#Panchakarma | ಪಂಚಕರ್ಮ ಇದು ಆಯುರ್ವೇದದ ಒಂದು ಶ್ರೇಷ್ಠ ಚಿಕಿತ್ಸಾ ವಿಧಾನ | ಇದರಿಂದ ಆಗುವ ಪ್ರಯೋಜನಗಳೇನು..?

August 9, 2023
2:13 PM
ಶರೀರದ ದೋಷಗಳಾದ ವಾತ, ಪಿತ್ತ, ಕಫಗಳನ್ನು ತೆಗೆದು, ದೇಹದ ಧಾತುಗಳನ್ನು ಬಲಪಡಿಸುವ ಪ್ರಕ್ರಿಯೆಯೇ ಪಂಚಕರ್ಮ ಚಿಕಿತ್ಸೆಯ ಉದ್ದೇಶ. ಆರೋಗ್ಯವಂತರಲ್ಲಿ ಆರೋಗ್ಯ ಕಾಪಾಡುವುದು, ರೋಗಿಗಳ ರೋಗ ನಿವಾರಿಸುವುದು ಈ ಚಿಕಿತ್ಸೆಯ ಮೂಲಮಂತ್ರ.

ಆಯುರ್ವೇದ ಎಂಬುದು ಜೀವನವಿಧಾನ ಮಾತ್ರವಲ್ಲ, ಅದು ವಿಜ್ಞಾನ ಕೂಡಾ. ಇದು ಕಾಯಿಲೆಗಳ ವಿರುದ್ಧ ಚಿಕಿತ್ಸಾತ್ಮಕ ಹಾಗೂ ಮುಂಜಾಗೃತಾ ಕ್ರಮಗಳ ಕಡೆ ಗಮನ ಹರಿಸುವುದರೊಂದಿಗೆ ದೇಹವನ್ನು ಒಳಗಿನಿಂದ ಶುದ್ಧಿಗೊಳಿಸುವ ಹಾಗೂ ನವಚೈತನ್ಯ ಕಾಯ್ದಿರಿಸುವ ಕೆಲಸವನ್ನೂ ಮಾಡುತ್ತದೆ. ಈ ಆಯುರ್ವೇದದ ಪ್ರಮುಖ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯು ದೇಹ, ಮನಸ್ಸು ಹಾಗೂ ಆತ್ಮವನ್ನು ಸಮತೋಲನವಾಗಿ ಕಾಪಾಡುವ ಗುರಿ ಹೊಂದಿದೆ. ಇದು ಕೇವಲ ರೋಗಿಗಳಲ್ಲದೆ ಆರೋಗ್ಯವಂತರು ಕೂಡಾ ಪಡೆಯಬಹುದಾದ ಚಿಕಿತ್ಸೆ. ದೇಹದಿಂದ ಟಾಕ್ಸಿನ್ಸ್ ಹೊರತೆಗೆದು, ಕಟ್ಟಿಕೊಂಡ ನಾಳಗಳನ್ನು ಸ್ವಚ್ಛತೆ, ಜೀರ್ಣಕ್ರಿಯೆ ಸರಾಗ, ಮೆಟಾಬಾಲಿಸಂ ಹೆಚ್ಚಳ, ತೂಕ ಇಳಿಕೆ, ಒತ್ತಡ ಶಮನ, ರೋಗ ನಿರೋಧಕ ಶಕ್ತಿ ಹೆಚ್ಚಳ ಮುಂತಾದ ಆರೋಗ್ಯ ಲಾಭಗಳು ಪಂಚಕರ್ಮದಿಂದ ಸಿಗುತ್ತವೆ.

Advertisement
Advertisement

ನಮ್ಮ ಶರೀರದ ತ್ರಿದೋಷಗಳಾದ ವಾತ ಪಿತ್ತ ಕಫಗಳನ್ನು ಹೊರತೆಗೆದು ದೇಹದ ಸಪ್ತ ಧಾತುಗಳನ್ನು ಬಲಪಡಿಸುವ ಪ್ರಕ್ರಿಯೆ ಪಂಚಕರ್ಮ ಚಿಕಿತ್ಸೆ. ಪಂಚಕರ್ಮ ಹೆಸರೇ ಸೂಚಿಸುವಂತೆ 5 ಕರ್ಮಗಳು ( 5 procedures ) ಎಂದರ್ಥ. ಮಾನವ ದೇಹದಿಂದ ಕಲ್ಮಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುವ ಔಷಧೀಯ ತೈಲಗಳ ಬಳಕೆಯಿಂದ ಪಂಚಕರ್ಮವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

Advertisement

5 ಪಂಚಕರ್ಮ ಚಿಕಿತ್ಸೆಗಳು :

1. ವಮನ ( ವಾಂತಿ ಮಾಡಿಸುವುದು /vomitting therapy )

Advertisement

2. ವಿರೇಚನ( ಭೇದಿ ಮಾಡಿಸುವ ಕ್ರಿಯೆ /purgation therapy)

3. ಬಸ್ತಿ ಚಿಕಿತ್ಸೆ (ಎನಿಮಾ /enema therapy )

Advertisement

4. ನಸ್ಯ (Nasal therapy )

5. ರಕ್ತಮೋಕ್ಷಣ (Leach therapy )

Advertisement

ಪಂಚಕರ್ಮ ಚಿಕಿತ್ಸೆ ಮಾಡುವಾಗ ರೋಗಿಯನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಬೇಕಾಗುತ್ತದೆ ಈ ಚಿಕಿತ್ಸೆಯಲ್ಲಿ ಪೂರ್ವ ಕರ್ಮ ಪ್ರಧಾನ ಕರ್ಮ ಪಶ್ಚಾತ್ ಕರ್ಮ  ಅನುಸರಿಸಬೇಕಾಗುತ್ತದೆ . ಆದ ಕಾರಣ ನುರಿತ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಅವರ ಸಲಹೆ ಮೇರೆಗೆ ಪಂಚ ಕರ್ಮ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ

ಕೆಲವೊಂದು ಸಾಮಾನ್ಯ ಪಂಚಕರ್ಮ  ಚಿಕಿತ್ಸೆಗಳು : ಅಭ್ಯಂಗ.. ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ಮಸಾಜ್ ಮಾಡುವುದು. ಸಾಮಾನ್ಯವಾಗಿ ಎಲ್ಲಾ ಪಂಚಕರ್ಮದ ಪೂರ್ವ ಕರ್ಮವಾಗಿ ಮಾಡಲಾಗುತ್ತದೆ ಹಾಗೂ ಶರೀರದ ಮೈ ಕೈ ನೋವುಗಳನ್ನು ಕಡಿಮೆ ಮಾಡುತ್ತದೆ. ಶಿರೋಭ್ಯಂಗ   ಪಾದಾಭ್ಯಂಗ ಹಲವು ವಿಧಾನಗಳಿವೆ

Advertisement

* ಶಿರೋಧಾರ – ನಿದ್ರಾಹೀನತೆ  ಹಾಗೂ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲು ಉತ್ತಮ ಚಿಕಿತ್ಸೆ

*ಉದ್ವರ್ತನ – (Powder massage)  – ತೂಕ ಕಡಿಮೆ  ಮಾಡಲು

Advertisement

* ಜಾನು ಬಸ್ತಿ  ಕಟಿ ಬಸ್ತಿ – ನೋವು ನಿವಾರಿಸುವ   ಅನೇಕ ಚಿಕಿತ್ಸೆ ಗಳು ಈ ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿ   ಮಾಡಬಹುದು

*ಅಕ್ಷಿತಾರ್ಪಣ – ಕಣ್ಣಿನ ಚಿಕಿತ್ಸೆ

Advertisement

*ಕರ್ಣಪೂರಣ – ಕಿವಿಯ ಸಮಸ್ಯೆಗಳ  ಚಿಕಿತ್ಸೆ

ಯಾವುದೇ ಪಂಚಕರ್ಮ ಚಿಕಿತ್ಸೆ ಮಾಡಬೇಕಾದಲ್ಲಿ ಆಹಾರ ಮತ್ತು ವಿಹಾರದಲ್ಲಿ ಪಥ್ಯವನ್ನು (Diet) ಅನುಸರಿಸಬೇಕು… ಹಾಗೂ ವೈದ್ಯರ ಸಮ್ಮುಖದಲ್ಲೆ ಚಿಕಿತ್ಸೆ ಮಾಡಬೇಕಾಗುತ್ತದೆ

Advertisement

 ಪ್ರಯೋಜನ

* ದೇಹದ ಸಂಪೂರ್ಣ ಶುದ್ಧೀಕರಣ

Advertisement

*ಅಂಗಾಂಗಗಳ ಪುನರ್ ಯೌವನಗೊಳಿಸುವದು

*ಮನಸ್ಸು ದೇಹದ ವಿಶ್ರಾಂತಿ

Advertisement

*ಜೀರ್ಣ ಕ್ರಿಯೆಯನ್ನು ಬಲಗೊಳಿಸುವುದು

*ಮಾಂಸ ಖಂಡ ಹಾಗೂ ನರಗಳನ್ನು ಬಲಿಷ್ಠ ಗೊಳಿಸುವುದು

Advertisement

*ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

*ಮಾನಸಿಕ ಒತ್ತಡಗಳನ್ನು ಹೋಗಲಾಡಿಸುವುದು

Advertisement

Source : Online

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror