ಜು.9 ಪದ್ಯಾಣ ಗಣಪತಿ ಭಟ್‌ ಸಂಸ್ಮರಣೆ | ಚೊಕ್ಕಾಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ |

June 3, 2022
4:54 PM

ಪದ್ಯಾಣ ಗಣಪತಿ ಭಟ್‌ ಅವರ ಸಂಸ್ಮರಣಾ ಕಾರ್ಯಕ್ರಮವು ಜುಲೈ 9 ರಂದು ಶನಿವಾರ ಚೊಕ್ಕಾಡಿಯ ಶ್ರೀ ರಾಮದೇವಾಲಯದ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಚೊಕ್ಕಾಡಿ ಶ್ರೀ ರಾಮದೇವಾಲಯದ ವಠಾರದಲ್ಲಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಬಿಡುಗಡೆಗೊಳಿಸಿದರು.

Advertisement

ಜುಲೈ 9 ರಂದು ಬೆಳಗ್ಗಿನಿಂದ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ 8.30 ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ ಸಭಾಧ್ಯಕ್ಷತೆ ವಹಿಸುವರು. ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯ ದೀಪಪ್ರಜ್ವಲನ ಮಾಡುವರು. ಅತಿಥಿಗಳಾಗಿ ಸಾಮಾಜಿಕ ಮುಂದಾಳು ಆನೆಕಾರ ಗಣಪ್ಪಯ್ಯ ಭಾಗವಹಿಸುವರು. ಕಲಾವಿದ ವೆಂಕಟ್ರಾಮ ಭಟ್ ಸುಳ್ಯ ಹಾಗೂ ಗಣರಾಜ ಕುಂಬ್ಳೆ ಪದ್ಯಾಣ ಸಂಸ್ಮರಣೆ ಮಾಡುವರು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಚೂಂತಾರು ಉಪಸ್ಥಿತರಿರುವರು. ಸಂಜೆ .6.30 ರಿಂದ ಸಂಸ್ಮರಣೆ ಹಾಗೂ  ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ತಾಳಮದ್ದಳೆ ನಡೆಯಲಿದೆ. ಸಂಜೆ  ಗಾನಾರ್ಚನೆ , ಯಕ್ಷಗಾನ ಬಯಲಾಟ ನಡೆಯಲಿದೆ.

ಕಾರ್ಯಕ್ರಮವನ್ನು ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಕೇಂದ್ರ ಚೊಕ್ಕಾಡಿ, ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿ ಹಾಗೂ ಗಣಪ್ಫಣ್ಣ ಅಭಿಮಾನಿ ಬಳಗ ಆಯೋಜಿಸಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಕಾರ್ಯಕ್ರಮ ಸಂಘಟಕ ರಾಮಾ ಜೋಯಿಸ್ ಬೆಳ್ಳಾರೆ, ಪ್ರಮುಖರಾದ  ಕೃಷ್ಣಮೂರ್ತಿ ನೇಣಾರು, ಸತ್ಯವೆಂಕಟೇಶ ಹೆಬ್ಬಾರ್ ಶೇಣಿ, ಗಣಪ್ಪಯ್ಯ ವಾಲ್ತಾಜೆ, ಸುದೇಷ ದೇರಾಜೆ, ಕಾರ್ತಿಕೇಶ ಶೇಣಿ, ಸುಬ್ಬಪ್ಪಯ್ಯ ದಡ್ಡಾಲಡ್ಕ, ಶಾಂಭವಿ ದಡ್ಡಾಲಡ್ಕ,  ದೇವಸ್ಥಾನದ ಅರ್ಚಕರು ರಘುರಾಮ ಶರ್ಮ ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group