ಕರಾವಳಿ ಜಿಲ್ಲೆಗಳಲ್ಲಿ ತಾಳೆ ಎಣ್ಣೆ ಸಂಸ್ಕರಣಾ ‌ಘಟಕ ಆರಂಭಿಸಲು ಕ್ಯಾಂಪ್ಕೊಗೆ ಸೂಚನೆ | ಕಲಬುರಗಿಯಲ್ಲಿ ಕೃಷಿ ಸಚಿವೆ ಶೋಭಾ ಕರಂದ್ಲಾಜೆ |

March 6, 2023
11:34 AM

ಕರಾವಳಿ ಜಿಲ್ಲೆಗಳಲ್ಲಿ ತಾಳೆ ಎಣ್ಣೆ ಸಂಸ್ಕರಣಾ ‌ಘಟಕ ಆರಂಭಿಸಲು ಕ್ಯಾಂಪ್ಕೊಗೆ ಸೂಚಿಸಲಾಗಿದೆ‌ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಬೇಳೆ ಕಾಳು, ಎಣ್ಣೆಕಾಳುಗಳಿಗೆ ಸಾಕಷ್ಟು ಬೇಡಿಕೆ ಇದೆ. ದೇಶದ ಒಟ್ಟು ಬೇಡಿಕೆಯ ಶೇ 70ರಷ್ಟು ಬೇಳೆ ಕಾಳು ಹಾಗೂ ಎಣ್ಣೆಕಾಳುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸ್ವಾವಲಂಬನೆ ಸಾಧಿಸಲು ಕರಾವಳಿ ಜಿಲ್ಲೆಗಳಲ್ಲಿ ತಾಳೆ ಎಣ್ಣೆ ಸಂಸ್ಕರಣಾ ‌ಘಟಕ ಆರಂಭಿಸಲು ಕ್ಯಾಂಪ್ಕೊಗೆ ಸೂಚಿಸಲಾಗಿದೆ‌ ಎಂದ ಅವರು ಎಲ್ಲೆಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೋ ಅಲ್ಲಿ ತಾಳೆ ಮರಗಳನ್ನು ಬೆಳೆಸಲು ಅನುಕೂಲಕರ ವಾತಾವರಣ ಇರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಎಣ್ಣೆ ಬೀಜಗಳನ್ನು ಒದಗಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಮೊದಲು 13 ಲಕ್ಷ ‌ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ, ಕುಸುಬೆ, ಸಾಸಿವೆಯಂತಹ ಎಣ್ಣೆ ಕಾಳುಗಳನ್ನು ಬೆಳೆಯುತ್ತಿದ್ದರು. ಈಗ ಆ ಪ್ರಮಾಣ 3 ಲಕ್ಷ ಎಕರೆಗೆ ಕುಸಿದಿದೆ. ರೈತರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವ ಮೂಲಕ ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ
August 18, 2026
4:16 PM
by: ಸಾಯಿಶೇಖರ್ ಕರಿಕಳ
ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು
August 18, 2026
7:33 AM
by: ದ ರೂರಲ್ ಮಿರರ್.ಕಾಂ
‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ
August 18, 2026
7:25 AM
by: ದ ರೂರಲ್ ಮಿರರ್.ಕಾಂ
ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ
August 18, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror