ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಪಾವಂಜೆ ಶ್ರೀಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು. ವಿಶ್ವನಾಥ ಪುಚ್ಚಪ್ಪಾಡಿ ಹಾಗೂ ಮನೆಯವರಿಂದ ಸೇವೆಯಾಟವಾಗಿ ಶ್ರೀದೇವಿ ಮಹಾತ್ಮೆ ಪ್ರಸಂಗ ನಡೆಸಲಾಗಿತ್ತು. ಈ ಸಂದರ್ಭ ಕಲಾವಿದ ಕುಮಾರ ಸುಬ್ರಹ್ಮಣ್ಯ ಹಾಗೂ ಖ್ಯಾತ ಭಾಗವತ ಸತೀಶ್ ಶಟ್ಟಿ ಪಟ್ಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಖ್ಯಾತ ಭಾಗವತ ಸತೀಶ್ ಶಟ್ಟಿ ಪಟ್ಲ, ಕುಮಾರ ಸುಬ್ರಹ್ಮಣ್ಯ ಅವರು ಅತ್ಯಂತ ಹಿರಿಯರೂ ಗುರುಗಳೂ ಆಗಿದ್ದಾರೆ. ಅನೇಕರಿಗೆ ಯಕ್ಷಗಾನ ಕಲೆಯನ್ನು ಧಾರೆ ಎರೆದವರು. ಹೀಗಾಗಿ ಸೂಕ್ತ ವ್ಯಕ್ತಿಗೆ ಸನ್ಮಾನ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ ಕೆ ಬೆಳ್ಯಪ್ಪ ಗೌಡ, ಯಕ್ಷಗಾನ ಸಂಘಟಕ ಡಾ.ವಿಷ್ಣುಪ್ರಸಾದ್ , ಸೇವಾಕರ್ತರಾದ ವಿಶ್ವನಾಥ ಪುಚ್ಚಪ್ಪಾಡಿ, ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ ಉಪಸ್ಥಿತರಿದ್ದರು. ಇದೇ ವೇಳೆ ಪುಚ್ಚಪ್ಪಾಡಿ ಮನೆಯವರ ಪರವಾಗಿ ಬ್ರಿವೆರಾ ಟೆಕ್ನಾಲಜೀಸ್ ನ ವೆಂಕಟೇಶ್ ಪುಚ್ಚಪ್ಪಾಡಿ ಅವರು ಯಕ್ಷದ್ರುವ ಪೌಂಡೇಶನ್‌ಗೆ ದೇಣಿಗೆ ನೀಡಿದರು.
ಅಪರ್ಣಾ ಪುಚ್ಚಪ್ಪಾಡಿ ಸ್ವಾಗತಿಸಿ ನಿರೂಪಿಸಿದರು. ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…