ಪಂಜದ ಕುಡಿಯುವ ನೀರಿನ ಟ್ಯಾಂಕ್‌ ಸಮಸ್ಯೆ | ಜನರ ಹೋರಾಟಕ್ಕೆ ಸಿಕ್ಕಿದ ಮಾನ್ಯತೆ | ಪೈಪ್‌ ಲೈನ್‌ ಸರ್ವೆ ಕಾರ್ಯ ನಡೆಸಿದ ಇಲಾಖೆ | |

September 19, 2021
10:02 PM

ಸುಳ್ಯ ತಾಲೂಕಿನ ಪಂಜದ ಅಳ್ಪೆ ಚಿಂಗಾಣಿಗುಡ್ಡೆಯಲ್ಲಿ ಅನೇಕ ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ಮಾಡಲಾಗಿತ್ತು. ಆದರೆ ಟ್ಯಾಂಕ್‌ ಗೆ  ನೀರು ಸರಬರಾಜು ಆಗದೆ ಇಡೀ ಯೋಜನೆ ವಿಫಲವಾಗಿತ್ತು. ಹೀಗಾಗಿ ಚಿಂಗಾಣಿ ಗುಡ್ಡೆಯ ನಾಗರಿಕರು ಹಾಗೂ ಸಾಮಾಜಿಕ ಹೋರಾಟಗಾರ ಜಿನ್ನಪ್ಪ  ಅಳ್ಪೆ ಅವರು  ಈ ಬಗ್ಗೆ ಹೋರಾಟ ನಡೆಸಿದ್ದರು. ಇದೀಗ ಪೈಪ್‌ ಲೈನ್‌ ಸರ್ವೆ ಕಾರ್ಯ ಆರಂಭವಾಗಿದೆ.

Advertisement
Advertisement
Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಪಂಜದಲ್ಲಿ  ನೀರಿನ ಟ್ಯಾಂಕ್‌ ರಚನೆಯಾಗಿ ಅದಕ್ಕೆ ಪುಳಿಕುಕ್ಕು ಬಳಿಯಲ್ಲಿ ಹಾದುಹೋಗುವ ಕುಮಾರಧಾರೆಯಿಂದ ನೀರು ಹಾಯಿಸುವುದು  ಯೋಜನೆಯ ಉದ್ದೇಶವಾಗಿತ್ತು. ಆದರೆ ಕಾಮಗಾರಿಗೂ ಮುನ್ನ ಸರಿಯಾದ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ  ಇಡೀ ಯೋಜನೆ ವಿಫಲವಾಗಿತ್ತು, ನೀರಿನ ಟ್ಯಾಂಕ್‌ ಗೆ ಕುಮಾರಧಾರಾ ನದಿಯಿಂದ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ಕಾರಣವನ್ನು  ತಿಳಿಸಲಾಗಿತ್ತು. ಹೀಗಾಗಿ ಈ ಬಗ್ಗೆ ಹಲವು ವರ್ಷಗಳಿಂದ ಸ್ಥಳೀಯರು ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು. ಹಾಗಿದ್ದರೂ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ  ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಂದರ್ಭದಲ್ಲೂ ವಿರೋಧ ಬಂದು ವಿವಿಧ ಬೇಡಿಕೆಗಳನ್ನಿಟ್ಟು ನಾಗರಿಕರು  ತಂಡ ಕಟ್ಟಿ ಗ್ರಾಮಸ್ವರಾಜ್ಯ ತಂಡ ಕಟ್ಟಿ ಸ್ಫರ್ಧೆ ಮಾಡಿದ್ದರು. ಯಾವುದೇ ಕಾರಣಕ್ಕೂ ಈ ನೀರಿನ ಯೋಜನೆ ವಿಫಲವಾಗಬಾರದು ಎಂದು  ಸತತ ಹೋರಾಟ ನಡೆಸುತ್ತಿದ್ದರು. ಇಲಾಖೆಗಳಿಗೆ ಮನವಿ ಮಾಡಿ ಹೋರಾಟ ನಡೆಸುವುದಾಗಿ ತಿಳಿಸಿದ್ದರು.

Advertisement

ಇದೀಗ 7  ವರ್ಷಗಳ ಹಿಂದೆ ರಚನೆಯಾದ ಈ ಯೋಜನೆಗೆ ನೀರು ಹಾಯಿಸುವ ಉದ್ದೇಶದಿಂದ ಪುಳಿಕುಕ್ಕಿನಿಂದ ಪೈಪ್‌ ಲೈನ್‌ ಅಳವಡಿಕೆಗೆ ಸರ್ವೆ ಕಾರ್ಯ ನಡೆದಿದೆ. ಈ ಬಾರಿ ಟ್ಯಾಂಕ್‌ ಗೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತದೆ ಎಂದು ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಸುಂದರಯ್ಯ ತಿಳಿಸಿದ್ದಾರೆ.

Advertisement

ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯೊಂದು ಸಾರ್ವಜನಿಕರ ಹಾಗೂ ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಮತ್ತೆ ಯೋಜನೆ ಚಾಲೂ ಆಗುವ ಸ್ಥಿತಿಗೆ ಬಂದಿದೆ.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror