Advertisement
MIRROR FOCUS

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 2024 | ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ಹಿಂದೂ ಯುವತಿ |

Share

ಪಾಕಿಸ್ತಾನ…(Pakistan) ಅಂದ ಕೂಡಲೇ ಹಲವು ಪ್ರಶ್ನೆಗಳು… ಮುಸಲ್ಮಾನ(Muslim) ದೇಶವಾಗಿದ್ದರೂ ಅಲ್ಲಿ ಅವರಿಗೇ ಜೀವಭಯ. ಇನ್ನು ಹಿಂದೂಗಳ ಕಥೆ ದೇವರಿಗೇ ಪ್ರೀತಿ. ಅದರಲ್ಲೂ ಪಾಕಿಸ್ಥಾನದಲ್ಲಿ ಚುನಾವಣೆ(Election)) ನಡೆಯೋದು ಎಂದರೆ ಅದೊಂದು ಯುದ್ಧವೇ  ಎನ್ನಬಹುದು. ಇರುವ ಅಲ್ಪಸ್ವಲ್ಪ ಹಿಂದೂಗಳು ಅಲ್ಲಿ ಸ್ವರ ಎತ್ತಲೂ ಹೆದರುವ ಸಂದರ್ಭ. ಅಂಥದ್ರಲ್ಲಿ ಚುನಾವಣೆಗೆ ಸ್ಫರ್ಧಿಸುವುದು ದೂರದ ಮಾತು ಬಿಡಿ. ಅದರಲ್ಲೂ ಹಿಂದೂ ಮಹಿಳೆಯರೂ(Hindu Woman) ಚುನಾವಣೆಗೆ ನಿಲ್ಲುವ ಬಗ್ಗೆ ಯೋಚನೆಯೂ ಮಾಡಬೇಕಾಗಿಲ್ಲ. ಆದರೆ ಈ ಬಾರಿಯ ಚುನಾವಣೆಯ ಸ್ಥಿತಿ ಹಾಗಿಲ್ಲ. ಹಿಂದೂ ಯುವತಿಯೊಬ್ಬರು ಪಾಕಿಸ್ತಾನದಲ್ಲಿ ನಡೆಯುವ 2024ರ ಸಾರ್ವತ್ರಿಕ ಚುನಾವಣೆಗೆ (General Election) ನಾಮಪತ್ರ(Nommination) ಸಲ್ಲಿಸಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

Advertisement
Advertisement

2024ರ ಫೆಬ್ರವರಿ 8 ರಂದು 16 ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆಯಲಿವೆ. ಹೀಗಾಗಿ ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ ಸವೀರಾ ಪ್ರಕಾಶ್ ಅವರು PK-25 ರ ಜನರಲ್ ಸೀಟ್‍ಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಸಮುದಾಯದ ಸದಸ್ಯೆಯಾಗಿರುವ ಸವೀರಾ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಟಿಕೆಟ್‍ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಪ್ರಕಾಶ್ ಅವರ ತಂದೆ ಓಂ ಪ್ರಕಾಶ್ (ನಿವೃತ್ತ ವೈದ್ಯ) ಅವರು ಕಳೆದ 35 ವರ್ಷಗಳಿಂದ ಪಿಪಿಪಿಯ ಅಪ್ಪಟ ಸದಸ್ಯರಾಗಿದ್ದಾರೆ. ಹೀಗಾಗಿ ತಂದೆಯ ಹಾದಿಯಲ್ಲೇ ಸಾಗಲು ಮಗಳು ನಿರ್ಧಾರ ಮಾಡಿದ್ದಾರೆ.

Advertisement

ಮುಂಬರುವ ಚುನಾವಣೆಗೆ ಸಾಮಾನ್ಯ ಸ್ಥಾನಕ್ಕೆ ಬುನರ್ ನಿಂದ ನಾಮಪತ್ರ ಸಲ್ಲಿಸಿರುವ ಮೊದಲ ಮಹಿಳೆ ಪ್ರಕಾಶ್ ಆಗಿದ್ದಾರೆ ಎಂದು ಸ್ಥಳೀಯ ರಾಜಕಾರಣಿ ಸಲೀಂ ಖಾನ್ ಹೇಳಿದ್ದಾರೆ. ಸವೀರಾ ಪ್ರಕಾಶ್ (Saveera Parkash) ಅವರು, 2022 ರಲ್ಲಿ ಅಬೋಟಾಬಾದ್ ಇಂಟರ್‌ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾಗಿದ್ದು, ಬುನರ್‍ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಕಲ್ಯಾಣ ಮತ್ತು ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಅಭಿವೃದ್ಧಿ ವಲಯದಲ್ಲಿ ಮಹಿಳೆಯರ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಚುನಾವಣೆಯಲ್ಲಿ ಗೆಲುವು ಕಂಡರೆ ಈ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಗುರಿಯನ್ನು ಸವೀರಾ ಅವರು ಹೊಂದಿದ್ದಾರೆ.

– ಅಂತರ್ಜಾಲ ಮಾಹಿತಿ

Advertisement

Dr Saveera Parkash, a member of the Hindu community in Khyber Pakhtunkhwa’s Buner district in Pakistan, has filed her nomination papers on Tuesday (26 December) for a general seat in the upcoming elections in the country, the Dawn reported. The general elections in Pakistan are scheduled to be held on 8 February to elect the members of the 16th National Assembly.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

1 day ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

1 day ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

1 day ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

1 day ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

2 days ago