ಪ್ರಸ್ತುತ ದಿನಗಳಿಗೆ ಹೋಲಿಸಿದರೆ ಅಂದಿನ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಅವಕಾಶಗಳು ಇರಲಿಲ್ಲ.ಆದರೆ ಈಗ ವಿದ್ಯಾರ್ಜನೆಗೈಯುವ ವಿದ್ಯಾರ್ಥಿಗಳು ಓಡುತ್ತಿರುವ ಕಾಲದ ಜೊತೆ ಸೇರಿಕೊಂಡಿದ್ದಾರೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವಿಪುಲವಾದ ಅವಕಾಶಗಳಿವೆ. ಹಾಗಾಗಿ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ‘ಪಥ’ದಂತಹ ಒಳ್ಳೆಯ ಕಥೆಗಳು, ಕಿರುಚಿತ್ರಗಳು ಇನ್ನೂ ಹೆಚ್ಚು ಮೂಡಿಬರಲಿ ಎಂದುಖ್ಯಾತ ನಟ,ಬಿಗ್ ಬಾಸ್ ನ ವಿನ್ನರ್‍ರೂಪೇಶ್ ಶೆಟ್ಟಿ ಮಾತನಾಡಿದರು.
ಪುತ್ತೂರಿನ ವಿವೇಕಾನಂದಕಾಲೇಜಿನ(ಸ್ವಾಯತ್ತ) ಐಕ್ಯೂಎಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ‘ಪಥ’ ಕನ್ನಡಕಿರುಚಿತ್ರದ ಬಿಡುಗಡೆ ಸಮಾರಂಭದಲ್ಲಿಉದ್ಘಾಟಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿಇನ್ನೋರ್ವ ಮುಖ್ಯಅತಿಥಿಯಾಗಿ ಭಾಗವಹಿಸಿದ ತುಳುನಾಡಿನ ಖ್ಯಾತ ಹಾಸ್ಯ ನಟ, ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ ಮಾತನಾಡಿ, ವಿವೇಕಾನಂದ ಕಾಲೇಜು ಪಠ್ಯದ ಜೊತೆಗೆ ಪಠ್ಯತರ ಕಾರ್ಯಗಳಿಗೆ ಬೆನ್ನೆಲುಬಾಗಿದೆ.ಮಕ್ಕಳು ಓದುವುದರ ಜೊತೆಗೆ ತಮಗೆಯಾವ ವಿಷಯದಲ್ಲಿ ಆಸಕ್ತಿ ಇವೆಯೋ ಅದರಲ್ಲಿ ಭಾಗವಹಿಸುವಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣಕೆ.ಎನ್ ಮಾತನಾಡಿ, ಮಕ್ಕಳ ಬೆಳವಣಿಗೆ ನಮ್ಮ ಸಹಕಾರ ಎಂದಿಗೂ ಇದ್ದೇ ಇರುತ್ತದೆ.ಶಿಕ್ಷಣದ ಜೊತೆಗೆಇತರ ಚಟುವಟಿಕೆಗಳೂ ಅಗತ್ಯ ಎಂದರು.
ಪಥ ಕಿರುಚಿತ್ರವು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಅಚಲ್ ಉಬರಡ್ಕ ನಿರ್ದೇಶಿಸಿ, ಯೋಶಿತ್ ಬನ್ನೂರು ಛಾಯಾಗ್ರಹಣ ಹಾಗೂ ಸಂಕಲನವನ್ನು ನಮನ್ ಶೆಟ್ಟಿ ಮಾಡಿದ್ದಾರೆ. ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಪಥಕಿರುಚಿತ್ರದ ನಾಯಕನಾಗಿ ಅಚಲ್‍ಉಬರಡ್ಕ ಮತ್ತು ನಾಯಕಿಯಾಗಿ ವಿಷ್ರಿತ ಆಚಾರ್ಯ ಅವರು ಅಭಿನಯಿಸಿದ್ದಾರೆ ಹಾಗೂ ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ,ಅರಹಂತ್‍ಜೈನ್,ಗಗನ್‍ದೀಪ್, ಮಂಜುನಾಥ್ ಜೋಡುಕಲ್ಲು, ಸುರಕ್ಷಾ ಮುಂತಾದವರು ಅಭಿನಯಿಸಿದ್ದಾರೆ.
ವೇದಿಕೆಯಲ್ಲಿ ಪುತ್ತೂರಿನ ಕಹಳೆ ನ್ಯೂಸ್ ನ ಮುಖ್ಯ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ, ಪ್ರಾಂಶುಪಾಲ ಪ್ರೊ.ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ್ ಹೆಚ್ ಜಿ, ವಿಶೇಷ ಅಧಿಕಾರಿ ಶ್ರೀಧರ್ ನಾಯ್ಕ್ ಭಟ್ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ಪ್ರಸ್ತಾವಿಸಿ ಸ್ವಾಗತಿಸಿದರು.ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ವಂದಿಸಿ, ಹರಿಪ್ರಸಾದ್ ನಿರೂಪಿಸಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…