ಪಾನ್ ಮೂಲಕ ಅಡಿಕೆಯನ್ನು ಜಗಿಯಲು ಕೊಂಡೊಯ್ದ ವ್ಯಕ್ತಿಯನ್ನು ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಪಾಕಿಸ್ತಾನ ಮೂಲಕ ವ್ಯಕ್ತಿ ಟರ್ಕಿಗೆ ತೆರಳುವ ಸಂದರ್ಭ ಬೀಡಾವನ್ನು ಜೊತೆಯಲ್ಲಿ ಕೊಂಡೊಯ್ದಿದ್ದ. ಟರ್ಕಿ ದೇಶದ ನಿಯಮದ ಪ್ರಕಾರ ಅಡಿಕೆ ಬಳಕೆ ನಿಷೇಧ. ಹೀಗಾಗಿ ಕಾನೂನು ಉಲ್ಲಂಘಿಸಿದಕ್ಕಾಗಿ ವ್ಯಕ್ತಿಯನ್ನು ಬಂಧಿಸಿ 6 ತಿಂಗಳು ಜೈಲು ಶಿಕ್ಷೆಯನ್ನು ಟರ್ಕಿ ದೇಶ ವಿಧಿಸಿದೆ.
ಟರ್ಕಿಯಲ್ಲಿ ಪಾಕಿಸ್ತಾನಿ ವ್ಯಕ್ತಿಯ ಬಂಧನದ ನಂತರ, ಟರ್ಕಿಯಲ್ಲಿರುವ ಪಾಕಿಸ್ತಾನಿ ದೂತಾವಾಸವು ಟರ್ಕಿಗೆ ಆಗಮಿಸುವ ಎಲ್ಲಾ ನಾಗರಿಕರು ಜೊತೆಯಲ್ಲಿ ಅಡಿಕೆ ತಾರದಂತೆ ಪಾಕಿಸ್ತಾನದ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಲಾಹೋರ್ ನಿವಾಸಿ ಮುಹಮ್ಮದ್ ಓವೈಸ್ ಅವರನ್ನು ಖಾಸಗಿ ಕಂಪನಿಯಿಂದ ಟರ್ಕಿಗೆ ಕಳುಹಿಸಲಾಗಿತ್ತು. ಮುಹಮ್ಮದ್ ಓವೈಸ್ ಅವರು ತಮ್ಮ ಪ್ರವಾಸ ಸಂದರ್ಭ ಅಲ್ಲಿನ ಮಿತ್ರನಿಗೆ ಉಡುಗೊರೆಯಾಗಿ ಎರಡು ಪ್ಯಾಕೆಟ್ ಬೀಡಾ ಹಾಗೂ ಅಡಿಕೆಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಅಡಿಕೆಯನ್ನು ಟರ್ಕಿಯಲ್ಲಿ ಡ್ರಗ್ಸ್ ಎಂದು ಪರಿಗಣಿಸಲಾಗುತ್ತದೆ. ಮೊಹಮ್ಮದ್ ಓವೈಸ್‌ಗೆ ಟರ್ಕಿಯ ಕಾನೂನಿನ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹಾಗೂ ನಿಕಟವರ್ತಿಗಳು ಹೇಳಿರಲಿಲ್ಲ. ಕಾನೂನು ಅರಿಯದ ಕಾರಣ ಈ ಸಮಸ್ಯೆಯಾಗಿದೆ, ಹೀಗಾಗಿ ದೇಶದ ನಾಗರಿಕನ್ನು ಬಿಡುವಂತೆ ಇದೀಗ ಪಾಕಿಸ್ತಾನ ಪ್ರಧಾನಿ ಟರ್ಕಿಗೆ ಮನವಿ ಮಾಡಿದ್ದಾರೆ.
ಟರ್ಕಿಯಲ್ಲಿ ಅಡಿಕೆಯ ಬಳಕೆ ಕಾನೂನು ಬಾಹಿರವಾಗಿದೆ. ಅಡಿಕೆಯಲ್ಲಿ ಉತ್ತೇಜಕ ಅರೆಕೋಲಿನ್ ಇದೆ ಎಂದು ಈ ದೇಶ ಅಡಿಕೆ ಬಳಕೆ ನಿಷೇಧ ಮಾಡಿದೆ. ಅದೇ ರೀತಿ ಹಲವು ದೇಶಗಳಲ್ಲಿ ಅಡಿಕೆ ಬಳಕೆ ನಿಷೇಧ ಇದೆ. ಇನ್ನೂ ಕೆಲವು ದೇಶಗಳಲ್ಲಿ ಅಡಿಕೆ ತಿಂದು ಉಗುಳುವುದರ ಮೇಲೆ ನಿರ್ಬಂಧ ಇದೆ.
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…