ಅಡಿಕೆಯ ನಾಡು ದಕ್ಷಿಣ ಕನ್ನಡ. ಒಂದು ಕಾಲದಲ್ಲಿ ಭತ್ತದ ನಾಡಾಗಿತ್ತು. ಕಾಲ ಕ್ರಮೇಣ ಅಡಿಕೆ, ರಬ್ಬರ್ ಊರಾಗಿ ಬೆಳೆಯಿತು. ಈ ನಡುವೆಯೇ ಇಲ್ಲೊಬ್ಬರು ನೇಗಿಲ ಯೋಗಿಯಾದರು. ಅದಕ್ಕೆ ಅವರು ಆಯ್ಕೆ ಮಾಡಿದ್ದು ಮನೆಯಂಗಳ. ಅಂಗಳದಲ್ಲಿ ಬೇಸಾಯ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈ ಯಶಸ್ಸು ಮಾದರಿಯೂ ಹೌದು, ಏಕೆಂದರೆ ಅವರು ಗ್ರಾ ಪಂ ಅಧ್ಯಕ್ಷ…!
ಮಳೆಗಾಲ ಪೂರ್ತಿ ಖಾಲಿ ಬಿದ್ದಿರುವ 5 ಸೆಂಟ್ಸ್ ಅಂಗಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಅವರು ಸದುಪಯೋಗಪಡಿಸಿಕೊಂಡು ಅದರಲ್ಲಿ ಬೇಸಾಯವನ್ನು ಮಾಡಿ ಒಂದೂವರೆ ಕ್ವಿಂಟಲ್ ಭತ್ತವನ್ನು ಕಟಾವು ಮಾಡಿಸಿದ್ದಾರೆ.
ಕರಾವಳಿ ಜಿಲ್ಲೆಯ ಕೃಷಿಕರ ಅಂಗಳದಲ್ಲಿ ನವೆಂಬರ್ ತಿಂಗಳಿನಿಂದ ಮೇ ತಿಂಗಳ ತನಕ ಅಡಿಕೆಯನ್ನು ಒಣಗಿಸುವ ಪದ್ಧತಿ ಇದೆ. ಆದರೆ ಅಥವಾ ಜೂನ್ ತಿಂಗಳ ಆರಂಭದಿಂದ ಅಕ್ಟೋಬರ್ ತನಕ ಅಂಗಳದಲ್ಲಿ ಅಡಿಕೆಯನ್ನು ಒಣಗಿಸುವ ಪದ್ಧತಿ ತೀರ ಕಡಿಮೆ. ಅತಿಯಾದ ಮಳೆ ಹಾಗೂ ಅಂಗಳದಲ್ಲಿ ಹುಲ್ಲು ಬೆಳೆಯುವ ಕಾರಣ ಅಡಿಕೆ ಒಣಗಿಸುವುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಇಲ್ಲಿನವರು ಕಂಡುಕೊಂಡಿದ್ದಾರೆ.
ಮೊದಲಿಗೆ ಅಂಗಳಕ್ಕೆ ದಪ್ಪನಾಗಿ ಅಡಿಕೆಯ ಸೋಗೆಯನ್ನು ಹಾಸಿ ಎರಡು ಮಳೆಗೆ ಬಿಡುತ್ತಾರೆ. ನಂತರ ಮೊಳಕೆಬರಿಸಿದ ಭತ್ತವನ್ನು ಅದಕ್ಕೆ ಬಿತ್ತುತ್ತಾರೆ. ಬಿತ್ತಿದ್ದನ್ನು ಹಕ್ಕಿಗಳು ಅಥವಾ ಸಣ್ಣ ಪ್ರಾಣಿಗಳು ತಿನ್ನದಂತೆ ಅದರ ಮೇಲೆ ಒಣಗಿದ ಅಡಿಕೆ ಸಿಪ್ಪೆಯನ್ನು ತೆಳುವಾಗಿ ಹರಡುತ್ತಾರೆ. ಇಲ್ಲಿಗೆ ಬಿತ್ತುವ ಕಾರ್ಯ ಮುಗಿಯಿತು. ಒಂದು ವಾರದಲ್ಲಿ ಗಿಡ ಬೆಳೆಯಲಾರಂಭಿಸುತ್ತದೆ. ಯಾವುದೇ ಗೊಬ್ಬರಗಳ ಅವಶ್ಯಕತೆ ಇದಕ್ಕೆ ಇರುವುದಿಲ್ಲ. ಜೂನ್ ತಿಂಗಳಲ್ಲಿ ಬಿತ್ತಿದ ಬೆಳೆಯು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ತಿಂಗಳಿನಲ್ಲಿ ಕಟಾವಿಗೆ ಬರುತ್ತದೆ.
ಗದ್ದೆಯಲ್ಲಿ ಮೂರು ತಿಂಗಳು ಅಥವಾ ನಾಲ್ಕು ತಿಂಗಳಿಗೆ ಒಂದು ಬೆಳೆಯನ್ನು ಬೆಳೆದರೆ ಇಲ್ಲಿ ಒಂದು ತಿಂಗಳು ಹೆಚ್ಚು ಅವಧಿ ನಿರೀಕ್ಷಿಸಬಹುದು. ಆದರೆ ಗದ್ದೆಯಲ್ಲಿ ಬೆಳೆದ ಬೆಳೆಗು ಅಂಗಳದಲ್ಲಿ ಬೆಳೆದ ಬೆಳೆಗು ಯಾವುದೇ ವ್ಯತ್ಯಾಸವಿರುವುದಿಲ್ಲ. ಕಳೆದ ಆರು ವರ್ಷಗಳಿಂದ ಇವರು ಇದನ್ನು ಆಸಕ್ತಿಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…