ಎಲ್ಲಾ ಆಯ್ತು.. ಈಗ ಪಾನ್‌ ಉಗುಳುವುದು ಜಾಗತಿಕ ಸಮಸ್ಯೆಯಂತೆ…!

December 13, 2025
7:46 AM

ಸಾರ್ವಜನಿಕ ಆರೋಗ್ಯ ಮತ್ತು ಕಸದ ಸಮಸ್ಯೆ ಹಾಗೂ ಪಾನ್‌ ಉಗುಳುವ ಸಮಸ್ಯೆಯ ಕಾರಣದಿಂದ ತಂಬಾಕು ಮತ್ತು ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳನ್ನು ನಿಷೇಧಿಸುವಂತೆ ‌ ಬ್ರೆಂಟ್ ಕೌನ್ಸಿಲ್  ಬ್ರಿಟಿಷ್ ಸರ್ಕಾರವನ್ನು ಕೋರಿದೆ. ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ರಾಷ್ಟ್ರೀಯ ನೀತಿ ಬದಲಾವಣೆಗಳನ್ನು ಒತ್ತಾಯಿಸುತ್ತದೆ ಎಂದು ಬ್ರಿಟಿಷ್‌ ಸರ್ಕಾರವನ್ನು ಒತ್ತಾಯಿಸಿದೆ. ಈ ಹಿಂದೆಯೂ ಸರ್ಕಾರವನ್ನು ಒತ್ತಾಯ ಮಾಡಲಾಗಿತ್ತು, ಇದೀಗ ಮತ್ತೆ ಅಡಿಕೆ ಹಾನಿಕಾರಕ ಎಂದೂ ಉಲ್ಲೇಖಿಸಿ ಮನವಿ ಮಾಡಲಾಗಿದೆ.

ದಕ್ಷಿಣ ಏಷ್ಯಾದ ಪಾರಂಪರಿಕ ಜನಸಂಖ್ಯೆಯನ್ನು ಹೊಂದಿರುವ ವಾಯುವ್ಯ ಲಂಡನ್‌ನ ಒಂದು ಪ್ರಾಂತ್ಯವು, ಹೆಚ್ಚುತ್ತಿರುವ ಪಾನ್ ಅಗಿಯುವ ಮತ್ತು ಉಗುಳುವ ಸಮಸ್ಯೆಯ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯದ ಅಪಾಯ ಮತ್ತು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಸಮಸ್ಯೆಯ ಮೂಲ. ಲಂಡನ್‌ನ ವೆಂಬ್ಲಿಯಂತಹ ಪ್ರದೇಶಗಳಲ್ಲಿ ಪಾದಚಾರಿ ದಾರಿಗಳು ಕೆಂಪು ಬಣ್ಣಗಳಿಂದ ಕೂಡಿದೆ.  ಇದರ ಸ್ವಚ್ಛತೆಗಾಗಿ  ಪ್ರತಿ ವರ್ಷ 30,000 ಪೌಂಡ್‌ಗಳಿಗಿಂತ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡುತ್ತಿದೆ ಎಂದು ಪ್ರಾಧಿಕಾರವು ಹೇಳಿದೆ.

ವೆಂಬ್ಲಿ ಮತ್ತು ಈಲಿಂಗ್ ರಸ್ತೆಯಂತಹ ಪ್ರದೇಶಗಳನ್ನು ನೋಡಿಕೊಳ್ಳುವ ಬ್ರೆಂಟ್ ಕೌನ್ಸಿಲ್, ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳ ಮೇಲೆ ತಕ್ಷಣದ ರಾಷ್ಟ್ರೀಯ ನಿಷೇಧವನ್ನು ಕೋರಿ ಯುಕೆ ಸರ್ಕಾರದ ಪ್ರಮುಖ ಮಂತ್ರಿಗಳಿಗೆ ಪತ್ರ ಬರೆದಿದೆ. ಅಡಿಕೆ, ತಂಬಾಕು ಮತ್ತು ಮಸಾಲೆಗಳಯನ್ನು ಅಗಿಯುವುದು ಮತ್ತು ನಂತರ ಉಗುಳುವುದು,  ಶುಚಿಗೊಳಿಸುವ ಯಂತ್ರಗಳಿಗೆ ಸಹ ಸ್ವಚ್ಛತೆಗೆ ಸಮಸ್ಯೆಯಾಗುತ್ತದೆ ಎಂದು ಕೌನ್ಸಿಲ್ ಹೇಳಿದೆ.  ಲಂಡನ್‌ನಾದ್ಯಂತ ಪಾನ್ ಅಥವಾ ಗುಟ್ಕಾದ ಕಾರಣದಿಂದ ಫುಟ್‌ಪಾತ್‌ಗಳು, ಅಂಗಡಿ ಮುಂಗಟ್ಟುಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಪೌಂಡ್‌ಗಳಿಗೂ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡಲಾಗುತ್ತಿದೆ. ಈ ಸಮಸ್ಯೆ ಈಗ ಲಂಡನ್‌ನಾದ್ಯಂತ ಗೋಚರಿಸುತ್ತಿದೆ ಎಂದು ಗಮನ ಸೆಳೆದಿದೆ. ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಮಾರಾಟವನ್ನು ನಿಷೇಧಿಸಲು, ಅಕ್ರಮ ಪೂರೈಕೆ ಜಾಲಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು ಎಂದು ಬ್ರೆಂಟ್ ಕೌನ್ಸಿಲ್ ಸರ್ಕಾರವನ್ನು ಕೇಳಿದೆ. ಈಗ ಪಾನ್‌ ಉಗುಳುವುದು ಸ್ಥಳಿಯ ಸಮಸ್ಯೆಯಲ್ಲ, ಅದೊಂದು ಜಾಗತಿಕ ಸಮಸ್ಯೆಯಾಗುತ್ತಿದೆ ಎಂದೂ ಉಲ್ಲೇಖಿಸಿದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror