ಗಾಂಧೀ ಜಯಂತಿ ಪ್ರಯುಕ್ತ ಅ.2 ರಂದು ಬೆಳಗ್ಗೆ ಧ್ವಜಾರೋಹಣದ ಬಳಿಕ ಗ್ರಾಮ ಸ್ವರಾಜ್ಯಕ್ಕಾಗಿ ಪಂಜ ಗ್ರಾಪಂ ಮುಂದೆ ವಿವಿಧ ಬೇಡಿಕೆ ಮುಂದಿರಿಸಿ ಉಪವಾಸ ಸತ್ಯಾಗ್ರಹ ಪಂಜ ಮಹಾತ್ಮಾಗಾಂಧಿ ವಿದ್ಯಾಪೀಠ ಹಾಗೂ ಪಂಜ ಗ್ರಾಮ ಸ್ವರಾಜ್ಯ ತಂಡದ ವತಿಯಿಂದ ನಡೆಯಲಿದೆ ಎಂದು ಪುರುಷೋತ್ತಮ ಮುಡೂರು ಹಾಗೂ ಜಿನ್ನಪ್ಪ ಅಳ್ಪೆ ತಿಳಿಸಿದ್ದಾರೆ.
ಗಾಂಧಿ ಜಯಂತಿಯಂದು ಬೆಳಗ್ಗೆ 8.30 ರಿಂದ ಸಂಜೆ 4 ರ ತನಕ ಪಂಜದಲ್ಲಿರುವ ಗ್ರಾಮದ ವಿಧಾನಸೌಧ ಎದುರುಗಡೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಪಂಜ ಹೋಬಳಿ ಕೇಂದ್ರದಲ್ಲಿ ಇರುವಂತಹ ಇಲಾಖೆಗಳ ಬಗ್ಗೆ ಸರಕಾರಕ್ಕೆ ಹಕ್ಕೊತ್ತಾಯದ ಕುರಿತು ಕಾರ್ಯ ನಿರ್ವಹಿಸುವ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಎಲ್ಲಾ ಸೌಲಭ್ಯಗಳು ದೊರಕಿಸಿಕೊಡುವುದು ಗ್ರಾಮಸ್ವರಾಜ್ ಪಂಜ ಇದರ ಮೂಲ ಉದ್ದೇಶವಾಗಿದೆ.
ಸರಕಾರದಿಂದ ಸಿಗುವಂತಹ ಸೌಲಭ್ಯಗಳ ವಂಚನೆಯು ನಡೆದಿದೆ ಮತ್ತು ಹೋಬಳಿ ಕೇಂದ್ರದಲ್ಲಿ ಇರುವಂತಹ ಸೇವೆ ಅಂಚೆ ಇಲಾಖೆ ಪೊಲೀಸ್ ಸ್ಟೇಷನ್ ನೀರಿನ ಸೌಲಭ್ಯ , ಇಂಟರ್ನೆಟ್, ವಿದ್ಯುತ್ , ಆರೋಗ್ಯ ಕೇಂದ್ರ , ಶೈಕ್ಷಣಿಕ ಕೇಂದ್ರಗಳು, ಬ್ಯಾಂಕ್ ವ್ಯವಹಾರಗಳು, ರಸ್ತೆ ಸಾರಿಗೆ ವ್ಯವಸ್ಥೆಗಳು, ಸ್ವಚ್ಛತೆ, ಶೌಚಾಲಯ, ಪಶುಸಂಗೋಪನೆ, ಕಾಲುದಾರಿಗಳ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳು, ಇತರ ಸೌಲಭ್ಯಗಳ ಬಗ್ಗೆ ಸೂಕ್ಷ್ಮವಾಗಿ ಜನರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರಕಾರಕ್ಕೆ ಮುಟ್ಟಿಸುವ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಸತ್ಯಾಗ್ರಹದಲ್ಲಿ ಸಾರ್ವಜನಿಕರು ಯಾವುದೇ ಸಮಸ್ಯೆಗಳನ್ನು ನೀಡಬಹುದು ಎಂದು ಪ್ರಕಟಣೆಯಲ್ಲಿ ಮಹಾತ್ಮಾಗಾಂಧಿ ವಿದ್ಯಾಪೀಠದ ಪುರುಷೋತ್ತಮ ಮುಡೂರು ಹಾಗೂ ಗ್ರಾಮಸ್ವರಾಜ್ ತಂಡ ಮುಖಂಡ, ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಅಳ್ಪೆ ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement