ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆಲುಗು ನಟ ಪವನ್ ಕಲ್ಯಾಣ್ ಭೇಟಿ | ಭೂ ಸುಪೋಷಣ್ ಕಾರ್ಯಕ್ರಮದಲ್ಲಿ ಭಾಗಿ | ಸ್ವಚ್ಛತೆಗೆ ಸಹಕರಿಸಲು ಭಕ್ತಾದಿಗಳಿಗೆ ಮನವಿ |

March 29, 2022
9:07 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮಂಗಳವಾರ ಭೇಟಿ ನೀಡಿದರು. ದೇವಾಲಯದಲ್ಲಿ ಆಶ್ಲೇಷಾ ಬಲಿ ಪೂಜೆ ಹಾಗೂ ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಮರ್ಪಣೆ ಸಮರ್ಪಿಸಿ ಪ್ರಾರ್ಥಿಸಿದರು. ಇದೇ ವೇಳೆ ದೇವಸ್ಥಾನದ ಭೂ ಸುಪೋಷಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ , ಸಸಿಯನ್ನು ನೆಟ್ಟರು.

Advertisement
Advertisement

ಇದೇ ವೇಳೆ ದೇವಾಲಯದ  500 ಕ್ಕೂ ಮಿಕ್ಕಿದ ನೌಕರರು  ಆಡಳಿತ ಮಂಡಳಿಯೊಂದಿಗೆ ಸೇರಿ ಪ್ರತಿ ಏಕಾದಶಿಯಂದು ನಡೆಯುವ  ಸ್ವಚ್ಛ ಮಂದಿರ ಸೇವಾ ಅಭಿಯಾನದ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಲಯದ ಪಾವಿತ್ರತೆ ಹಾಗೂ ಪರಂಪರೆಯನ್ನು ಮುಂದುವರಿಸೋಣ ಎಂದರು.

ವಿಶೇಷವಾಗಿ ದೇವಾಲಯಕ್ಕೆ ಬರುವ ಭಕ್ತಾದಿಗಳಲ್ಲಿ  ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಮನವಿ ಮಾಡಿದರು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದಲ್ಲಿ ಎಸೆದು ನಾಗ ಸಂಕುಲಗಳಿಗೆ  ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ
ಸುಳ್ಯದಲ್ಲಿ ಜೇನು ಚಾಕಲೇಟ್ ಬಿಡುಗಡೆ | ಜೇನಿನಿಂದಲೇ ಚಾಕಲೇಟ್ ಉತ್ತಮ ಬೆಳವಣಿಗೆ – ಶೋಭಾ ಕರಂದ್ಲಾಜೆ
May 23, 2025
9:54 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group