ಚಂದ್ರಯಾನ-3 #Chandrayana3 ರನ್ನು ದಕ್ಷಿಣ ಧ್ರುವದಲ್ಲಿ ಇಸ್ರೋ #ISRO ಚಂದ್ರಲೋಕದಲ್ಲಿ ಇಳಿಸಿದ ನಂತರ ಅಲ್ಲಿಂದ ವಿಕ್ರಮ್ ಲ್ಯಾಂಡರ್ #VikramLander ದಿನಕ್ಕೊಂದರಂತೆ ಹೊಸ ಹೊಸ ಸುದ್ದಿಗಳನ್ನು ಅನ್ವೇಷಿಸಿ ಕಳುಹಿಸುತ್ತಿದೆ. ಇದೀಗ ಚಂದ್ರನಲ್ಲಿ ಆಮ್ಲಜನಕ #Oxygen ಇದೆಯೇ ಅನ್ನೋದನ್ನು ಪತ್ತೆ ಮಾಡುತ್ತಿದೆ. ಇಡೀ ವಿಶ್ವವೇ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದೆ.
ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್ನ ವಿಕ್ರಮ್ ಲ್ಯಾಂಡರ್ರನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ ಇಡೀ ಜಗತ್ತಿಗೆ ಉತ್ತಮ ಸುದ್ದಿಯತ್ತ ನಿರೀಕ್ಷೆ ಹುಟ್ಟಿದೆ ಚಂದ್ರಯಾನದ ರೋವರ್ ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಜೊತೆಗೆ ನಿರೀಕ್ಷೆಯಂತೆ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ತಿಳಿಸಿದೆ. ಇದೀಗ ಚಂದ್ರನ ಮೇಲ್ಮೈಯಲ್ಲಿ ಜಲಜನಕದ#Hydrogen ಹುಡುಕಾಟ ಮುಂದುವರಿದಿದೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಇಸ್ರೋದ ಚಂದ್ರಯಾನ-3 ದಕ್ಷಿಣ ಧ್ರುವದಲ್ಲಿ ಪ್ರತಿದಿನ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ S ಇರುವಿಕೆಯನ್ನು ಸ್ಪಷ್ಟವಾಗಿ ದೃಢಪಡಿಸಿವೆ ಎಂದು ಇಸ್ರೋ ತಿಳಿಸಿದೆ. ಇದೀಹ ಹೈಡ್ರೋಜನ್ ಇರುವಿಕೆಯ ಬಗ್ಗೆ ಅಧ್ಯಯನ ಮುಂದುವರಿಸಿದೆ.