒಡೆಯರು ಯಾರು..?………ಮುಂದೆ ಓದಿ……..
ಅಸ್ಸಾಂನ ಲಖಿಪುರ ಪೊಲೀಸ್ ಠಾಣೆ ವಶಪಡಿಸಿಕೊಂಡ ಅಡಿಕೆಯು ಬೃಹತ್ ಸಂಗ್ರಹವಾಗಿದೆ. ದಾಸ್ತಾನುಗಳು ಹೆಚ್ಚುತ್ತಿದೆ. ಯಾವುದೇ ಮಾಲೀಕರು ತಮ್ಮ ಜಮೀನು ಹಾಗೂ ಸೂಕ್ತ ದಾಖಲೆಗಳನ್ನು ನೀಡಿ ವಶಪಡಿಸಿಕೊಂಡ ಅಡಿಕೆಯನ್ನು ಹಿಂಪಡೆಯಬೇಕಿತ್ತು, ಆದರೆ ಯಾರೊಬ್ಬರೂ ದಾಖಲೆ ನೀಡಲು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತ್ಯೇಕ ಕಾರ್ಯಾಚರಣೆಗಳ ಪರಿಣಾಮವಾಗಿ 60,420 ಕೆಜಿ ಅಡಿಕೆಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಇವುಗಳ ಕಾನೂನುಬದ್ಧ ಮಾಲೀಕರನ್ನು ಪತ್ತೆಹಚ್ಚಲು ಪದೇ ಪದೇ ಪ್ರಯತ್ನಿಸಿದರೂ ಯಾರೊಬ್ಬರೂ ದಾಖಲೆ ನೀಡಲು ಬಂದಿಲ್ಲ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಿಕೆಯು ಉಳಿದುಕೊಳ್ಳಲು ಕಾರಣವೇನು..? ಅಡಿಕೆ ಸಾಗಾಟದ ಬಗ್ಗೆ ದಾಖಲೆ ನೀಡದೆ ಇರಲು ಕಾರಣವೇನು..? ಹೀಗಾಗಿ ಈ ವಶಪಡಿಸಿಕೊಂಡ ಸರಕುಗಳು ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿವೆಯೇ ಎಂದು ಅಧಿಕಾರಿಗಳು ಸಂದೇಹಪಟ್ಟಿದ್ದಾರೆ ಅಲ್ಲದೆ, ಈಗಾಗಲೇ ಅಡಿಕೆಯ ಬಗ್ಗೆ ಇರುವ ಊಹಾಪೋಹಗಳಿಗೆ ಈ ಅಂಶವು ಪುಷ್ಟಿ ನೀಡುತ್ತಿದೆ ಎಂದು ಅಧಿಕಾರಿ ಹೇಳಿದರು. ಒಂದು ವೇಳೆ ಮುಟ್ಟುಗೋಲು ಹಾಕಿಕೊಂಡ ಸರಕುಗಳ ಸರಿಯಾದ ಮಾಲೀಕತ್ವವನ್ನು ಯಾರೊಬ್ಬರೂ ಸಲ್ಲಿಸದೇ ಇದ್ದರೆ ಅಡಿಕೆಯನ್ನು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಪಿಟಿಐ)
Over 60,000 kgs of unclaimed Arecanuts, which have been seized during separate operations, in Lakhipur police station in Assam’s Cachar district has emerged as a problem for the local authorities, as no one has come forward to claim the goods, a senior officer said.