ಪ್ರಕೃತಿ ಎಂದರೇ ದೇವರು. ಪ್ರಕೃತಿ ಮುನಿದರೆ ದೇವನು ಮುನಿದಂತೆಯೇ. ಹೀಗಾಗಿ ಪ್ರಕೃತಿ ಆರಾಧನೆಗೆ ಹಿಂದಿನಿಂದಲೂ ಮಹತ್ವ ಇದೆ. ಅಂತಹದ್ದೇ ಕಾರ್ಯವೊಂದು ಇತಿಹಾಸ ಪ್ರಸಿದ್ಧ , ಪಂಜ ಸೀಮೆಯ ಒಡೆಯ ಪಂಜದ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುತ್ತದೆ. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತವು ಪ್ರತೀ ವರ್ಷ ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದೆ.
View this post on Instagram
Advertisement
ಪಂಜ ಸೀಮೆಯ, ಇಡೀ ಸುಳ್ಯ ತಾಲೂಕು ಹಾಗೂ ಕಡಬ ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ನಡೆಯುವ ಮುನ್ನ ಅಂದರೆ ಫೆ. 2 ರಂದು ಮೂಲ ನಾಗ ತೀರ್ಥದಲ್ಲಿ ಪೂಜೆ ನಡೆಯುತ್ತದೆ. ಬಂಟಮಲೆಯ ಕಾಡಿನ ತಪ್ಪಲು ಪ್ರದೇಶವಾದ ಈ ಜಾಗದಲ್ಲಿ ಅಂದರೆ ಗಧಾತೀರ್ಥ ಪ್ರದೇಶ ನೀರಿನ ಮೂಲಕ್ಕೆ ಪೂಜೆ ನಡೆಯುತ್ತದೆ. ಅದಾದ ಬಳಿಕ ತೀರ್ಥವನ್ನು ದೇವಸ್ಥಾನಕ್ಕೆ ತರಲಾಗುತ್ತದೆ. ಈ ಮೂಲಕ ಪ್ರಕೃತಿಯ ಆರಾಧನೆ ನಡೆಯುತ್ತದೆ. ದೇವಸ್ಥಾನದ ಅರ್ಚಕರು, ತಂತ್ರಿಗಳು ಪೂಜೆ ಕಾರ್ಯ ನೆರವೇರಿಸುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
#panjatemple #panjajatre pic.twitter.com/qsGcYefJ7o
Advertisement— theruralmirror (@ruralmirror) February 2, 2022

ರೂರಲ್ ಮಿರರ್ ವಿಶೇಷ ಪ್ರತಿನಿಧಿ.
Be the first to comment on "ಪಂಜ ದೇವಸ್ಥಾನದಲ್ಲಿ ಪ್ರಕೃತಿ ಆರಾಧನೆ…! | ಪ್ರತೀ ವರ್ಷ ನಡೆಯುವ ವಿಶೇಷ ಆಚರಣೆ ಇದು..! |"