Advertisement
ಅನುಕ್ರಮ

ಪ್ರಾದೇಶಿಕ ಒಪ್ಪಂದಕ್ಕೆ ಬಲಿಯಾಯಿತೇ ಕಾಳು ಮೆಣಸು..?

Share

ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ದಕ್ಷಿಣ ಭಾರತದ ಪ್ರಮುಖ ಬೆಳೆ.ಕಪ್ಪು ಬಂಗಾರವೆಂದು ಹೆಸರು ಪಡೆದಿರುವ ಇದು ಸಂಬಾರ ಪದಾರ್ಥಗಳಲ್ಲಿ ಶ್ರೇಷ್ಠವಾದದ್ದು.ಭಾರತದಲ್ಲಿ ಇದರ ಉತ್ಪಾದನೆ ಕರ್ನಾಟಕ, ಕೇರಳ, ತಮಿಳುನಾಡು,ಅಸ್ಸಾಂ,ಮೇಘಾಲಯ ಮುಂತಾದ ರಾಜ್ಯಗಳಲ್ಲಿ ಆಗುತ್ತಿದೆ.ಲಭ್ಯ ಇರುವ ಅಂಕಿ ಅಂಶಗಳ ಪ್ರಕಾರ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು,ಬಳಿಕದ ಸ್ಥಾನಗಳು ಕೇರಳ,ತಮಿಳ್ನಾಡು ಅಸ್ಸಾಂಗಳದ್ದು ಆಗಿದೆ.…..ಮುಂದೆ ಓದಿ….

ಭಾರತದಲ್ಲಿ ಒಟ್ಟಾಗಿ ಸುಮಾರು ಎರಡು ಲಕ್ಷದ ಇಪ್ಪತ್ತೆಂಟು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ಆಗಿ ಉತ್ಪಾದನೆ ಸುಮಾರು ಅರುವತ್ತ ನಾಲ್ಕು ಸಾವಿರ ಟನ್ ಆಗಿದೆ.ಕಳೆದ ಸಾಲಿನಲ್ಲಿ ಇದರ ಉತ್ಪಾದನೆ ಹವಾಮಾನದ ವೈಪರೀತ್ಯದಿಂದಾಗಿ ಮತ್ತಷ್ಟು ಇಳಿಕೆ ಆಗಿದೆ.ಕೆಲವು ಪ್ರದೇಶಗಳಲ್ಲಿ ಕಾರ್ಮಿಕರ ಅಭಾವದಿಂದ ಮೆಣಸು ಕೊಯಿಯುವ ಕಾರ್ಯಗಳೂ ಸರಿಯಾಗಿ ಆಗಿಲ್ಲ.ಒಟ್ಟಾರೆಯಾಗಿ ಕಳೆದ ಸಾಲಿನಲ್ಲಿ ಉತ್ಪಾದನೆ ಮೊದಲಿನ ವರ್ಷಗಳಿಗೆ ಹೋಲಿಸಿದಾಗ ಇದು ತುಂಬಾ ಕಡಿಮೆ.

ಜಾಗತಿಕ ಮಟ್ಟದಲ್ಲಿ ಇದರ ಉತ್ಪಾದನೆಯಲ್ಲಿ ವಿಯೆಟ್ನಾಮ್ ಒಂದನೇ ಸ್ಥಾನದಲ್ಲಿದ್ದು,ಎರಡನೇ ಸ್ಥಾನದಲ್ಲಿ ಭಾರತವಿದೆ.ಇನ್ನುಳಿದಂತೆ ಇಂಡೋನೇಷಿಯಾ,ಬ್ರೆಜಿಲ್, ಮಲೇಶಿಯ,ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ.ಈ ಎಲ್ಲಾ ರಾಷ್ಟ್ರಗಳು ಇದನ್ನು ರಫ್ತು ಮಾಡುವುದರೊಂದಿಗೆ ಆಮದನ್ನು ಮಾಡುತ್ತಿವೆ.

ಬೆಲೆಯಲ್ಲಿ ಏಕೆ ಏರಿಳಿತ ? : ಕಾಳು ಮೆಣಸಿನ ಬೆಲೆ ಕಳೆದ ಹಲವು ತಿಂಗಳುಗಳಿಂದ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂದು ಯುದ್ಧದ ಕಾರ್ಮೋಡ ಇದ್ದಾಗ ಇಳಿದು ಮತ್ತೆ ಏರಿ ಇದೀಗ ಇಳಿಕೆ ಹಾದಿ ಹಿಡಿದಿದೆ.ಈ ರೀತಿಯ ಪ್ರವೃತ್ತಿಗೆ ಹಲವು ಕಾರಣಗಳಿವೆ.

ಬೇಡಿಕೆ : ಜಾಗತಿಕ ಮಟ್ಟದಲ್ಲಿ ಇದರ ಬೇಡಿಕೆ ಸುಮಾರು ನಾಲ್ಕು ಲಕ್ಷದ ಅರುವತ್ತು ಸಾವಿರ ಟನ್.ಆಂತರಿಕವಾಗಿ ನಮ್ಮಲ್ಲಿರುವ ಬೇಡಿಕೆ ಸುಮಾರು ಎಪ್ಪತ್ತು ಸಾವಿರ ಟನ್.ನಮ್ಮಲ್ಲಿ ಇದಕ್ಕಿರುವ ಬೇಡಿಕೆ ಹಬ್ಬಗಳ ಸಮಯದಲ್ಲಿ ಜಾಸ್ತಿ.

ಪೂರೈಕೆ : ಕಳೆದ ಸಾಲಿನಲ್ಲಿ ಆದ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಕಡಿಮೆ. ಇದೇ ಸ್ಥಿತಿ ಭಾರತದ್ದು ಕೂಡಾ.ಪರಿಣಾಮವಾಗಿ ಇದರ ಬೆಲೆ ಏರಿಕೆಗೆ ಅವಕಾಶ ಆಯಿತು.ಹೀಗಿದ್ದರೂ ಈಗ ಬೆಲೆ ಯಾಕಾಗಿ ಹಿಮ್ಮುಖವಾಗಿ ಚಲಿಸುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.ಇದಕ್ಕೆ ಕೆಳಗೆ ಹೆಸರಿಸಿದ ಅಂಶಗಳಿಂದ ಉತ್ತರವನ್ನು ತಿಳಿದುಕೊಳ್ಳಬಹುದು.

ಪ್ರಾದೇಶಿಕ ಒಪ್ಪಂದದ ಪ್ರಭಾವ :  ಭಾರತ ಮತ್ತು ಶ್ರೀಲಂಕಾದ ಒಳಗೆ 1998 ನಲ್ಲಿ ಆದ ಮುಕ್ತ ವ್ಯಾಪಾರ ಒಪ್ಪಂದ 2000 ದ ಸಮಯದಲ್ಲಿ ಕಾರ್ಯ ರೂಪಕ್ಕೆ ಬಂತು.ಇದರ ಪ್ರಕಾರ ಅಡಿಕೆ,ತೆಂಗು, ಕಾಳು ಮೆಣಸು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಬಹುದು.ಇಲ್ಲಿ ಕಾಳು ಮೆಣಸಿಗೆ ಸಂಬಂಧ ಪಟ್ಟಂತೆ ಶ್ರೀಲಂಕಾ ಇದನ್ನು ಭಾರತಕ್ಕೆ ರಫ್ತು ಮಾಡಬಹುದು.  ಹೀಗಾಗಿ ಇಲ್ಲಿ…

  1. 500 ರೂಪಾಯಿಗಳಿಂದ ಕಡಿಮೆ ಮೌಲ್ಯದ ಕಾಳು ಮೆಣಸನ್ನು ಶ್ರೀಲಂಕಾ ಭಾರತಕ್ಕೆ ರಫ್ತು ಮಾಡುವಂತಿಲ್ಲ.
  2. ಶೇಕಡಾ 8 ಸುಂಕವನ್ನು ಅಲ್ಲಿಂದ ಆಮದಾಗುವ ಕಾಳು ಮೆಣಸಿಗೇ ವಿಧಿಸಲಾಗುವುದು.
  3. ಸುಂಕ ಸೇರಿ ಆಮದಾಗುವ ಕಾಳು ಮೆಣಸಿನ ಬೆಲೆ ರೂಪಾಯಿ 540 ಆಗುವುದು.
  4. ಒಪ್ಪಂದದ ಪ್ರಕಾರ ಸುಂಕ ದರ ಕೋಟದಡಿಯಲ್ಲಿ 2,500 ಟನ್ ಯಾವುದೇ ಸುಂಕವಿಲ್ಲದೆ ಶ್ರೀಲಂಕಾ ಭಾರತಕ್ಕೆ ರಫ್ತು ಮಾಡಬಹುದು.
  5. ಶ್ರೀಲಂಕಾದಲ್ಲಿ ಕಾಳು ಮೆಣಸಿನ ಉತ್ಪಾದನೆ ಸುಮಾರು 25,000 ಟನ್,ಅಲ್ಲಿ ಇದರ ಬಳಕೆ ಕಡಿಮೆ ಇರುವುದರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ ರಫ್ತುಗೆ ಆದ್ಯತೆ ನೀಡುತ್ತದೆ.ಅಧಿಕೃತವಾಗಿ ಸುಮಾರು ಹನ್ನೊಂದು ಸಾವಿರ ಟನ್ ಅಲ್ಲಿಂದ 2023 ರ ಸಮಯದಲ್ಲಿ ಆಮದು ಆಗಿತ್ತು.ಇದೀಗ ಈ ಪ್ರಮಾಣ ಸುಮಾರು ಇಪ್ಪತೈದು ಸಾವಿರ ಟನ್ ಎಂಬುದಾಗಿ ಹೇಳಲಾಗುತ್ತಿದೆ.
  6. ವಿಯೆಟ್ನಾಮ್ನ ಕಾಳು ಮೆಣಸು ಶ್ರೀಲಂಕಾಗೆ ಬಂದು ಅಲ್ಲಿಂದ ಭಾರತಕ್ಕೆ ರಫ್ತು ಆಗುತ್ತಿದೆ ಎಂಬ ಶಂಕೆ ಇದೆ.ಇದಕ್ಕೆ ಮುಖ್ಯ ಕಾರಣ ಶ್ರೀಲಂಕಾದ ಉತ್ಪಾದನೆ ಸುಮಾರು 25,000 ಟನ್.ಇದರಲ್ಲಿ ಆಂತರಿಕ ಬೇಡಿಕೆ ಪೂರಯಿಸಿ ರಫ್ತು ಕೂಡ ಆಗಬೇಕು.
  7. ಶ್ರೀಲಂಕಾದಿಂದ ಕಾಳು ಮೆಣಸನ್ನು ವಿಶೇಷ ಆರ್ಥಿಕ ವಲಯ ಮತ್ತು ಮರು ರಫ್ತುಗಾಟಕಗಳು ಆಮದು ಮಾಡಿಕೊಳ್ಳಬಹುದಾಗಿದ್ದು ಅದನ್ನು ಆರು ತಿಂಗಳುಗಳ ಕಾಲ ಶೇಖರಣೆ ಮಾಡಿ ಕೊಳ್ಳಬೇಕು.
  8. ಶ್ರೀಲಂಕಾದ ಉತ್ಪಾದನೆ 25,000 ಟನ್,ಅಲ್ಲಿ ಅದರ ಬಳಕೆ ಸುಮಾರು 15,000 ಟನ್,ಇನ್ನು ಭಾರತಕ್ಕೆ ಇದರ ರಫ್ತು ಸುಮಾರು ಹನ್ನೊಂದು ಸಾವಿರ ಟನ್ ಆದರೆ,ಅದು ಜರ್ಮನಿ,ಸ್ಪೇನ್,ಸಂಯುಕ್ತ ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲು ಎಲ್ಲಿಂದ ತರುತ್ತವೆ,ಎಂಬ ಪ್ರಶ್ನೆ ಮೂಡುವುದು ಸಹಜ.ಇಲ್ಲಿ ಸಿಗುವ ಉತ್ತರ ಅದು ವಿಯಟ್ನಾಮಿನಿಂದ.
  9. ಶ್ರೀಲಂಕಾಕ್ಕೆ ವಿಯಟ್ನಾಮ್ನಿಂದ ಕಳಪೆ ಗುಣಮಟ್ಟದ ಕರಿಮೆಣಸು ಬಂದು ಅದು ಭಾರತಕ್ಕೆ ಮೂಲ ರೂಪದಲ್ಲಿ ಇಲ್ಲವೇ ಪುಡಿಯಾಗಿ ಭಾರತಕ್ಕೆ ಪ್ರವೇಶಿಸಿ ಇಲ್ಲಿ ಅದು ಕಲಬೆರಕೆ ಮಾಡಲು ಅವಕಾಶ ಕಲ್ಪಿಸುತ್ತಿದೆ. ಇದೇ ಸ್ಥಿತಿ 2000, 2005 ಮತ್ತು ಮುಂದೆ ಹಲವು ವರ್ಷಗಳಲ್ಲಿ ಆದ ನಿದರ್ಶನಗಳಿವೆ.ಈ ರೀತಿ ಆಗಿದ್ದಾಗ ಕೇರಳ ಸರಕಾರ ಬೆಲೆ ಕುಸಿತವನ್ನು ತಡೆಗಟ್ಟಲು ಬೆಂಬಲ ಬೆಲೆ ಕೊಟ್ಟದ್ದು ಇದೆ.
  10. ಅಮೆರಿಕಾ ಮತ್ತು ಕೆನಡಾದ ಮಾರುಕಟ್ಟೆಯಲ್ಲಿ ಕಾಳು ಮೇಣಸಿಗೆ ಬೇಡಿಕೆ ಕುಸಿದಿದ್ದು,ಅಲ್ಲಿಗೆ ಭಾರತ ಇದನ್ನು ರಫ್ತು ಮಾಡುತ್ತಿದೆ.
  11. ಮಾರುಕಟ್ಟೆಯಲ್ಲಿ ಸ್ಪೆಕುಲೇಷನ್ ಸರ್ವೇ ಸಾಮಾನ್ಯ.ಇದು ಇಲ್ಲಿಯೂ ಆಗುತ್ತಿದೆ.ಬೆಲೆ ಇನ್ನಷ್ಟು ಏರಬಹುದು ಆದ್ದರಿಂದ ನಾನಾ ಸಬೂಬು ಹೇಳಿ ಬೆಲೆ ಏರಿಳಿತ ಮಾಡುವ ಪ್ರಕ್ರಿಯೆ ಸಾಮಾನ್ಯ ಸಂಗತಿ ಆಗಿದೆ.ಇನ್ನು ಕಾಳುಮೆಣಸಿನ ಭವಿಷ್ಯದ ಮಾರುಕಟ್ಟೆ ರುಪಾಯಿ ಒಂದು ಸಾವಿರ ಎಂದು ಹೆಸರಿಸಿದ ಕಾರಣ ಇಲ್ಲಿ ಊಹಿಸುವಿಕೆ ಪ್ರಮುಖ ಪಾತ್ರ ವಹಿಸಬಹುದು.

ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ ಅದೇ ಆಗುತ್ತಿದ್ದರೂ ಇದೀಗ ಏರಿಳಿತಕ್ಕೆ ದಾರಿ ಆಗುತ್ತಿದೆ.ಕಾಳು ಮೆಣಸಿನ ಬೆಲೆ ಸಾಮಾನ್ಯವಾಗಿ ಜುಲೈನಿಂದ ಅಕ್ಟೋಬರ್,ನವೆಂಬರ್ ತನಕ ಏರು ಪ್ರವೃತ್ತಿಯನ್ನು ಈ ಮೊದಲು ತೋರಿಸುತ್ತಿದ್ದ ಕಾರಣ ಆ ಸಮಯದಲ್ಲಾದರೂ ಏರ ಬಹುದಾ ಎಂಬ ನಿರೀಕ್ಷೆ ಕೃಷಿಕರ ಮನದಲ್ಲಿದೆ.ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಇದು ಮಾರುಕಟ್ಟೆಗೆ ಪ್ರವೇಶ ಮಾಡಿದ್ದು,ಆದ್ದರಿಂದ ಮುಂದೆ ಪೂರೈಕೆ ಪ್ರಮಾಣ ಕಡಿಮೆ ಆಗಿ ಬೆಲೆ ಏರಿಕೆಗೆ ಅವಕಾಶ ಆಗಬಹುದೋ ಎಂಬ ವಾತಾವರಣ ಮಾರುಕಟ್ಟೆಯಲ್ಲಿ ಮೂಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

2 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

2 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

11 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

12 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

12 hours ago

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

21 hours ago