#PesticidesEffect | ಅರಣ್ಯಾಧಿಕಾರಿ ಯೋಗೇಶ್ ನಾಯ್ಕ್ ಬಲಿ ಪಡೆದ ಕಳೆನಾಶಕ ಅಂತಿಂಥ ವಿಷವಲ್ಲ| ರೈತರೇ ಕಳೆನಾಶಕ ಬಳಕೆ ಕಡಿಮೆ ಮಾಡೋಣ… |

July 8, 2023
11:56 AM
ಯಾವುದೇ ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ,ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸುತ್ತವೆ. ಹೀಗಾಗಿ ಎಚ್ಚರಿಕೆ ಅಗತ್ಯ ಇದೆ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡ ಗ್ರಾಮದ ಉಪ ವಲಯ ಅರಣ್ಯಾಧಿಕಾರಿ ಯೋಗೇಶನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕ #PesticidesEffect ಅದೆಷ್ಟು ಘೋರ ವಿಷ #poision ಗೊತ್ತ? ಇದುವರೆಗೂ ಈ ವಿಷಕ್ಕೆ ಔಷಧಿಯನ್ನೇ ಕಂಡು ಹಿಡಿಯಲಾಗಿಲ್ಲ!.  ಈ ಬಗ್ಗೆ ನಾಗರಾಜ್ ಬೆಳ್ಳೂರು ಅವರು ಸವಿವರವಾಗಿ ಬರೆದಿದ್ದಾರೆ. ಹಾಗೆ ಇಂತಹ ಔಷಧಿಗಳನ್ನು ಬಳಸುತ್ತಿರುವ ಕೃಷಿಕರು, ರೈತರು ದಯವಿಟ್ಟು ಈ ಬಗ್ಗೆ ಗಮನಹರಿಸಿ.

Paraquat Dichloride ಎಂಬ ರಾಸಾಯನಿಕ ಸಂಯೋಜನೆಯಿಂದ ಕೂಡಿದ ಈ ಕಳೆನಾಶಕವನ್ನು ಈಗಾಗಲೇ ಅನೇಕ ದೇಶಗಳು ನಿಷೇಧಿಸಿವೆ. Gramoxone, Firestorm, Helmquat, Parazone Uniquat All clear Milquat Sabaa Kapiq ಇತ್ಯಾದಿ ಬ್ರಾಂಡ್ ಹೆಸರಿನಿಂದ ಹತ್ತಾರು ಕಂಪನಿಗಳು ಈ ವಿಷವನ್ನು ನಮ್ಮ ದೇಶದಲ್ಲಿ ಉತ್ಪಾದಿಸುತ್ತಿವೆ.

ಇದೊಂದು ಸಂಪರ್ಕ ಕಳೆನಾಶಕ (Contact Herbicide) ಅಂದರೆ, ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ,ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸಿ ಸಾವು ತರುತ್ತದೆ. ಬಹಳ ಆತಂಕದ ಸಂಗತಿ ಎಂದರೆ ಈ ಘನಘೋರ ವಿಷಕ್ಕೆ ಇದುವರೆಗೂ ಪ್ರತ್ಯೌಷಧ(Antidote) ಲಭ್ಯವಿಲ್ಲ! ಕೇವಲ ಒಂದೆರಡು ಮಿಲಿ ಕಳೆನಾಶಕ ದೇಹ ಸೇರಿದರೂ ಸಾವು ಖಚಿತ.

 

ಶುಂಠಿ ಬೆಳೆಯಿಂದ ಹಿಡಿದು ಅನೇಕ ಬೆಳೆಗಳಲ್ಲಿ ಕಳೆಗಳನ್ನು ಕೊಲ್ಲಲು ವ್ಯಾಪಕವಾಗಿ ಇದನ್ನು ಬಳಸುತ್ತಾರೆ, ಒಂದೆರಡು ಹನಿ ವಿಷ ದೇಹ ಸೇರಿದರೂ ಬಹು ಅಂಗಾಂಗಗಳು ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು, ಪಾರ್ಕಿನ್ಸನ್ ನಂತಹ ಕಾಯಿಲೆಗಳಿಗೂ ಆಹ್ವಾನ ನೀಡಬಹುದು.ರೈತರು ಇದನ್ನು ಉಪಯೋಗಿಸುವಾಗ ಸುರಕ್ಷಿತ ವಿಧಾನ ಅನುಸರಿಸಿ ಬಳಸಬೇಕು.ಸಿಂಪಡಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರ ನೀರನ್ನು ಸೇವಿಸಬಾರದು. ದೇಹಗಳಲ್ಲಿ ಗಾಯಗಳಿದ್ದರೆ ಕಳೆನಾಶಕದ ಸಂಪರ್ಕಕ್ಕೆ ಬರಲೇಬಾರದು. ಔಷಧಿಯೇ ಇಲ್ಲದ ಈ ವಿಷ ನಮ್ಮ ಜೀವಜಾಲದಲ್ಲಿ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ.

Advertisement
ಬರಹ :
ನಾಗರಾಜ್ ಬೆಳ್ಳೂರು
Nisarga Conservation Trust

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror