ಸೋಮವಾರಪೇಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸೋಮವಾರಪೇಟೆ ಅರಣ್ಯ ವಲಯದ ಆಶ್ರಯದಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಸೋಮವಾರಪೇಟೆಯ ಚೌಡ್ಲು ಸರ್ಕಾರಿ ಪ್ರೌಢಶಾಲೆಯ ಅನನ್ಯ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ತಾಲೂಕು ಮಟ್ಟದ ಪರಿಸರ ಜಾಗೃತಿ ಆಂದೋಲನದ ಅಂಗವಾಗಿ ‘ಒಂದೇ ಒಂದು ಭೂಮಿ ‘ ಎಂಬ ಘೋಷಣೆಯಡಿ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಡಿ.ಪಿ.ಧರ್ಮಪ್ಪ ( ಪ್ರೌಢಶಾಲೆ), ಟಿ.ಕೆ.ಬಸವರಾಜು( ಪ್ರಾಥಮಿಕ ಶಾಲೆ), ಎಸ್.ವಿರೂಪಾಕ್ಷ ( ವೃತ್ತಿ ಶಿಕ್ಷಣ), ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಬಸವರಾಜಪ್ಪ, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕ ಮಧುಕುಮಾರ್, ಶಿಕ್ಷಕರಾದ ಕೆ.ಮೂರ್ತಿ, ಧನ್ಯ, ಬಿಇಓ ಕಛೇರಿಯ ಅಧೀಕ್ಷಕ ಎನ್.ಜಿ.ಕಿರಣ್, ಡಿ.ಆರ್.ಎಫ್.ಓ.ಸತೀಶ್ ಕುಮಾರ್, ಬಿ ಆರ್ ಪಿ ಎನ್.ಲೋಕೇಶ್, ಶಿಕ್ಷಕರಾದ ಉ.ರಾ.ನಾಗೇಶ್, ಬಸವರಾಜ್ ಬಡಿಗೇರ್ ಇತರರು ಇದ್ದರು.
ಪರಿಸರ ಜಾಥಾದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಕೂಗಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel