ಅಂಗಳದಲ್ಲಿ ಭತ್ತದ ಕೃಷಿ | ಅಡಿಕೆಯ ನಾಡಿನಲ್ಲಿ ನೇಗಿಲಯೋಗಿಯ ಯಶೋಗಾಥೆ | ಗ್ರಾಪಂ ಅಧ್ಯಕ್ಷರ ಮಾದರಿ ಕಾರ್ಯ |

December 3, 2021
10:45 PM

ಅಡಿಕೆಯ ನಾಡು ದಕ್ಷಿಣ ಕನ್ನಡ. ಒಂದು ಕಾಲದಲ್ಲಿ ಭತ್ತದ ನಾಡಾಗಿತ್ತು. ಕಾಲ ಕ್ರಮೇಣ ಅಡಿಕೆ, ರಬ್ಬರ್‌ ಊರಾಗಿ ಬೆಳೆಯಿತು. ಈ ನಡುವೆಯೇ ಇಲ್ಲೊಬ್ಬರು ನೇಗಿಲ ಯೋಗಿಯಾದರು. ಅದಕ್ಕೆ ಅವರು ಆಯ್ಕೆ ಮಾಡಿದ್ದು ಮನೆಯಂಗಳ. ಅಂಗಳದಲ್ಲಿ ಬೇಸಾಯ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈ ಯಶಸ್ಸು ಮಾದರಿಯೂ ಹೌದು, ಏಕೆಂದರೆ ಅವರು ಗ್ರಾ ಪಂ ಅಧ್ಯಕ್ಷ…!

Advertisement
Advertisement

ಮಳೆಗಾಲ ಪೂರ್ತಿ ಖಾಲಿ ಬಿದ್ದಿರುವ 5 ಸೆಂಟ್ಸ್ ಅಂಗಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಅವರು ಸದುಪಯೋಗಪಡಿಸಿಕೊಂಡು ಅದರಲ್ಲಿ ಬೇಸಾಯವನ್ನು ಮಾಡಿ ಒಂದೂವರೆ ಕ್ವಿಂಟಲ್ ಭತ್ತವನ್ನು ಕಟಾವು ಮಾಡಿಸಿದ್ದಾರೆ.

ಕರಾವಳಿ ಜಿಲ್ಲೆಯ ಕೃಷಿಕರ ಅಂಗಳದಲ್ಲಿ ನವೆಂಬರ್ ತಿಂಗಳಿನಿಂದ ಮೇ ತಿಂಗಳ ತನಕ ಅಡಿಕೆಯನ್ನು ಒಣಗಿಸುವ ಪದ್ಧತಿ ಇದೆ. ಆದರೆ ಅಥವಾ ಜೂನ್ ತಿಂಗಳ ಆರಂಭದಿಂದ ಅಕ್ಟೋಬರ್ ತನಕ ಅಂಗಳದಲ್ಲಿ ಅಡಿಕೆಯನ್ನು ಒಣಗಿಸುವ ಪದ್ಧತಿ ತೀರ ಕಡಿಮೆ. ಅತಿಯಾದ ಮಳೆ ಹಾಗೂ ಅಂಗಳದಲ್ಲಿ ಹುಲ್ಲು ಬೆಳೆಯುವ ಕಾರಣ ಅಡಿಕೆ ಒಣಗಿಸುವುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಇಲ್ಲಿನವರು ಕಂಡುಕೊಂಡಿದ್ದಾರೆ.

ಮೊದಲಿಗೆ ಅಂಗಳಕ್ಕೆ ದಪ್ಪನಾಗಿ ಅಡಿಕೆಯ ಸೋಗೆಯನ್ನು ಹಾಸಿ ಎರಡು ಮಳೆಗೆ ಬಿಡುತ್ತಾರೆ. ನಂತರ ಮೊಳಕೆಬರಿಸಿದ ಭತ್ತವನ್ನು ಅದಕ್ಕೆ ಬಿತ್ತುತ್ತಾರೆ. ಬಿತ್ತಿದ್ದನ್ನು ಹಕ್ಕಿಗಳು ಅಥವಾ ಸಣ್ಣ ಪ್ರಾಣಿಗಳು ತಿನ್ನದಂತೆ ಅದರ ಮೇಲೆ ಒಣಗಿದ ಅಡಿಕೆ ಸಿಪ್ಪೆಯನ್ನು ತೆಳುವಾಗಿ ಹರಡುತ್ತಾರೆ. ಇಲ್ಲಿಗೆ ಬಿತ್ತುವ ಕಾರ್ಯ ಮುಗಿಯಿತು. ಒಂದು ವಾರದಲ್ಲಿ ಗಿಡ ಬೆಳೆಯಲಾರಂಭಿಸುತ್ತದೆ. ಯಾವುದೇ ಗೊಬ್ಬರಗಳ ಅವಶ್ಯಕತೆ ಇದಕ್ಕೆ ಇರುವುದಿಲ್ಲ. ಜೂನ್ ತಿಂಗಳಲ್ಲಿ ಬಿತ್ತಿದ ಬೆಳೆಯು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ತಿಂಗಳಿನಲ್ಲಿ ಕಟಾವಿಗೆ ಬರುತ್ತದೆ.

Advertisement

ಗದ್ದೆಯಲ್ಲಿ ಮೂರು ತಿಂಗಳು ಅಥವಾ ನಾಲ್ಕು ತಿಂಗಳಿಗೆ ಒಂದು ಬೆಳೆಯನ್ನು ಬೆಳೆದರೆ ಇಲ್ಲಿ ಒಂದು ತಿಂಗಳು ಹೆಚ್ಚು ಅವಧಿ ನಿರೀಕ್ಷಿಸಬಹುದು. ಆದರೆ ಗದ್ದೆಯಲ್ಲಿ ಬೆಳೆದ ಬೆಳೆಗು ಅಂಗಳದಲ್ಲಿ ಬೆಳೆದ ಬೆಳೆಗು ಯಾವುದೇ ವ್ಯತ್ಯಾಸವಿರುವುದಿಲ್ಲ. ಕಳೆದ ಆರು ವರ್ಷಗಳಿಂದ ಇವರು ಇದನ್ನು ಆಸಕ್ತಿಯಿಂದ ಮಾಡಿಕೊಂಡು ಬರುತ್ತಿದ್ದಾರೆ.

ಕರಾವಳಿಯಲ್ಲಿ ತೆನೆ ಕಟ್ಟುವ ಸಂಪ್ರದಾಯ ಇದ್ದು, ಇತೀಚೆಗೆ ಅದೂ ಕೂಡಾ ಕಣ್ಮರೆಯಾಗುತ್ತ ಬಂದಿದೆ. ಈ ನಿಟ್ಟಿನಲ್ಲಿ ಯೋಚಿಸಿ ನಾನು ಭತ್ತವನ್ನು ಬೆಳೆಸಿದ್ದೇನೆ. ನಾನು ಇಲ್ಲಿ ಭತ್ತ ಬೆಳೆದ ಕಾರಣ ಸುತ್ತಮುತ್ತಲಿನ ಪರಿಸರದ ಮಕ್ಕಳಿಗೆ ಇದನ್ನು ನೋಡುವ ಅವಕಾಶ ಸಿಕ್ಕಿದೆ. ಹೆಚ್ಚು ಖರ್ಚು ಇಲ್ಲದ, ಆಹಾರದ ಭದ್ರತೆಯನ್ನು ಒದಗಿಸುವ ಇದನ್ನು ಪ್ರತಿಯೊಬ್ಬರು ಆಸಕ್ತಿಯಿಂದ ಬೆಳೆಸಿದರೆ ಭವಿಷ್ಯದ ದೃಷ್ಟಿಯಿಂದ ಒಳಿತು  ಎಂದು  ಹೇಳುತ್ತಾರೆ ಕೃಷಿಕ  ಯೋಗೀಶ್ ಆಲಂಬಿಲ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

ಇದನ್ನೂ ಓದಿ

ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group