ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಇಂದಿನಿಂದ ಖಾಸಗಿ ಸಾರಿಗೆ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ | ಅಳವಡಿಕೆಗೆ ಎಷ್ಟು ಖರ್ಚಾಗುತ್ತೆ?

December 1, 2023
12:32 PM
ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ.

ಖಾಸಗಿ ಬಾಡಿಗೆ ವಾಹನಗಳಲ್ಲಿ(Privet service Vehicle) ಒಬ್ಬೊಬ್ಬರೇ ಪ್ರಯಾಣಿಸುವುದೆಂದರೆ  ಇತ್ತೀಚಿನ ದಿನಗಳಲ್ಲಿ ಭಯವಾಗಿದೆ. ಮಹಿಳೆ(women), ಮಕ್ಕಳು(Children), ಗಂಡಸರೆನ್ನದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ (sexual assault) ಪ್ರಕರಣಗಳು ಸಂಭವಿಸುತ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ಎಲ್ಲ ಕಡೆ ರಾತ್ರಿ ವೇಳೆ ಇಲ್ಲವೇ ಅಪರಿಚಿತ ಸ್ಥಳಕ್ಕೆ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್‌ ಡಿವೈಸ್‌ (Vehicle Location Tracking Device) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ (Panic button) ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ.

Advertisement
Advertisement

ಯಾವೆಲ್ಲ ವಾಹನಗಳಿಗೆ ಅಳವಡಿಕೆ ಕಡ್ಡಾಯ?: ವಿಎಲ್​ಟಿ ಹಾಗೂ ಪ್ಯಾನಿಕ್ ಬಟನ್ ಅನ್ನು ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳು ಅಳವಡಿಸಬೇಕು. ಎಲ್ಲೋ ಬೋರ್ಡ್​ ಟ್ಯಾಕ್ಸಿಗಳು (Yellow Board Taxi), ಕ್ಯಾಬ್​ಗಳು, ಖಾಸಗಿ ಬಸ್​ಗಳು (Cabs and private buses), ನ್ಯಾಷನಲ್ ಪರ್ವಿುಟ್ (National permit) ಹೊಂದಿರುವ ಗೂಡ್ಸ್ ವಾಹನಗಳಿಗೆ (Goods Vehicle) ಈ ಆದೇಶ ಅನ್ವಯವಾಗಲಿದೆ. ಅಂತಿಮ ಗಡುವಿನೊಳಗೆ ಅಳವಡಿಸದಿದ್ದರೆ ದಂಡ ಹಾಕಲಾಗುತ್ತದೆ. ಅಳವಡಿಸಲಾದ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್‌ ಟ್ರ್ಯಾಕಿಂಗ್‌ ನಡೆಯುತ್ತದೆ. ಹೀಗಾಗಿ ಯಾವುದೇ ವಾಹನ ಎಲ್ಲಿಯೇ ಸಂಚರಿಸಿದರೂ ಇದರಿಂದ ಗೊತ್ತಾಗುತ್ತದೆ. ಇದು ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆ ಮಾಡಿದಾಗ ಎಚ್ಚರಿಕೆಯನ್ನು ರವಾನೆ ಮಾಡುತ್ತದೆ.

Advertisement

ಯಾವುದಕ್ಕೆಲ್ಲ ಅನುಕೂಲ?: ಒಮ್ಮೆ ಪ್ಯಾನಿಕ್‌ ಬಟನ್‌ ವಾಹನಗಳಲ್ಲಿ ಅಳವಡಿಕೆಯಾದರೆ ಹಲವು ರೀತಿಯ ಉಪಯೋಗಗಳು ಇವೆ. ವಾಹನಗಳಲ್ಲಿ ಪ್ರಯಾಣಿಸುವಾಗ ಆರೋಗ್ಯದಲ್ಲಿ ಏರುಪೇರಾಗಿ ತುರ್ತು ವೈದ್ಯಕೀಯ ಸೇವೆ ಬೇಕಿದ್ದರೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ಯಾವುದೇ ತೊಂದರೆಗೆ ಸಿಲುಕಿದರೆ ಪ್ಯಾನಿಕ್ ಬಟನ್ ಅನ್ನು ಕೂಡಲೇ ಒತ್ತಬಹುದಾಗಿದೆ. ಆಗ ಈ ಸಂದೇಶವು ಕಮಾಂಡ್‌ ಸೆಂಟರ್‌ಗೆ ರವಾನೆಯಾಗುತ್ತದೆ. ಅಲ್ಲಿನ ಸಿಬ್ಬಂದಿ ವಾಹನದ ಟ್ರ್ಯಾಕಿಂಗ್‌ ನೋಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಇದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.

ಅಳವಡಿಸಲು ಎಷ್ಟು ಹಣ ಬೇಕು..? ಈ ಆದೇಶ ಡಿ.1ರಿಂದ ಅನ್ವಯವಾಗಲಿದ್ದು, ಒಂದು ವರ್ಷ ಕಾಲ ಅಂದರೆ, 2024ರ ನ.30ರವರೆಗೆ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವಿಎಲ್​ಟಿ ಹಾಗೂ ಪ್ಯಾನಿಕ್‌ ಬಟನ್‌ ಅಳವಡಿಸಬೇಕೆಂದರೆ ಅದಕ್ಕೆ ಕಡಿಮೆ ಖರ್ಚೇನೂ ಇರುವುದಿಲ್ಲ. ಈ ಡಿವೈಸ್‌ನ್ನು ವಾಹನಕ್ಕೆ ಅಳವಡಿಕೆ ಮಾಡಬೇಕೆಂದರೆ 7,599 ರೂಪಾಯಿಯನ್ನು ಖರ್ಚು ಮಾಡಬೇಕಿದೆ. ಇದು ಈಗ ಕ್ಯಾಬ್‌ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಅಳವಡಿಸಲು ನಮ್ಮ ತಕರಾರು ಇಲ್ಲ. ಆದರೆ, ಏಕಾಏಕಿ 7,599 ರೂಪಾಯಿಯನ್ನು ಖರ್ಚು ಮಾಡಬೇಕು ಎಂದರೆ ನಮಗೆ ಆರ್ಥಿಕವಾಗಿ ಸಮಸ್ಯೆಯನ್ನುಂಟಾಗುತ್ತದೆ. ಹೀಗಾಗಿ ಇದಕ್ಕೆ ಸರ್ಕಾರದಿಂದಲೂ ಸಹಾಯಧನ ಬೇಕು ಎಂಬ ಕೂಗುಗಳು ಕೇಳಿಬರುತ್ತಿವೆ.

Advertisement

ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ನವೀಕರಣ : ವಾಹನಗಳಿಗೆ ವಿಎಲ್​ಟಿ ಮತ್ತು ಪ್ಯಾನಿಕ್ ಬಟನ್ ಡಿವೈಸ್​ಗಳನ್ನು ಅಳವಡಿಸುವ ಸಂಬಂಧ ಗುತ್ತಿಗೆ ನೀಡಲು ಸಾರಿಗೆ ಇಲಾಖೆ 2023 ಫೆಬ್ರವರಿ 9ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 13 ಕಂಪನಿಗಳು ಆಯ್ಕೆಯಾಗಿದ್ದವು. ಅ.16 ರಂದು ಸಾರಿಗೆ ಆಯುಕ್ತರು ಮತ್ತು ರಸ್ತೆ ಸುರಕ್ಷತಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿತ್ತು. ಅಲ್ಲಿ ವಿಎಲ್​ಟಿ ಮತ್ತು ಪ್ಯಾನಿಕ್ ಬಟನ್ ಸಾಧನಗಳಿಗೆ ದರ ನಿಗದಿಪಡಿಸಲಾಗಿತ್ತು. ಆಯ್ಕೆಯಾಗಿರುವ ಕಂಪನಿಗಳು ವಾಹನಗಳಿಗೆ ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೊಕೇಷನ್ ಟ್ಯಾಕಿಂಗ್‌ ಡಿವೈಸ್ ಅಳವಡಿಸಲಿವೆ. ಈ ಯೋಜನೆ ತ್ವರಿತವಾಗಿ ಜಾರಿಯಾಗಬೇಕಿರುವುದರಿಂದ ಆರ್‌ಟಿಒಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್‌ಸಿ ನವೀಕರಣಗೊಳಿಸಲು ಸೂಚಿಸಲಾಗಿದೆ.

(ಕೃಪೆ: ಅಂತರ್ಜಾಲ)

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ
April 28, 2024
4:40 PM
by: The Rural Mirror ಸುದ್ದಿಜಾಲ
ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |
April 28, 2024
4:01 PM
by: ಮಹೇಶ್ ಪುಚ್ಚಪ್ಪಾಡಿ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror