ಕಳೆದ ಎರಡು ತಿಂಗಳಲ್ಲಿ 129 ಮಿಲಿಯನ್ ಡಾಲರ್ ಮೌಲ್ಯದ 41,000 ಟನ್ ಕಾಳುಮೆಣಸನ್ನು ವಿಯೆಟ್ನಾಂ ರಫ್ತು ಮಾಡಿದೆ. ಜಾಗತಿಕವಾಗಿ ಕಾಳುಮೆಣಸಿಗೆ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಾಳುಮೆಣಸಿನ ಮಾರುಕಟ್ಟೆ ಚೇತರಿಕೆ ಕಾಣುವ ನಿರೀಕ್ಷೆ ಇದೆ ಎಂದಿ ವಿಯೆಟ್ನಾಂ ಹೇಳಿದೆ.
ವಿಯೆಟ್ನಾಂ ಈ ವರ್ಷದ ಮೊದಲ ಎರಡು ತಿಂಗಳಲ್ಲಿ 129 ಮಿಲಿಯನ್ ಡಾಲರ್ ಮೌಲ್ಯದ 41,000 ಟನ್ ಕಾಳುಮೆಣಸನ್ನು ರಫ್ತು ಮಾಡಿದೆ. ರಪ್ತು ಮಾಡಿರುವ ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂದ 35% ಹೆಚ್ಚಾಗಿದೆ, ಆದರೆ ಮೌಲ್ಯದ ಆಧಾರದಲ್ಲಿ 7.4% ಕಡಿಮೆಯಾಗಿದೆ ಎಂದು ವಿಯೆಟ್ನಾಂ ಆಮದು-ರಫ್ತು ಸಚಿವಾಲಯ ಹೇಳಿದೆ. ಈಗ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದು ಮುನ್ಸೂಚನೆ ನೀಡಿದೆ.
41,000 ಟನ್ ಕಾಳುಮೆಣಸು ರಫ್ತು ಮಾಡಿದ ವಿಯೆಟ್ನಾಂ | ಜಾಗತಿಕ ಕಾಳುಮೆಣಸು ಮಾರುಕಟ್ಟೆ ಚೇತರಿಸಿಕೊಳ್ಳುವ ಸೂಚನೆ ನೀಡಿದ ವಿಯೆಟ್ನಾಂ | https://t.co/cz2lM4VkGf#pepper
— theruralmirror (@ruralmirror) March 6, 2023
Advertisement
ವಿಯೆಟ್ನಾಂ ಮಾರುಕಟ್ಟೆಗೆ ಸಂಬಂಧಿಸಿದಂತೆ, ಚೀನಾ ಮಾರುಕಟ್ಟೆಯಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಫೆಬ್ರವರಿಯಲ್ಲಿ ಕಪ್ಪು ಮತ್ತು ಬಿಳಿ ಕಾಳುಮೆಣಸಿನ ಬೆಲೆಗಳು ತೀವ್ರವಾಗಿ ಹೆಚ್ಚಿವೆ. ಹೀಗಾಗಿ ಬೇಡಿಕೆಯ ಆಧಾರದಲ್ಲಿ ಧಾರಣೆಯೂ ಉತ್ತಮವಾಗುತ್ತಿದೆ. ಇದುವರೆಗೆ ಧಾರಣೆಗಿಂತ ಇನ್ನು ಹೆಚ್ಚಿನ ಧಾರಣೆ ಸಿಗಬಹುದು ಎಂದು ಹೇಳಿದೆ.
ಆಮದುದಾರರಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಜಾಗತಿಕ ಮೆಣಸು ಮಾರುಕಟ್ಟೆ ಚೇತರಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ವಿಯೆಟ್ನಾಂ ಸಚಿವಾಲಯ ಹೇಳಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆ ಹೊಂದಿರುವ ಕಾಳುಮೆಣಸು ಧಾರಣೆ ಭಾರತದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಾಣುವ ಸೂಚನೆ ಇದೆ.