ಚೀನಾದಲ್ಲಿ ಎಳೆ ಅಡಿಕೆಗೆ ಬೇಡಿಕೆ | ಅಡಿಕೆ ಕ್ಯಾಂಡಿಯತ್ತ ಆಕರ್ಷಿತರಾದ ಜನ | ಜನಪ್ರಿಯತೆ ಹೆಚ್ಚಿಸುತ್ತಿರುವ ಅಡಿಕೆ ಕ್ಯಾಂಡಿ |

October 24, 2024
7:51 AM
ಅಡಿಕೆ ಕ್ಯಾಂಡಿ ಶುಂಠಿ ಕ್ಯಾಂಡಿಯಂತೆ ಸಿಹಿಯಾದ, ಸ್ವಲ್ಪ ಮಸಾಲೆಯುಕ್ತ ರುಚಿಯನ್ನು ಹೊಂದಿರುತ್ತದೆ. ಇದು  ಗಂಟಲು ನೋವು ಶಮನಕಾರಿಯಾಗುತ್ತದೆ ಮತ್ತು ದೇಹವನ್ನು ಬೆಚ್ಚಗಾಗಿಸುತ್ತದೆ. ಆದ್ದರಿಂದ ಇದು ಚೀನಾದಲ್ಲಿ ಬಹಳ ಜನಪ್ರಿಯವಾಗಿದೆ. 

ವಿಶ್ವದ ಹಲವು ಕಡೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಮಿತಿಯಲ್ಲಿ ಸೇವಿಸುವ ಯಾವುದೂ ಕೂಡಾ ಹಾನಿಕಾರಕವಾಗಲು ಸಾಧ್ಯವಿಲ್ಲ. ಮಿತಿ ಇಲ್ಲದೆ ಸೇವಿಸುವ ಎಲ್ಲವೂ ಹಾನಿಕಾರಕವೇ ಆಗಿದೆ. ವಿಶ್ವದ ಹಲವು ಕಡೆ ಅಡಿಕೆ ಉಪಯೋಗ ಈಗಲೂ ಇದೆ. ಅದರಲ್ಲೂ ಚೀನಾದಲ್ಲಿ ಅಡಿಕೆಯಿಂದ ವಿವಿಧ ಬಗೆಯ ಉತ್ಪನ್ನ ತಯಾರಿಸುತ್ತಾರೆ. ಈಗ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿದೆ. ಚೀನಾದ ಅಡಿಕೆ ಮಾತ್ರವಲ್ಲ ವಿಯೆಟ್ನಾಂನಿಂದಲೂ ಹಸಿ ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ.

Advertisement
Advertisement

ಕೆಲವು ಸಮಯಗಳಿಂದ ಚೀನಾದ ಅಡಿಕೆ ವ್ಯಾಪಾರಿಗಳು ವಿಯೆಟ್ನಾಂನಿಂದ ಸಾಕಷ್ಟು ಪ್ರಮಾಣದಲ್ಲಿ ಹಸಿ ಅಡಿಕೆಯನ್ನು ಖರೀದಿ ಮಾಡುತ್ತಿದ್ದರು. ಏಕೆ ಎಂಬುದರ ಬಗ್ಗೆ ಅರಿವು ಇರಲಿಲ್ಲ. ಅದರ ಹಿಂದೆಯೇ ಹೋದಾಗ ಚೀನಾದಲ್ಲಿ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಹಸಿ ಅಡಿಕೆ ದರವೂ ಅಲ್ಲಿ ಏರಿಕೆಯಾಗಿದೆ.

ಚೀನಾದ ವ್ಯಾಪಾರಿಗಳು ಅಡಿಕೆ ಕ್ಯಾಂಡಿ ಮಾಡಲು ವಿಯೆಟ್ನಾಂನಿಂದ ಎಳೆಯ ವೀಳ್ಯದೆಲೆಗಳನ್ನು ಖರೀದಿಸುತ್ತಿದ್ದಾರೆ. ಎಳೆಯ ವೀಳ್ಯದೆಲೆಗಳನ್ನು ಕುದಿಸಿ, ನಂತರ ಒಣಗಿಸಿ ಚೀಲಗಳಲ್ಲಿ ಪ್ಯಾಕ್ ಮಾಡಿ ಚೀನೀ ಮಾರುಕಟ್ಟೆಗೆ ಕ್ಯಾಂಡಿ ಮಾಡಲು ರಫ್ತು ಮಾಡಲಾಗುತ್ತದೆ. ಈ ಕ್ಯಾಂಡಿ ಶುಂಠಿ ಕ್ಯಾಂಡಿಯಂತೆ ಸಿಹಿಯಾದ, ಸ್ವಲ್ಪ ಮಸಾಲೆಯುಕ್ತ ರುಚಿಯನ್ನು ಹೊಂದಿರುತ್ತದೆ. ಇದು  ಗಂಟಲು ನೋವು ಶಮನಕಾರಿಯಾಗುತ್ತದೆ ಮತ್ತು ದೇಹವನ್ನು ಬೆಚ್ಚಗಾಗಿಸುತ್ತದೆ. ಆದ್ದರಿಂದ ಇದು ಚೀನಾದಲ್ಲಿ ಬಹಳ ಜನಪ್ರಿಯವಾಗಿದೆ.

ಈಚೆಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಯೆಟ್ನಾಂನ ಅಡಿಕೆ ವ್ಯಾಪಾರಿ ಅನ್ಹಾ ಅವರು,  ಹಸಿ ಅಡಿಕೆಯನ್ನು ಒಣಗಿಸಿ ಚೀನಾಕ್ಕೆ ರಪ್ತು ಮಾಡುವ ಬಗ್ಗೆ ಹೇಳಿದ್ದರು , ಈ ಅಡಿಕೆಯನ್ನು ಕ್ಯಾಂಡಿ ಉತ್ಪಾದನೆಗಾಗಿ ಬಳಕೆ ಮಾಡುತ್ತಾರೆ ಎಂದೂ ಹೇಳಿದ್ದರು. ಈ ವ್ಯಾಪಾರಿ ಪ್ರತಿದಿನ 12-15 ಟನ್‌ವರೆಗೂ ಎಳೆ ಅಡಿಕೆಯನ್ನು ಖರೀದಿಸಿ ಒಣಗಿಸುತ್ತಾರೆ. 5-6 ಕಿಲೋಗ್ರಾಂ ಹಸಿ ಅಡಿಕೆಗೆ 1 ಕೆಜಿಯಷ್ಟು ಒಣ ಅಡಿಕೆ ಲಭ್ಯವಾಗುತ್ತದೆ. ಇವರ  ಸಂಸ್ಥೆಯು ದಿನಕ್ಕೆ ಸುಮಾರು 2 ಟನ್‌ಗಳಷ್ಟು ಒಣಗಿದ ಅಡಿಕೆಯನ್ನು ಉತ್ಪಾದಿಸುತ್ತದೆ. ಒಂದು ಬ್ಯಾಚ್‌ ಒಣಗಲು 5 ದಿನ ಬೇಕಾಗುತ್ತದೆ.ಚೀನಾದ ಬೇಡಿಕೆ ಸಾಕಷ್ಟಿದೆ, ಆದರೆ ನಮಗೆ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಅಡಿಕೆ ಕ್ಯಾಂಡಿ ತಯಾರಿಕೆಗೆ ಸಣ್ಣ ಅಡಿಕೆಗಳು ಹೆಚ್ಚು ಉತ್ತಮವಾಗಿದೆ.ಅಂತಹ ಅಡಿಕೆ ಅಡಿಕೆಗೆ ಬೇಡಿಕೆಗಳೂ ಇವೆ. ಬೆಳೆದ ಅಡಿಕೆಯು ಕ್ಯಾಂಡಿ ತಯಾರಿಕೆಗೆ ಬೇಡಿಕೆ ಹಾಗೂ ಬೆಲೆಯೂ ಕಡಿಮೆಯಾಗಿರುತ್ತದೆ. ಒಂದು ಕ್ಯಾಂಡಿ ತಯಾರಿಕೆಗೆ ಅಂದರೆ 50 ಗ್ರಾಂನ ಕ್ಯಾಂಡಿಗೆ ಸುಮಾರು 10 ಒಣಗಿದ  ಅಡಿಕೆ ಬೇಕಾಗಿದೆ. ಹಸಿ ಅಡಿಕೆಯಿಂದ ತಯಾರಿಸಿದ ಕ್ಯಾಂಡಿ ಉತ್ತಮ ಬೆಲೆಗೂ ಮಾರಾಟವಾಗುತ್ತದೆ.ಇದರಿಂದ ಯಾವುದೇ ಹಾನಿಯೂ ಇರುವುದಿಲ್ಲ ಎನ್ನುವುದು ಈಗ ಬಹಿರಂಗವಾಗುತ್ತಿದೆ. ಈ ಕಾರಣದಿಂದಲೇ ಚೀನಾದಲ್ಲಿ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿದೆ. ವಿಶೇಷವಾಗಿ ಶೀತಪ್ರದೇಶಗಳಲ್ಲಿ ಗಂಟಲು ನೋವು ನಿವಾರಣೆ ಹಾಗೂ ದೇಹವನ್ನು ಬೆಚ್ಚಗಿರಿಸಲು ಇದು ಸಹಕಾರಿಯಾಗಿದೆ.

Advertisement

ಅಡಿಕೆ ಕ್ಯಾಂಡಿಯು ಗಟ್ಟಿಯಾದ ಹೊರ ಕವಚವನ್ನು ಹೊಂದಿದ್ದು ಅದು ಅಗಿಯುತ್ತಲೇ ನಿಧಾನದಲ್ಲಿ ಮೆತ್ತಗಾಗುತ್ತದೆ. ದೀರ್ಘ ಕಾಲ ಬಾಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಲ್ಪ ಕಹಿಯಾದ ನಂತರದ ರುಚಿಯೊಂದಿಗೆ ಅದು ಸಿಹಿಯಾಗಿರುತ್ತದೆ. ಚೂಯಿಂಗ್ ಗಮ್ ನಂತಹ  ತಾಜಾತನವನ್ನು ಹೊಂದಿದೆ. ಜಗಿಯಿದ ನಂತರ, ಇದು ಅಡಿಕೆ ಹುಡಿಯಂತೆಯೇ ಬಾಯಿಯೂ ಸ್ವಲ್ಪ ಕೆಂಪಾಗುತ್ತದೆ.ಗ್ರಾ ಹಕರು ಸಾಮಾನ್ಯವಾಗಿ ಈ ಕ್ಯಾಂಡಿಯನ್ನು ಚಹಾದ ನಂತರ ಸುವಾಸನೆಯ ಅನುಭವಕ್ಕಾಗಿ ಜಗಿಯುತ್ತಾರೆ. ಚೀನಾದಲ್ಲಿ ವಿವಿಧ ಖಾದ್ಯಗಳ ಜೊತೆಗೆ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.

ಈಚೆಗೆ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಹಸಿ ಅಡಿಕೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಅಡಿಕೆ ಉತ್ಪಾದನೆಯೂ ಇಳಿಕೆಯಾಗುತ್ತಿದೆ. ವಾತಾವರಣದ ಕಾರಣದಿಂದ ಇಡೀ ಪ್ರಪಂಚದಲ್ಲಿಯೇ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಕಡೆಯೂ ಹವಾಮಾನದ ಕಾರಣದಿಂದ ಇಳುವರಿಯಲ್ಲಿ ಕೊರತೆಯಾಗಿದೆ. ವಿಯೆಟ್ನಾಂ, ಚೀನಾದಲ್ಲೂ ಅದೇ ಸಮಸ್ಯೆ. ತೀವ್ರವಾದ ಚಂಡಮಾರುತಗಳು ಮತ್ತು ಪ್ರವಾಹಗಳು ಕೃಷಿ ಪ್ರದೇಶಗಳನ್ನು ಹಾನಿಗೊಳಿಸಿದವು, ಇದರಿಂದಾಗಿ ಕ್ಯಾಂಡಿ ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆ ಉಂಟಾಗುತ್ತದೆ. ಈ ಕಾರಣದಿಂದ ಅಡಿಕೆ ಧಾರಣೆಯೂ ಅಲ್ಲಿ ಏರಿಕೆ ಕಂಡಿದೆ.

ಹಲವು ವರ್ಷಗಳಿಂದ ವಿಯೆಟ್ನಾಂ ಕೃಷಿ ಮತ್ತು ಗ್ರಾಮೀಣ ಸಚಿವಾಲಯವು ಅಡಿಕೆ ಬೆಳೆಯನ್ನು ಸಾಕಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಬೇಡಿ ಎಂದು ಸಲಹೆ ನೀಡಿತ್ತು.ಅಡಿಕೆಯು ಪ್ರಮುಖ ಬೆಳೆಯಲ್ಲ, ಅದು ಆಹಾರ ಬೆಳೆಯೂ ಅಲ್ಲ. ಧಾರಣೆಯೂ ಶಾಶ್ವತವಲ್ಲ ಎಂದು ಎಚ್ಚರಿಸುತ್ತಿತ್ತು. ಹೀಗಾಗಿ ಭಾರೀ ಪ್ರಮಾಣದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿರಲಿಲ್ಲ.

ಭಾರತದಲ್ಲೂ ಅಡಿಕೆ ಬೆಳೆ ವಿಸ್ತರಣೆಗೆ ಸಂಬಂಧಿಸಿ ಈಗಾಗಲೇ ಚರ್ಚೆ ನಡೆಯುತ್ತಿದೆ. ಚೀನಾ ಮಾದರಿಯಲ್ಲಿ ಭಾರತದಲ್ಲಿ ಅಡಿಕೆ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಸದ್ಯ ಗುಟ್ಕಾ ಹಾಗೂ ಪಾನ್‌ಗಳಲ್ಲಿ ಮಾತ್ರವೇ ಭಾರತದಲ್ಲಿ ಅಡಿಕೆ ಬಳಕೆಯಾಗುತ್ತಿದೆ. ಉಳಿದ ಎಲ್ಲಾ ಉತ್ಪನ್ನಗಳಲ್ಲೂ ಅಡಿಕೆ ಸಣ್ಣ ಪ್ರಮಾಣದಲ್ಲಿ ಮಾತ್ರಾ  ಬಳಕೆಯಾಗುತ್ತಿದೆ. ಹೀಗಾಗಿ ಭಾರತದಲ್ಲೂ ಅಡಿಕೆಯ ಪರ್ಯಾಯ ಉಪಯೋಗಗಳ ಬಗ್ಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಿದೆ.

There is a misconception in many parts of the world that nuts are detrimental to health. However, like any other food, Arecanuts are not harmful when consumed in moderation. It is excessive consumption of any food that can be harmful to health. Arecanuts continue to be a popular food choice in many regions worldwide.In China, Arecanuts are utilized to create a wide range of products. Currently, Arecanut candy is gaining popularity among consumers.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ
May 24, 2025
11:10 AM
by: ದ ರೂರಲ್ ಮಿರರ್.ಕಾಂ
50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18
May 24, 2025
10:37 AM
by: The Rural Mirror ಸುದ್ದಿಜಾಲ
ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು
May 24, 2025
9:56 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group