ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಈ ಸಂದರ್ಭ 9 ದಿನಗಳ ಕಾಲ ವಿವಿಧ ಕಲಾವಿದರಿಂದ ಕಲಾಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಅ.15 ರಿಂದ 23 ವರೆಗೆ ಪಂಜ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾದಿಗಳು ಹಾಗೂ ವಿಶೇಷ ಕಲಾ ಪ್ರಕಾರಗಳ ಸೇವೆಗಳು ಜರಗಲಿದೆ.
ನವರಾತ್ರಿ ಪೂಜಾ ಸಮಯದಲ್ಲಿ ಅಮ್ಮನವರಿಗೆ ಕಲಾ ಸೇವೆ ಹಲವು ಮಂದಿ ನೀಡಲಿದ್ದಾರೆ. ಅ.15 ರಂದು ಚೆಂಡೆ : ಸುಬ್ರಹ್ಮಣ್ಯ ಭಟ್ ದೇವಸ್ಯ ಅವರಿಂದ, ಅ.16 ರಂದು ತಬಲಾ : ಎನ್.ಪಿ. ಪವನ್ ಆಚಾರ್ ಅವರಿಂದ, ಅ.17 ರಂದುವೇದಮಂತ್ರ : ವೈದಿಕರಿಂದ, ಅ.18 ರಂದು ಯಕ್ಷ-ಗಾನ : ಗೋಪಾಲಕೃಷ್ಣ ಭಟ್ ದೇವಸ್ಯ, ಸುಭಾಷ್ ಪಂಜ, ರಚನಾ ಚಿತ್ಕಲ್, ಸುಬ್ರಹ್ಮಣ್ಯ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ, ಗಗನ್ ಪಂಜ ಮತ್ತು ಇತರರಿಂದ, ಅ.19 ರಂದು ಭರತನಾಟ್ಯ : ಸರಯು ವಿ. ಮುಚ್ಚಲ, ಶಂಖನಾದ : ಸುಂದರ ದೇವಾಡಿಗ, ಅ.20 ರಂದು ವೇಣುವಾದನ : ರಾಮಚಂದ್ರ ಕಲ್ಕಣ್ಣ ಮತ್ತು ತಂಡದವರು, ಅ.21 ರಂದು ಭರತನಾಟ್ಯ : ವಸುಧಾ ಬಿ. ಮುಚ್ಚಿಲ, ಸ್ತುತಿ ರೈ ಅಡ್ಡಬೈಲು ಅವರಿಂದ, ಅ.22 ರಂದು ಭಕ್ತಿ ಸಂಗೀತ : ಸುಮಾ ಕೋಟೆ ಅವರಿಂದ, ಅ.23 ರಂದು ಪುರಾಣ ವಾಚನ : ಕೃಷ್ಣ ಭಟ್ ಸಂಪ ಅವರಿಂದ ನಡೆಯಲಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…