ಹವಾಮಾನ ಬದಲಾವಣೆ ಇಂದು ಬಹುದೊಡ್ಡ ಸವಾಲಾಗಿದೆ. ಹವಾಮಾನ ಸುಸ್ಥಿರವಾದ ಸ್ಥಿತಿಗೆ ಬರಲು ಪರಿಸರ ಉಳಿವು-ರಕ್ಷಣೆ ಅಗತ್ಯ ಇದೆ. ಹೀಗಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಹೂಗುಚ್ಛದ ಬದಲಾಗಿ ಗಿಡಗಳನ್ನು ನೀಡಬೇಕು. 2025 ರಲ್ಲಿ ಇದೊಂದು ಅಭಿಯಾನವಾಗಬೇಕು ಎಂದು ಒಡಿಶಾದ ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ಹೇಳಿದ್ದಾರೆ.…..ಮುಂದೆ ಓದಿ….
ಹೊಸ ವರ್ಷ ಅಂದರೆ 2025 ರಲ್ಲಿ ಉಡುಗೊರೆಯಾಗಿ ಗಿಡಗಳನ್ನು ನೀಡುವಂತೆ ಜನರಿಗೆ ಮನವಿ ಮಾಡಿದ ಸಚಿವರು, ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ಈ ವಿನೂತನ ಅಭಿಯಾನವು ನಡೆದು ಇಡೀ ದೇಶದಲ್ಲಿ ಇದೊಂದು ಕ್ರಾಂತಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು. ಹಸಿರು ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ಜನರ ಸಹಭಾಗಿತ್ವ ಅಗತ್ಯವಾಗಿದೆ. ಇದಕ್ಕಾಗಿ ಹೊಸ ವರ್ಷದ ಸಂದರ್ಭದಲ್ಲಿ ಹೂಗುಚ್ಛಗಳ ಬದಲಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಎಂದು ಮನವಿ ಮಾಡಿದರು.
ಪರಿಸರ ಸಮಸ್ಯೆ, ಹವಾಮಾನ ಬದಲಾವಣೆಯನ್ನು ಪರಿಹರಿಸಲು ಈ ವಿನೂತನ ಅಭಿಯಾನವು ಕ್ರಾಂತಿಯಾಗಬೇಕು, 2036 ರ ವೇಳೆಗೆ ಒಡಿಶಾ ತನ್ನ ಹಿಂದಿನ ಪರಿಸರದ ಸ್ಥಿತಿಗೆ ಮರಳಬೇಕಿದೆ. ಹೀಗಾಗಿ ಗಿಡ ನೆಡಲು ಜನರನ್ನು ಒಳಗೊಂಡ ಆಂದೋಲನವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಒಡಿಶಾದ ಬಕುಲ್ ಪೌಂಡೇಶನ್ ಕಳೆದ 15 ವರ್ಷಗಳಿಂದ “ನನ್ನ ಮರ ಅಭಿಯಾನ”ವನ್ನು ನಡೆಸುತ್ತಿದೆ. ಪೌಂಡೇಶನ್ ನಡೆಸಿದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದ್ದರು.