Advertisement
ಪ್ರಮುಖ

ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |

Share

ಭಾರತದ ನೆರೆಯ ದೇಶ ಪಾಕಿಸ್ತಾನದ (Pakistan) ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಅಲ್ಲಿನ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತ ತಲುಪುತ್ತಿದ್ದು, ದಾಖಲೆಯ ಮಟ್ಟದಲ್ಲಿ ಹಣದುಬ್ಬರವನ್ನು (Inflation) ಕಂಡಿದೆ. ಪಾಕ್‌ನ ಈ ಸ್ಥಿತಿಯಿಂದ ಅಲ್ಲಿ ನೆಲೆಸಲಾಗದೆ  ಅನೇಕ ಜನ ದೇಶವನ್ನೇ ಬಿಟ್ಟು ಹೋಗಿರುವ ಬಗ್ಗೆ ವರದಿಗಳಾಗಿವೆ. ಜೂನ್‌ನಲ್ಲಿ ಬಂದ ವರದಿಗಳ ಪ್ರಕಾರ ಈ ವರ್ಷದ ಮೊದಲ ಆರು ತಿಂಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಗಳು ದೇಶವನ್ನು ತೊರೆದು ಹೋಗಿದ್ದಾರೆ. ಇಷ್ಟೆಲ್ಲಾ ಆರ್ಥಿಕವಾಗಿ ಹದಗೆಟ್ಟಿರುವ ಪಾಕ್‌ನ ಸ್ಥಿತಿ ಕೆಲ ನೆರೆಯ ರಾಷ್ಟ್ರಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲಿ ನಮ್ಮ ಭಾರತ ಕೂಡ ಒಂದು. ಪಾಕಿಸ್ತಾನದ ಆರ್ಥಿಕ ದುಸ್ಥಿತಿಯು ಭಾರತದಿಂದ ಪಾಕಿಸ್ತಾನಕ್ಕೆ (India-Pakistan) ರಫ್ತಾಗುವ ಇಲ್ಲಾ ಆಮದಾಗುವ ಸರಕುಗಳಿಗೆ ಸಂಬಂಧಿಸಿದಂತೆ ಭಾರತೀಯ ವ್ಯವಹಾರದ ಮೇಲೆ ಪರಿಣಾಮ ಪರಿಣಾಮ ಬೀರಿದೆ.

ಎಲ್ಲಾ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನದ ಜನರ ಪ್ರಮುಖ ಆಹಾರದ ಪ್ರಮುಖ ಅಂಶಗಳಲ್ಲಿ ಒಂದಾದ ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಕರಾಚಿಯಲ್ಲಿ ಗೋಧಿ ಹಿಟ್ಟು 140/ಕೆಜಿ-160/ಕೆಜಿಗೆ ಮಾರಾಟವಾಗುತ್ತಿದೆ. ಗೋಧಿ ಹಿಟ್ಟಿನ ಮೇಲಿನ ಬೆಲೆಯನ್ನು ಹಿಡಿತಕ್ಕೆ ತರಲು ಈಗ ಪಾಕ್‌ ಮುಂದಾಗಿದೆ. ಪ್ರಸ್ತುತ ಆರ್ಥಿಕ ಸವಾಲುಗಳು ಮತ್ತು ಹೆಚ್ಚುತ್ತಿರುವ ಹಿಟ್ಟಿನ ಬೆಲೆಯನ್ನು ಸ್ಥಿರಗೊಳಿಸುವ ತುರ್ತು ಅಗತ್ಯವನ್ನು ಹೊಂದಿರುವ ಪಾಕಿಸ್ತಾನವು ಭಾರತ ಮತ್ತು ಇಸ್ರೇಲ್ ಸೇರಿದಂತೆ ಕೆಲವು ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಗೋಧಿಯ ಮೇಲೆ ನಿಷೇಧವನ್ನು ಅಧಿಕೃತವಾಗಿ ಘೋಷಿಸಿದೆ. ಭಾರತ, ಇರಾನ್‌ ಮಾತ್ರವಲ್ಲದೇ ಕ್ಯೂಬಾ, ಇರಾನ್, ಉತ್ತರ ಕೊರಿಯಾ ಮತ್ತು ಸಿರಿಯಾ, ಕ್ರಿಮಿಯಾ ಸೇರಿದಂತೆ ಪ್ರಸ್ತುತ ರಷ್ಯಾದಿಂದ ನಿಯಂತ್ರಿಸಲ್ಪಡುವ ಉಕ್ರೇನಿಯನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಗೋಧಿಯ ಮೇಲೂ ನಿಷೇಧ ಹೇರಿದೆ.

Due to the current economic challenges and the urgent need to stabilize rising flour prices, Pakistan has officially announced a ban on wheat imports from certain countries including India and Israel. India has imposed a ban on wheat imported not only from Iran, but also from Cuba, Iran, North Korea and Syria, Crimea, which is currently controlled by Ukraine.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

2 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

9 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

9 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

16 hours ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

17 hours ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

1 day ago