ತನ್ನ ಜಮೀನಿನಲ್ಲಿ ಟರ್ಕಿ ದೇಶದ ಸಜ್ಜೆ ಬೆಳೆದು ಉತ್ತಮ ಫಸಲು ಕಾಣುತ್ತಿರುವ ಯಶಸ್ವಿ ರೈತ ಈಗ ಮಾದರಿಯಾಗಿದ್ದಾರೆ. ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದ ರೈತ ಯೋಗೇಶ್ ಬರವನ್ನೂ ಮೆಟ್ಟಿನಿಂತು ತಮ್ಮ ಜಮೀನಿನಲ್ಲಿ ಪ್ರಯೋಗಾರ್ಥವಾಗಿ ಟರ್ಕಿ ದೇಶದ ಸಜ್ಜೆ ಬೆಳೆದು ಮಾದರಿ ಆಗಿರುವ ರೈತ.…..ಮುಂದೆ ಓದಿ….
ಸಾಮಾನ್ಯವಾಗು ರೈತರು ದೇಶೀಯ ಸಜ್ಜೆಯನ್ನು ನಾಟಿ ಮಾಡುತ್ತಾರೆ. ಸ್ವದೇಶಿ ತಳಿಯ ಸಜ್ಜೆ ಹಾಕಿದರೆ ಗಿಡ ಮೂರರಿಂದ ನಾಲ್ಕು ಅಡಿ ಬೆಳೆಯುತ್ತದೆ. ಸಜ್ಜೆ ಒಂದು ಗಿಡಕ್ಕೆ ಒಂದು ತೆನೆ ಬರುತ್ತದೆ. ಈ ತೆನೆ ಒಂದರಿಂದ ಒಂದೂವರೆ ಅಡಿ ಮಾತ್ರ ದೊಡ್ಡದಿರುತ್ತದೆ. ಆದರೆ ಟರ್ಕಿ ದೇಶದ ಸಜ್ಜೆಯ ಗಿಡದ ಬಹುಪಾಲು ತೆನೆಯೇ ಇರಲಿದೆ. ಇದರ ಒಂದೊಂದು ತೆನೆಯೂ ಮೂರರಿಂದ ಐದು ಅಡಿ ಎತ್ತರವಿರಲಿದೆ. ಇಷ್ಟು ದೊಡ್ಡ ತೆನೆ ಸಂಪೂರ್ಣವಾಗಿ ಕಾಳುಕಟ್ಟಿದ್ದು, ಎಕರೆಗೆ 13 ರಿಂದ 15 ಕ್ವಿಂಟಲ್ ಇಳುವರಿ ಬರುವ ಸಾಧ್ಯತೆ ಇದೆ.
ಹೊಸ ಪ್ರಯೋಗ ಮಾಡಿರುವ ರೈತ ಯೋಗೇಶ್ ಅವರು ಹೇಳುವ ಪ್ರಕಾರ, ಟರ್ಕಿ ದೇಶದಲ್ಲಿ ಸಜ್ಜೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಫಸಲುಗಳಲ್ಲಿ ಒಂದಾಗಿದೆ. ಟರ್ಕಿ ತಳಿ ರೈತರಿಗೆ ವರದಾನವಾಗಿದೆ ಎನ್ನುತ್ತಾರೆ.
ಯೋಗೇಶ್ ಅವರ ಪ್ರಯತ್ನವನ್ನು ವೀಕ್ಷಿಸಿದ ಸ್ಥಳೀಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಮಾದರಿಯ ತಳಿ ನೋಡಿರುವುದು ಎನ್ನುತ್ತಾರೆ ರೈತ ಮರ್ತುಜಾಸಾಬ್. ಸಜ್ಜೆಯ ಹೊಸ ತಳಿ ಪರಿಚಯವಾಗಿರುವದು ರೈತರಿಗೆ ಅನುಕೂಲವಾಗಿದ್ದು, ಈ ತಳಿಯಿಂದ ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಾಲ್ ಇಳುವರಿ ಪಡೆಯುವ ನಿರೀಕ್ಷೆ ಇದೆ ಎಂದು ರೈತ ಕೋಟೇಶ ಹೇಳುತ್ತಾರೆ.…..ಮುಂದೆ ಓದಿ….
ಈ ನಡುವೆ ಚಿಕ್ಕಜೋಗಿಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದ ನಾಲ್ವರು ರೈತರು ಕಡಿಮೆ ಮಳೆಗೆ ಬೆಳೆಯುವ ಟರ್ಕಿ ದೇಶದ ಸಜ್ಜೆ ಬೆಳೆದು ಬರಗಾಲಕ್ಕೆ ಸೆಡ್ಡು ಹೊಡೆದಿದ್ದಾರೆ. ರೈತರಾದ ಶೇಖರಪ್ಪ 5 ಎಕರೆ, ಪ್ರದೀಪ್ 2 ಎಕರೆ, ಮನೋಹರ್ 2 ಎಕರೆ, ಮಹಾಂತೇಶ್ ಗೌಡ 2 ಎಕರೆಯಲ್ಲಿ ಟರ್ಕಿ ಸಜ್ಜೆ ಬೆಳೆದು ಯಶಸ್ವಿಯಾಗಿದ್ದಾರೆ.ಮನೋಹರ್ ಅವರು ಈಗಾಗಲೇ 2 ಎಕರೆ ಸಜ್ಜೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಇನ್ನೂ ಮೂವರು ರೈತರು ಕಟಾವು ಮಾಡುವ ಹಂತದಲ್ಲಿದ್ದಾರೆ. ನಮ್ಮ ಪಾರಂಪರಿಕ ಸಜ್ಜೆ ಬೆಳೆ ಬೆಳೆಯಲು ಕನಿಷ್ಠ ಮೂರು ತಿಂಗಳು ಬೇಕು. ಈ ಟರ್ಕಿ ಸಜ್ಜೆ ಬೆಳೆಯಲು ಮೂರುವರೆ ತಿಂಗಳು ತೆಗೆದುಕೊಳ್ಳುತ್ತದೆ
ಕೃಷಿಯಲ್ಲಿ ಹೊಸಪ್ರಯೋಗ ಮಾಡಿ ಯಶಸ್ಸು ಕಂಡಿರುವ ರೈತ ಯೋಗೇಶ ಈಗ ಇತರ ರೈತರಿಗೂ ಮಾದರಿಯಾಗಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ.